ನಾಸಾದ ಮುಖ್ಯ ತಾಂತ್ರಿಕ ತಜ್ಞರಾಗಿ ಭಾರತೀಯ ಮೂಲದ ಎ.ಸಿ. ಚರಣಿಯಾ ನೇಮಕ

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕ ಬಾಹ್ಯಾಕಾಶ ಕೈಗಾರಿಕಾ ತಜ್ಞ ಎ.ಸಿ. ಚರಣಿಯಾ ಅವರನ್ನು ನಾಸಾದ ಮುಖ್ಯ ತಾಂತ್ರಿಕ ತಜ್ಞರಾಗಿ ನೇಮಕ ಮಾಡಲಾಗಿದೆ.

Ad Widget ... ..

ಇವರು ನಾಸಾ ಮುಖ್ಯ ಕಚೇರಿಯಲ್ಲಿ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಅವರಿಗೆ ತಾಂತ್ರಿಕ ನೀತಿ ಮತ್ತು ಕಾರ್ಯಕ್ರಮಗಳಿಗೆ ಪ್ರಧಾನ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ.

Ad Widget

‘ನಾಸಾ ಯೋಜನೆಯಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಚರಣಿಯಾ ಅವರು ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನವನ್ನು ನಿಭಾಯಿಸುವ ಪರಿಣತಿ ಹೊಂದಿರುವ ಅನುಭವಿ ನಾಯಕ’ ಎಂದು ನಾಸಾದ ತಂತ್ರಜ್ಞಾನ, ನೀತಿ ಮತ್ತು ಕಾರ್ಯತಂತ್ರ ಕುರಿತ ಸಹ ವ್ಯವಸ್ಥಾಪಕಿ ಭವ್ಯ ಲಾಲ್‌ ತಿಳಿಸಿದ್ದಾರೆ.

Leave a Comment

Your email address will not be published. Required fields are marked *