Ad Widget .

ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದ ವಿರಾಟ್ ಕೊಹ್ಲಿ| ಸಚಿನ್ ದಾಖಲೆ ಮುರಿಯಲು ಇನ್ನೈದೇ ಶತಕ ಬಾಕಿ|

ಸಮಗ್ರ ನ್ಯೂಸ್: ಕಿಂಗ್ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 73ನೇ ಶತಕದ ದಾಖಲಿಸಿದ ಸಾಧನೆ ಮಾಡಿದ್ದಾರೆ. ಗುವಾಹಟಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 80 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು.

Ad Widget . Ad Widget .

ವಿರಾಟ್ ಕೊಹ್ಲಿಗೆ ಇದು‌ 44ನೇ ಶತಕವಾಗಿದ್ದು, ಸಚಿನ್ ಗಳಿಸಿದ ಅತೀ ಹೆಚ್ಚು ಶತಕಗಳ ವಿಶ್ವದಾಖಲೆ ಮುರಿಯಲು ಕೇವಲ 5 ಶತಕ ಮಾತ್ರ ಬಾಕಿಯಿದೆ. ಕೊಹ್ಲಿಗೆ ಇದು ತವರಿನಲ್ಲಿ 20ನೇ ಶತಕವಾಗಿದೆ. ಸಚಿನ್ ತೆಂಡೂಲ್ಕರ್ ಈ ಸಾಧನೆ ಮಾಡಲು 164 ಇನಿಂಗ್ಸ್ ಆಡಿದರೆ, ಕೊಹ್ಲಿ ಕೇವಲ 102 ಪಂದ್ಯಗಳಲ್ಲಿ ಈ ದಾಖಲೆ ಮುರಿದಿದ್ದಾರೆ.

Ad Widget . Ad Widget .

ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ 9ನೇ ಶತಕ ಸಿಡಿಸಿದರು. ಅಲ್ಲದೇ ಸಚಿನ್ ತೆಂಡೂಲ್ಕರ್ ಶ್ರೀಲಂಕಾ ವಿರುದ್ಧ ಅತೀ ಹೆಚ್ಚು ಶತಕಗಳ ದಾಖಲೆಯನ್ನು ಸರಿಗಟ್ಟಿದರು. ವಿರಾಟ್ ಕೊಹ್ಲಿ ಈ ಸಾಧನೆಯನ್ನು 2 ತಂಡಗಳ ವಿರುದ್ಧ ಮಾಡಿದ ಮೊದಲಿಗರಾಗಿದ್ದಾರೆ.

ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ತಲಾ 9 ಶತಕಗಳು ಬಂದಿವೆ. ಇದೀಗ 1 ಶತಕ ಬಾರಿಸಿದರೆ ಒಂದೇ ತಂಡದ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ ವಿಶ್ವದಾಖಲೆ ಬರೆಯಲಿದ್ದಾರೆ.

Leave a Comment

Your email address will not be published. Required fields are marked *