Ad Widget .

ಜಮ್ಮು ಕಾಶ್ಮೀರ: ಕಂದಕಕ್ಕೆ ಉರುಳಿದ ವಾಹನ – ಮೂರು ಯೋಧರು ಮೃತ್ಯು

ಸಮಗ್ರ ನ್ಯೂಸ್: ನಿಯಮಿತ ಕಾರ್ಯಾಚರಣೆ ಕಾರ್ಯ ನಡೆಸುತ್ತಿದ್ದಾಗ ಸೈನಿಕರಿದ್ದ ವಾಹನ ಕಂದಕಕ್ಕೆ ಉರುಳಿ ಮೂವರು ಭಾರತೀಯ ಸೇನಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಮಚ್ಚಲ್ ಸೆಕ್ಟರ್‌ನ ಮುಂಚೂಣಿ ಪ್ರದೇಶದಲ್ಲಿ ಇಂದು ಬೆಳ್ಳಗ್ಗೆ ಸಂಭವಿಸಿದೆ.

Ad Widget . Ad Widget .

ಒಬ್ಬ ಜೂನಿಯರ್ ಕಮಿಷನ್ಡ್ ಆಫೀಸರ್ ಮತ್ತು ಇಬ್ಬರು ಇತರ ಶ್ರೇಣಿಯ ಅಧಿಕಾರಿಗಳನ್ನು ಹೊತ್ತ ವಾಹನವು ಹಿಮದಿಂದ ತುಂಬಿದ ಟ್ರ್ಯಾಕ್‌ನಿಂದ ಜಾರಿ ಆಳದ ಕಮರಿಗೆ ಬಿದ್ದು ಈ ಘಟನೆ ಸಂಭವಿಸಿದೆ ಎಂದು ಸೇನೆ ಮಾಹಿತಿ ನೀಡಿದೆ.

Ad Widget . Ad Widget .

ಇನ್ನು ಸೇನೆಯ ಚಿನಾರ್ ಕಾರ್ಪ್ಸ್ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಸೈನಿಕರ ಮೃತ ದೇಹಗಳನ್ನು ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *