Ad Widget .

ಬೆಂಗಳೂರಿನ ಪಿಜಿಯಲ್ಲಿ ಕನ್ನಡತಿ ಮೇಲೆ‌ ಕೇರಳದ‌ ಯುವತಿಯಿಂದ ಹಲ್ಲೆ

ಸಮಗ್ರ ನ್ಯೂಸ್: ನಡುರಾತ್ರಿಯಲ್ಲಿ ಮೊಬೈಲ್​ ಬಳಸಿದ ಆರೋಪದ ಮೇಲೆ ವೈದ್ಯೆಯೊಬ್ಬಳಿಗೆ ಕೇರಳ ಮೂಲದ ಯುವತಿ ಥಳಿಸಿರುವ ಘಟನೆ ಬಿಟಿಎಂ ಲೇಔಟ್​ನ ಪಿಜಿಯೊಂದರಲ್ಲಿ ನಡೆದಿದೆ. ಜನವರಿ 10 ರಂದು ನಡುರಾತ್ರಿ ವೈದ್ಯೆ ಮೇಲೆ ಹಲ್ಲೆ ಮಾಡಿದ್ದು, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Ad Widget . Ad Widget .

ಇಂದಿರಾ ನಗರ ಖಾಸಗಿ ಕಂಪೆನಿಯಲ್ಲಿ ಹೆಚ್.ಆರ್. ಮ್ಯಾನೇಜರ್ ಆಗಿರುವ ಆರೋಪಿತ ಯುವತಿ ಅಶೀಲ ಎಂಬಾಕೆ ಬಿಬಿಎಂಪಿ ವೈದ್ಯೆಯಾಗಿರುವ ಡಾ.ಸೃಷ್ಟಿ ನಡುವೆ ನಡುರಾತ್ರಿ ಮೊಬೈಲ್​ ಬಳಸುವ ಕಾರಣಕ್ಕೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಗಲಾಟೆ ತಾರಕಕ್ಕೆ ಏರಿಕೆ ಈ ವೇಳೆ ಅಶೀಲ ವೈದ್ಯೆ ಸೃಷ್ಟಿ ಮೇಲೆ ಹಲ್ಲೆ ಮಾಡಿದ್ದಾಳೆ.

Ad Widget . Ad Widget .

ಈ ಘಟನೆಯಿಂದ ನೊಂದ ಯುವತಿ ಡಾ.ಸೃಷ್ಟಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್ಲೋಡ್.ಮಾಡಿದ್ದಾಳೆ. ಕನ್ನಡ ಭಾಷಿಕರ ಬಗ್ಗೆ ನಿಂದಿಸಿರುವ ಆರೋಪ ಮಾಡಿದ್ದಾಳೆ.

ಮೈಕೋಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೂರು ದಾಖಲಾಗಿದೆ. ಹಲ್ಲೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leave a Comment

Your email address will not be published. Required fields are marked *