ವಿದ್ಯಾಕಾಶಿಯಲ್ಲಿಂದು ರಾಷ್ಟ್ರೀಯ ಯುವಜನೋತ್ಸವ| ಪ್ರಧಾನಿ ಮೋದಿ ಭರ್ಜರಿ‌ ರೋಡ್ ಶೋ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದು ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ರೋಡ್​ಶೋ ಮಾಡುವುದು ಫೈನಲ್​ ಆಗಿದೆ. ಅವಳಿ ನಗರದಲ್ಲಿ ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಯುವಜನೋತ್ಸವ ನಡೆಯುತ್ತಿದೆ. 5 ದಿನಗಳ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ನೆಹರೂ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ. ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಹುಬ್ಬಳ್ಳಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

Ad Widget ... ..

2023ರ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದೆ ಬಿಜೆಪಿ. ಹಾಗಾಗಿ ಪ್ರಧಾನಿ ಮೋದಿ ಎಂಬ ಮ್ಯಾಜಿಕ್​ಮೆನ್​​ರನ್ನ ಕರೆಸಿ ಸಮಾವೇಶ ನಡೆಸುತ್ತಿದೆ. ಬರೀ ಸಮಾವೇಶ ಅಲ್ಲ, ಇಂದು ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿಯವ್ರ ರೋಡ್​ಶೋ ಕೂಡ ನಡೆಯೋದು ಖಚಿತವಾಗಿದೆ.

Ad Widget

ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸಲಿದ್ದು, ಏರ್​ಪೋರ್ಟ್​​ನಿಂದ ನೆಹರೂ ಮೈದಾನದವರೆಗೆ ಅಂದರೆ ಬರೋಬ್ಬರಿ ಏಳುವರೆ ಕಿಲೋಮೀಟರ್​ ರೋಡ್​​ಶೋನಲ್ಲಿ ಪ್ರಧಾನಿ ಮೋದಿ ಭಾಗಿಯಾಗುತ್ತಾರೆ.

Leave a Comment

Your email address will not be published. Required fields are marked *