Ad Widget .

ಮಕರ ಜ್ಯೋತಿ ದರ್ಶನ| ಶಬರಿಮಲೆಯಿಂದ ನೇರಪ್ರಸಾರ

ಸಮಗ್ರ ನ್ಯೂಸ್: ಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಈ ವರ್ಷದ ಮಕರ ಜ್ಯೋತಿ ದರ್ಶನಕ್ಕೆ ಸಿದ್ಧತೆ ನಡೆದಿದೆ. ಇಂದು (ನ.14) ಮುಸ್ಸಂಜೆ ಮಕರ ಜ್ಯೋತಿ ದರ್ಶನ ಹಾಗೂ ಮಕರ ಸಂಕ್ರಮಣ ಪೂಜೆ ನಡೆಯಲಿದೆ.

Ad Widget . Ad Widget .

ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಜನವರಿ14ರ ರಾತ್ರಿ 8.45ಕ್ಕೆ ಮಕರ ಸಂಕ್ರಮಣ ಪೂಜೆ ನಡೆಯಲಿದೆ. ಇದಕ್ಕೂ ಮುನ್ನ ಮುಸ್ಸಂಜೆ 6.30ಕ್ಕೆ ದೀಪಾರಾಧನೆ ನಡೆಯಲಿದೆ. ಇದೇ ವೇಳೆ ದೂರದ ಪೊನ್ನಂಬಲ ಮೇಡಿನಲ್ಲಿ ಮಕರ ಜ್ಯೋತಿ ದರ್ಶನವಾಗುತ್ತದೆ. ಆಕಾಶದಲ್ಲಿ ನಕ್ಷತ್ರ ಗೋಚರಿಸುತ್ತದೆ. ಅಯ್ಯಪ್ಪನ ಗರ್ಭಗುಡಿ ಮೇಲೆ ಗರುಡ ಪ್ರದಕ್ಷಿಣೆ ನಡೆಯುತ್ತದೆ.

Ad Widget . Ad Widget .

ಶಬರಿಮಲೆ ಸನ್ನಿಧಾನಂ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮಕರಜ್ಯೋತಿ ದರ್ಶನವಾಗಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಬೀಡು ಬಿಟ್ಟಿದ್ದಾರೆ. ತಿರುವಾಭರಣ ಮೆರವಣಿಗೆ ಸಂಜೆ 6.15ಕ್ಕೆ ಸನ್ನಿಧಾನಂ ತಲುಪಲಿದೆ. 6:30ಕ್ಕೆ ತಿರುವಾಭರಣ ಸಹಿತ ದೀಪಾರಾಧನೆ ನಡೆಯುತ್ತದೆ. ನಂತರ ಪೊನ್ನಂಪಲಮೇಡ್‌ನಲ್ಲಿ ಮಕರಜ್ಯೋತಿ ದರ್ಶನವಾಗುವುದು.

ನೇರಪ್ರಸಾರಕ್ಕಾಗಿ ಕೆಳಗಿನ ಲಿಂಕ್ ಬಳಸಿ; ಕೃಪೆ: ಡಿಡಿ ಮಲೆಯಾಳಂ

ಮಕರ ಸಂಕ್ರಮಣ ಪೂಜೆಗಾಗಿ ಅಯ್ಯಪ್ಪ ದೇವಾಲಯದಲ್ಲಿ ನಿನ್ನೆಯಿಂದಲೇ ತಯಾರಿ ನಡೆಯುತ್ತಿದೆ. ನಿನ್ನೆ ಶುದ್ಧಿಕ್ರಿಯೆಗಳು ನಡೆದವು. ಮೊನ್ನೆ ಪ್ರಸಾದ ಶುದ್ಧಿ ಕ್ರಿಯೆ ನಡೆಯಿತು. ಇಂದು ರಾತ್ರಿ ಮಕರ ಸಂಕ್ರಮಣ ಪೂಜೆ ಬಳಿಕ ಮಾಳಿಗಪುರತ್ತಮ್ಮ ದೇವರು ಅಯ್ಯಪ್ಪ ಸನ್ನಿಧಿಗೆ ಆಗಮಿಸಿವುದು ಸಂಪ್ರದಾಯ. ಜನವರಿ 15ರಿಂದ 19ರ ತನಕ ಮೆಟ್ಟಿಲ ಪೂಜೆ ನಡೆಯಲಿದೆ. 18ರಂದು ಭಸ್ಮಾಭಿಷೇಕ ಮತ್ತು 19ರಂದು ಗುರುಪೂಜೆ ನಡೆಯಲಿದೆ. ಜ.20ಕ್ಕೆ ಪಂದಳ ರಾಜ ಪ್ರತಿನಿಧಿ ಅಯ್ಯಪ್ಪ ದರ್ಶನ ಪಡೆದ ಬಳಿಕ ಜನವರಿ 20ರಂದು ದೇವಸ್ಥಾನದ ಬಾಗಿಲು ಮುಚ್ಚುತ್ತದೆ. ಭಕ್ತರು ಜ.19ರ ತನಕ ಮಾತ್ರವೇ ಅಯ್ಯಪ್ಪ ದರ್ಶನ ಪಡೆಯಬಹುದಾಗಿದೆ.

Leave a Comment

Your email address will not be published. Required fields are marked *