Ad Widget .

ದೇಶಕಟ್ಟುವ ಕಾರ್ಯಕ್ಕೆ ಯುವಜನತೆ ಮುಂದೆ ಬರಬೇಕಿದೆ; ಹಿರಿಯರು ದಾರಿ‌ ತೋರಬೇಕಿದೆ

ಸಮಗ್ರ ವಿಶೇಷ: ದೇಶದ ಸಮಗ್ರ ಇತಿಹಾಸದ ಭವಿಷ್ಯದ ಭಾರತವನ್ನು ಯುವ ಪೀಳಿಗೆಗೆ ಕಟ್ಟಿಕೊಡುವ ಕೆಲಸವನ್ನು ಯುವ ಮುಖಂಡರಾದವರು ಮಾಡಬೇಕಾಗುತ್ತದೆ. ವಿಶ್ವದಲ್ಲಿ ಬಹುದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಮಹಾನ್ ರಾಷ್ಟ್ರ ಎನಿಸಿಕೊಂಡ ಭಾರತದ ಯುವ ಸಮುದಾಯದಲ್ಲಿ ಅಗಾಧವಾದ ಶಕ್ತಿ ಇದೆ. ಆದರೆ, ಬೇರೆ ಬೇರೆ ಕಾರಣಕ್ಕೆ ರಾಜಕೀಯದಿಂದ ಯುವ ಪೀಳಿಗೆ ದೂರ ಸರಿಯುತ್ತಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.

Ad Widget . Ad Widget .

ರಾಷ್ಟ್ರ ನಿರ್ವಾಣದಲ್ಲಿ ಯುವ ಸಮೂಹದ ಪಾತ್ರ ಮಹತ್ತರವಾದದ್ದು. ಯುವಕರಲ್ಲಿ ಸುಪ್ತ ಪ್ರತಿಭೆ ಸಹ ಇರುತ್ತವೆ. ಅವುಗಳನ್ನು ಹೊರ ತೆಗೆಯುವ ಕೆಲಸ ಆಗಬೇಕಾಗಿದೆ. ಶಿಕ್ಷಣ, ಉದ್ಯೋಗದಲ್ಲಿ ಹೆಚ್ಚು ಅವಕಾಶ ಸಿಗಬೇಕು. ಬದುಕಿನ ಶಿಕ್ಷಣ, ನೈತಿಕ ಶಿಕ್ಷಣ ದೊರೆಯುವಂತಾಗಬೇಕು.

Ad Widget . Ad Widget .

ವಿಶ್ವವಿದ್ಯಾಲಯಗಳು ಯುವ ಸಮುದಾಯದ ಅಪೇಕ್ಷೆ, ನಿರೀಕ್ಷೆಯನ್ನು ಪೂರೈಸುವ ನೆಲೆಗಟ್ಟಿನಲ್ಲಿ ಪೂರಕವಾಗಿ ಸ್ಪಂದಿಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಗೆಲುವಿನ ದಾಪುಗಾಲು ಇಡುವ ನಿಟ್ಟಿನಲ್ಲಿ ಯುವ ಸಮೂಹವನ್ನು ಸಜ್ಜುಗೊಳಿಸುವ ಕೆಲಸಗಳಾಗಬೇಕು. ಈ ನಿಟ್ಟಿನಲ್ಲಿ ಪ್ರಭುತ್ವದ ಆದ್ಯತೆ ಯುವಕರ ಅಪೇಕ್ಷೆ, ನಿರೀಕ್ಷೆಗೆ ಪೂರಕವಾಗಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಾದೀತು.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಕಲುಷಿತಗೊಂಡಿದೆ. ಆದರೆ, ಯುವಕರಾದ ನಾವು ಕಲುಷಿತಗೊಳ್ಳಬಾರದು. ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಇನ್ನು ಯುವ ಸಮುದಾಯವನ್ನು ಸರಿದಾರಿಗೆ ತರುವ ಮಾರ್ಗದರ್ಶನ ಖಂಡಿತಾ ಇದೆ. ಯುವಕರಿಗೆ ಮಾರ್ಗದರ್ಶನ ಅತ್ಯಂತ ಮುಖ್ಯ.

ಕಂಪ್ಯೂಟರ್ ಯುಗದಲ್ಲಿ ಯುವ ಸಮುದಾಯ ದಾರಿ ತಪ್ಪುತ್ತಿದೆ ಎಂಬ ಆತಂಕ ಕೂಡ ಇದೆ. ಮೊಬೈಲ್ ಗೀಳು, ದುಶ್ಚಟಕ್ಕೆ ದಾಸರಾಗುವ, ಕ್ಷಣಿಕ ಆಸೆಗಳಿಗೆ ಆಕರ್ಷಿತರಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಮಾರ್ಗದರ್ಶಕರ ಅಗತ್ಯ ಎದ್ದು ಕಾಣಿಸುತ್ತಿದೆ.

ಸ್ವಾಮಿ ವಿವೇಕಾನಂದರು ಬದುಕಿದ್ದು 39 ವರ್ಷ ಮಾತ್ರ. ಆದರೆ, ಜೀವಮಾನದ ಸಮಸ್ತ ಕಾರ್ಯಗಳನ್ನು ಅವರ ಅಲ್ಪಾವಧಿಯಲ್ಲಿ ಮುಗಿಸಿದರು. ವಿಶ್ವವನ್ನು ಸುತ್ತಿದ್ದರು, ಭಾರತದ ಬಗ್ಗೆ ಜೀವನದ ಪ್ರತಿಯೊಂದು ಕ್ಷಣವೂ ಚಿಂತಿಸಿದರು. ಅವರ ಜೀವನವೇ ನಿತ್ಯ ಭಾರತಕ್ಕೆ ಬದುಕಿದ್ದು ಅಕ್ಷರಶಃ ಸತ್ಯ.

ಭಾರತ ಕಟ್ಟುವ ಕೆಲಸಕ್ಕೆ ಅದೆಷ್ಟೋ ಜನರನ್ನು ಸ್ವಾಮಿ ವಿವೇಕಾನಂದರು ಪ್ರೇರೆಪಿಸಿದರು. ನಾವು ಮಾಡುವ ಕೆಲಸದಲ್ಲಿ ಇಚ್ಛಾಶಕ್ತಿ ಇರಬೇಕು. ದುರ್ಬಲರೆಂದು ಯೋಚಿಸಿದರೆ ದುರ್ಬಲವಾಗುವಿರಿ, ಶಕ್ತಿವಂತರೆಂದು ಯೋಚಿಸಿದರೆ ಶಕ್ತಿವಂತರಾಗುವಿರಿ ಎಂದು ಪ್ರತಿಪಾದಿಸಿದ್ದರು.ಇಂತಹ ನುಡಿಗಳನ್ನು ಅರಿಯಲು ನಾವು ಸೋತಿದ್ದೇವೆ ಅನಿಸುತ್ತದೆ. ಭಾರತವನ್ನು ಬಲಿಷ್ಠಗೊಳಿಸುವ ಇಂತಹ ಚಿಂತನೆಯ ಅನಿವಾರ್ಯತೆ ಇದೆ.

Leave a Comment

Your email address will not be published. Required fields are marked *