ಸಮಗ್ರ ನ್ಯೂಸ್: ಕಾಸರಗೋಡಿನ ಪೆರ್ಲ ಸಮೀಪದ ಕಾಟುಕುಕ್ಕೆಯಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡ ಹಿನ್ನೆಲೆ ಇದೀಗ ಸೋಂಕು ಪತ್ತೆಯಾದ ಕೇಂದ್ರದಿಂದ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಮೂರು ತಿಂಗಳಿಗೆ ಹಂದಿ ಮಾಂಸಕ್ಕೆ ನಿಷೇಧ ಹೇರಲಾಗಿದೆ.
ಈ ಕೇಂದ್ರದಿಂದ ಹಂದಿ ಸಾಗಾಟ, ಹಂದಿ ಮಾಂಸ ಮಾರಾಟ, ಮಾಂಸ ಉತ್ಪನ್ನ ಮೊದಲಾದವುಗಳ ಮಾರಾಟ, ಸಾಗಾಟ ನಿಷೇಧಿಸಲಾಗಿದೆ. ಸೋಂಕು ಪತ್ತೆಯಾದ ಕೇಂದ್ರದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಹಂದಿಗಳನ್ನು ಕೊಂದು ಸಂಸ್ಕರಿಸಲಾಗುವುದು. ಇದಕ್ಕಾಗಿ ಜಿಲ್ಲಾ ಮೃಗ ಸಂರಕ್ಷಣಾ ಕಚೇರಿಯ ರಾಫಿಡ್ ರೆಸ್ಪಾನ್ಸ್ ತಂಡವನ್ನು ರಚಿಸಲಾಗಿದೆ.
ಪೊಲೀಸ್, ಕಂದಾಯ, ಸ್ಥಳಿಯಾಡಲಿತ ಸಂಸ್ಥೆ, ಮೋಟಾರು ವಾಹನ ಇಲಾಖೆ, ಅಗ್ನಿ ಶಾಮಕ ದಳ ಮೊದಲಾದವುಗಳ ನೆರವು ಪಡೆಯಲಾಗುವುದು. ಕಾಸರಗೋಡು ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿರವರ ನೇತೃತ್ವದಲ್ಲಿ ತಂಡ ಕಾರ್ಯಾಚರಿಸಲಿದೆ. ಈ ಬಗ್ಗೆ ಪೊಲೀಸ್, ಮೋಟಾರು ವಾಹನ ಇಲಾಖೆ ತಪಾಸಣೆ, ನಿಗಾ ಇರಿಸಲಿದೆ.