ನೇಪಾಳದಲ್ಲಿ ಭೀಕರ ವಿಮಾನ ಅವಘಡ| 72 ಮಂದಿ ಸಜೀವ ದಹನ

ಸಮಗ್ರ ನ್ಯೂಸ್: ಕಣಿವೆ ರಾಷ್ಟ್ರ ನೇಪಾಳದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದ್ದು, ಸಿಬ್ಬಂದಿ ಸೇರಿ 72 ಮಂದಿ ಸಜೀವ ದಹನವಾಗಿದ್ದಾರೆ. ಲ್ಯಾಂಡಿಂಗ್​​ ಮುನ್ನ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನ ಲ್ಯಾಂಡಿಂಗ್​​ಗೆ 5 ನಿಮಿಷ ಇರುವಾಗಲೇ ಹೊತ್ತಿಉರಿದಿದೆ. ವಿಮಾನ ನೋಡ-ನೋಡುತ್ತಿದ್ದಂತೆ ನೆಲಕ್ಕಪ್ಪಳಿಸಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 72 ಮಂದಿಯೂ ಸಜೀವ ದಹನವಾಗಿರುವ ಮಾಹಿತಿ ಲಭಿಸಿದೆ.

Ad Widget ... ..

68 ಪ್ರಯಾಣಿಕರ ಜೊತೆ ನಾಲ್ವರು ಸಿಬ್ಬಂದಿ ಕೂಡಾ ಸಜೀವ ದಹನ, ವಿಮಾನ ಕೆಳಕ್ಕಪ್ಪಳಿಸುತ್ತಿದ್ದಂತೆ ಬಾನೆತ್ತರಕ್ಕೆ ಹೊತ್ತಿ ಬೆಂಕಿ ಉರಿದಿದೆ. ವಿಮಾನ ಕಠ್ಮಂಡುವಿನಿಂದ ಪೋಖರಾಗೆ ತೆರಳುತ್ತಿತು.

Ad Widget

ಪೋಖರದ ರನ್​ವೇನಲ್ಲೇ ವಿಮಾನ ಪತನವಾಗಿದೆ. ದುರಂತದಲ್ಲಿ 72 ಪ್ರಯಾಣಿಕರು ಸಜೀವ ದಹನವಾಗಿದೆ. ವಿಮಾನ ದುರಂತದಲ್ಲಿ ಐವರು ಭಾರತೀಯರ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಒಂದೇ ಕುಟುಂಬದ ಐವರ ಸಾವು, ರಷ್ಯಾದ ನಾಲ್ವರು, ಜರ್ಮನಿಯ ಇಬ್ಬರು ಸೇರಿ 72 ಮಂದಿ ಸಾವನ್ನಪ್ಪಿದ್ದಾರೆ.

Leave a Comment

Your email address will not be published. Required fields are marked *