Ad Widget .

ಭಾರೀ ಅಂತರದಲ್ಲಿ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾ; ಸರಣಿ‌ ಕ್ಲೀನ್ ಸ್ವೀಪ್

ಸಮಗ್ರ ನ್ಯೂಸ್: 3ನೇ ಏಕದಿನ ಪಂದ್ಯದಲ್ಲೂ ಲಂಕಾ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದ್ದು, ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಶತಕ ದಾಖಲಿಸಿದ್ದು, ಮುಹಮ್ಮದ್ ಸಿರಾಜ್ ಅವರ ಬೌಲಿಂಗ್ ಪರಾಕ್ರಮದ ನೆರವಿನಿಂದ ಭಾರತವು ಶ್ರೀಲಂಕಾ ವಿರುದ್ಧದ ಪಂದ್ಯವನ್ನು 317 ರನ್ಗಳ ಅಂತರದಲ್ಲಿ ಗೆದ್ದು ಬೀಗಿದೆ. ಭಾರತವು ಶ್ರೀಲಂಕಾ ವಿರುದ್ಧ ನಡೆದ 3 ಪಂದ್ಯಗಳನ್ನೂ ಗೆದ್ದುಕೊಂಡು ಕ್ಲೀನ್ ಸ್ವೀಪ್ ಸಾಧಿಸಿದೆ.

Ad Widget . Ad Widget .

ಭಾರತ ನೀಡಿದ್ದ 391 ರನ್ ಗುರಿಯನ್ನು ಹಿಮ್ಮೆಟ್ಟಿದ ಶ್ರೀಲಂಕಾಗೆ 22 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 73 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನ್ಯೂಝಿಲ್ಯಾಂಡ್ ತಂಡವು ಐರ್ಲ್ಯಾಂಡ್ ವಿರುದ್ಧ 290 ರನ್ ಗಳ ಅಂತರದ ದಾಖಲೆ ಜಯವನ್ನು ಹಿಂದಿಕ್ಕುವ ಮೂಲಕ ಟೀಮ್ ಇಂಡಿಯಾ ಭಾರೀ ಅಂತರದ ಜಯದ ದಾಖಲೆಯನ್ನು ಬರೆದುಕೊಂಡಿದೆ.

Ad Widget . Ad Widget .

ಸಿರಾಜ್(4-32) ಉತ್ತಮ ಪ್ರದರ್ಶನ ನೀಡಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿಕೊಂಡರು. ಮುಹಮ್ಮದ್ ಶಮಿ(2-20) ಹಾಗೂ ಕುಲದೀಪ್ ಯಾದವ್(2-16) ತಲಾ 2 ವಿಕೆಟ್ ಪಡೆದರು.

Leave a Comment

Your email address will not be published. Required fields are marked *