Ad Widget .

ಏಕದಿನ ಕ್ರಿಕೆಟ್ ನಲ್ಲೂ ಮುಂದುವರಿದ ಟೀಂ ಇಂಡಿಯಾ ಪರಾಕ್ರಮ| ಶ್ರೀಲಂಕಾ ವಿರುದ್ದ 67 ರನ್ ಜಯ

ಸಮಗ್ರ ನ್ಯೂಸ್: ಶ್ರೀಲಂಕಾ ವಿರುದ್ದದ ಟಿ20 ಸರಣಿ ಗೆಲುವಿನ ಬಳಿಕ ಇದೀಗ ಏಕದಿನ ಸರಣಿಯಲ್ಲಿ ಭಾರತ ಭರ್ಜರಿ ಶುಭಾರಂಭ ಪಡೆದಿದೆ. ಕೊಹ್ಲಿ ಸೆಂಚುರಿ, ಇತರರ ಸ್ಫೋಟಕ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ 373 ರನ್ ಸಿಡಿಸಿತ್ತು. ಇದಕ್ಕುತ್ತರವಾಗಿ ಶ್ರೀಲಂಕಾ 8 ವಿಕೆಟ್ ನಷ್ಟಕ್ಕೆ 306 ರನ್ ಸಿಡಿಸಿ ಸೋಲೊಪ್ಪಿಕೊಂಡಿದೆ.

Ad Widget . Ad Widget .

ಭಾರತ 67 ರನ್ ಗೆಲುವು ಸಾಧಿಸಿತು. ಲಂಕಾ ನಾಯಕ ದಸೂನ್ ಶನಕ ಗೆಲುವಿಗಾಗಿ ಕೊನೆಯ ಎಸೆತದವರೆಗೂ ಹೋರಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇದರೊಂದಿಗೆ 3 ಏಕದಿನ ಪಂದ್ಯದ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

Ad Widget . Ad Widget .

ವಿರಾಟ್ ಕೊಹ್ಲಿ ದಾಖಲೆಯ ಸೆಂಚುರಿ, ನಾಯಕ ರೋಹಿತ್ ಶರ್ಮಾ ಸಿಡಿಸಿದ 83 ರನ್, ಶುಬಮನ್ ಗಿಲ್ 70 ರನ್, ಕೆಎಲ್ ರಾಹುಲ್ 39, ಶ್ರೇಯಸ್ ಅಯ್ಯರ್ 28 ರನ್ ಕಾಣಿಕೆಯಿಂದ ಟೀಂ ಇಂಡಿಯಾ 373 ರನ್ ಸಿಡಿಸಿತ್ತು. 374 ರನ್ ಬೃಹತ್ ಟಾರ್ಗೆಟ್ ಶ್ರೀಲಂಕಾ ತಂಡಕ್ಕೆ ಕಠಿಣ ಸವಾಲು ಒಡ್ಡಿತು. ಪ್ರತಿ ಎಸೆತದಲ್ಲಿ ಅಬ್ಬರಿಸಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿದೆ. ಹೀಗಾಗಿ ಆಕ್ರಮಣಕಾರಿ ಆಟಕ್ಕೆ ಲಂಕಾ ಮುಂದಾಯಿತು. ಆದೆರೆ ಅವಿಶ್ಕೋ ಫರ್ನಾಂಡೋ 5 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಕುಸಾಲ್ ಮೆಂಡೀಸ್ ಡಕೌಟ್ ಆದರು.

ನಾಯಕ ದಸೂನ್ ಶನಕಗೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ವಾನಿಂಡು ಹಸರಂಗ 7 ಎಸೆತದಲ್ಲಿ 16 ರನ್ ಸಿಡಿಸಿ ಔಟಾದರು. ದುನೀತ್ ವೆಲ್ಲಾಲೆಗೆ ಡಕೌಟ್ ಆದರು. ಚಮಿಕಾ ಕರುಣಾರತ್ನೆ 14 ರನ್ ಕಾಣಿಕೆ ನೀಡಿದರು. 206ರನ್‌ಗಳಿಗ ಲಂಕಾ 8 ವಿಕೆಟ್ ಕಳೆದುಕೊಂಡಿತು. ಆದರೆ ದಸೂನ್ ಶನಕ ಬ್ಯಾಟಿಂಗ್ ಲಂಕಾ ತಂಡದ ಹೋರಾಟವನ್ನು ಮತ್ತ ಚುರುಕುಗೊಳಿಸಿತು.

ದಸೂನ್ ಶನಕ ದಿಟ್ಟ ಹೋರಾಟ ಲಂಕಾವನ್ನು ಹೀನಾಯ ಸೋಲಿನಿಂದ ಪಾರು ಮಾಡಿತು. ದಸೂನ್ ಜೊತೆಗೆ ಒರ್ವ ಬ್ಯಾಟ್ಸ್‌ಮನ್ ಸಾಥ್ ಸಿಕ್ಕಿದರೂ ಪಂದ್ಯಗ ಗತಿ ಬದಲಾಗುತ್ತಿತ್ತು. ಅಂತಿಮ ಎಸೆದಲ್ಲಿ ಭರ್ಜರಿ ಸಿಕ್ಸರ್ ಮೂಲಕ ದಸೂನ್ ಶನಕ ಸೆಂಚುರಿ ಪೂರೈಸಿದರು. ದಸೂನ್ ಶನಕ 88 ಎಸತೆದಲ್ಲಿ ಅಜೇಯ 108 ರನ್ ಸಿಡಿಸಿದರು. ಇತ್ತ ಶ್ರೀಲಂಕಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 306 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಭಾರತ 67 ರನ್ ಗೆಲುವು ದಾಖಲಿಸಿತು.

Leave a Comment

Your email address will not be published. Required fields are marked *