Ad Widget .

ದನದ ಹಾಲಿಗಿಂತ ಮಿಗಿಲಾದ ತೆಂಗಿನ ಹಾಲು| ಹೀಗೆ ಸೇವಿಸಿದರೆ ಆಗುತ್ತೆ ಆರೋಗ್ಯದಲ್ಲಿ ಬದಲಾವಣೆ

ಸಮಗ್ರ ನ್ಯೂಸ್: ತೆಂಗಿನಕಾಯಿ ಹಾಲು ಪೋಷಕಾಂಶಗಳ ಆಗರ, ಮನೆಯಲ್ಲಿ ಮಕ್ಕಳಿದ್ದರೆ ಅಥವಾ ಹಿರಿಯರಿದ್ದರೆ ಅವರಿಗೆ ನಿತ್ಯ ಅಥವಾ ಎರಡು ದಿನಕ್ಕೊಮ್ಮೆ ತೆಂಗಿನಹಾಲು ಕುಡಿಸಿ ನೋಡಿ. ಇದರಿಂದ ಹಲವು ಸಮಸ್ಯೆಗಳು ದೂರವಾಗಿ ಮಕ್ಕಳು ಬಲಿಷ್ಠರಾಗಿ, ಬಲವಾಗಿ ಬೆಳೆಯುತ್ತಾರೆ.

Ad Widget . Ad Widget .

ತೆಂಗಿನಕಾಯಿ ಮಿಕ್ಸಿಯಲ್ಲಿ ರುಬ್ಬುವಾಗ ಎರಡು ಏಲಕ್ಕಿ, ಎರಡು ಒಣ ಖರ್ಜೂರ ಸೇರಿಸಿ ರುಬ್ಬಿ.ಇದನ್ನು ಬಿಳಿ ವಸ್ತ್ರದಲ್ಲಿ ಸೋಸಿ. ಇದರಲ್ಲಿ ಫಂಗಲ್ ನಿವಾರಕ ಗುಣವಿದ್ದು ಇದು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಲ್ಲಿರುವ ಕ್ಯಾಲ್ಸಿಯಂ, ಫಾಸ್ಪರಸ್ ಮೂಳೆಗಳನ್ನು ಬಲಗೊಳಿಸುತ್ತವೆ.

Ad Widget . Ad Widget .

ಇದು ಮೆದುಳನ್ನೂ ಚುರುಕುಗೊಳಿಸುತ್ತದೆ. ಇದನ್ನು ನಿತ್ಯ ಸೇವಿಸುವುದರಿಂದ ನಿಮ್ಮ ತ್ಚಚೆಯೂ ಕಾಂತಿ ಪಡೆದುಕೊಳ್ಳುತ್ತದೆ. ಒಂದು ಚಮಚ ತೆಂಗಿನ ಹಾಲಿಗೆ ನಾಲ್ಕು ಹನಿ ಜೇನು ಹಾಕಿ ಮುಖಕ್ಕೆ ಮಸಾಜ್ ಮಾಡಿಕೊಂಡರೆ ಮುಖ ಹೊಳಪು ಪಡೆದುಕೊಳ್ಳುತ್ತದೆ.

ಸುಸ್ತು, ಆಯಾಸ, ರಕ್ತಹೀನತೆ ಸಮಸ್ಯೆ ಇರುವವರು ನಿತ್ಯ ಇದನ್ನು ಸೇವಿಸಿ. ರುಚಿ ಹೆಚ್ಚು ಬೇಕು ಎನಿಸಿದರೆ ಸಣ್ಣ ತುಂಡು ಬೆಲ್ಲ ಸೇರಿಸಿ. ಯಾವುದೇ ಅಡ್ಡ ಪರಿಣಾಮಗಳಿಲ್ಲದ ತೆಂಗಿನಹಾಲು ಸೇವನೆ ದನದ ಹಾಲಿನ ಸೇವನೆಗಿಂತಲೂ ಹೆಚ್ಚಿನ ಪ್ರಯೋಜನಗಳನ್ನು ಕೊಡುವುದನ್ನು ನೀವೇ ಕಾಣಬಹುದು.

Leave a Comment

Your email address will not be published. Required fields are marked *