Ad Widget .

ಸಹ ಆಟಗಾರನ ಪ್ರೇಯಸಿ ಜೊತೆ ಸೆಕ್ಸೀ ಚಾಟ್| ಸಿಕ್ಕಿಬಿದ್ದ ಪಾಕ್ ಕ್ರಿಕೆಟಿಗ ಬಾಬರ್ ಅಜಮ್

ಸಮಗ್ರ ನ್ಯೂಸ್: ಸಹ ಆಟಗಾರನ ಪ್ರೇಯಸಿಯೊಬ್ಬಳ ಜೊತೆಗೆ ಸೆಕ್ಸೀ ಚಾಟ್ ಮಾಡಿ ಪಾಕ್ ಕ್ರಿಕೆಟಿಗ ಬಾಬರ್ ಅಜಮ್ ಸಿಕ್ಕಿ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

Ad Widget . Ad Widget .

ಬಾಬರ್​ ಅಜಮ್​ ಮಹಿಳೆಯೊಬ್ಬಳ ಜತೆ ವಿಡಿಯೊ ಕಾಲ್​ ಮಾಡಿ ಮಾತನಾಡುವ ಹಾಗೂ ಅವರಿಗೆ ಸಂದೇಶಗಳನ್ನು ಕಳುಹಿಸುತ್ತಿರುವ ವಿಡಿಯೊ ವೈರಲ್​ ಆಗಿದೆ. ವಿಡಿಯೊದಲ್ಲಿರುವ ಮಹಿಳೆ ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರನೊಬ್ಬನ ಪ್ರೇಯಸಿ ಎಂದೂ ಹೇಳಲಾಗಿದೆ.

Ad Widget . Ad Widget .

ಹಾಸಿಗೆ ಮೇಲೆ ಮಲಗಿಕೊಂಡಿರುವ ಬಾಬರ್ ಅಜಮ್​, ತಮ್ಮ ಜತೆ ಚಾಟ್​ ಮಾಡುವಂತೆ ಒತ್ತಾಯ ಮಾಡುತ್ತಿರುವುದು ಕಂಡು ಬಂದಿದೆ. ಅಲ್ಲದೆ, ವಿಡಿಯೊ ಕಾಲ್ ಮಾಡಿದರೆ, ನಿನ್ನ ಗೆಳೆಯ ಪಾಕಿಸ್ತಾನ ತಂಡದಲ್ಲಿ ಸದಾ ಸ್ಥಾನ ಪಡೆಯುವಂತೆ ನೋಡಿಕೊಳ್ಳುತ್ತೇನೆ ಎಂಬುದಾಗಿಯೂ ಭರವಸೆ ನೀಡುತ್ತಾರೆ.

ಬಾಬರ್ ಅಜಮ್​ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದೆ. ಸಾಕಷ್ಟು ಮಂದಿ ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್​ ಮಾಡಿಕೊಂಡು ಟೀಕೆ ವ್ಯಕ್ತಪಡಿಸಿದ್ದಾರೆ.

ಇವೆಲ್ಲದರ ನಡುವೆ ಬಾಬರ್ ಅಜಮ್​ ಅಭಿಮಾನಿಗಳು ಇದೊಂದು ಸುಳ್ಳು ಆರೋಪ ಎಂದಿದ್ದಾರೆ. ಬಾಬರ್​ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೆ ಹಾಗೂ ಅವರ ತೇಜೋವಧೆ ಮಾಡುವ ಉದ್ದೇಶದಿಂದ ನಕಲಿ ವಿಡಿಯೊ ಮಾಡಿ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ನಡುವೆ ಕಳೆದ ವರ್ಷ ಬಾಬರ್ ಅಜಮ್​ ವಿರುದ್ಧ ಹಮಿಜಾ ಮುಖ್ತರ್ ಎಂಬ ಮಹಿಳೆ ಲೈಂಗಿಕ ದೌರ್ಜನ್ಯದ ಆರೋಪ ಮತ್ತೆ ಸುದ್ದಿಯಾಗುತ್ತಿದೆ.

ಒಟ್ಟಾರೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ನಾಯಕತ್ವದ ವೈಫಲ್ಯಕ್ಕಾಗಿ ಟೀಕೆಗಳನ್ನು ಎದುರಿಸುತ್ತಿರುವ ಜೊತೆಗೆ ಈ ಲೈಂಗಿಕ ಆರೋಪಗಳನ್ನು ಎದುರಿಸಬೇಕಾಗಿದೆ.

Leave a Comment

Your email address will not be published. Required fields are marked *