Ad Widget .

ಬಿಳಿಕೂದಲಿನ ಸಮಸ್ಯೆಯೇ? ಇಲ್ಲಿದೆ ಆರೋಗ್ಯಕರ ಸರಳ ಪರಿಹಾರ

ಸಮಗ್ರ ನ್ಯೂಸ್: ನಾನಾ ಸೋಪ್‌, ಶ್ಯಾಂಪೂ, ಕಂಡಿಷನರ್‌ಗಳ ಬಳಕೆಯಿಂದ ಇಂದು ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದ ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸಲು ಮನೆಯಲ್ಲೇ ಕೆಲವೊಂದು ಮದ್ದುಗಳನ್ನು ತಯಾರಿಸಿ ಉಪಯೋಗಿಸುವುದು ಉತ್ತಮ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅರ್ಧ ಕಪ್ ಹಸಿ ಕರಿಬೇವಿನ ಎಲೆಗಳನ್ನು ಸ್ವಚ್ಛಗೊಳಿಸಿ, ಅರ್ಧ ಕಪ್‌ ಶುದ್ಧ ತೆಂಗಿನ ಎಣ್ಣೆ ತೆಗೆದುಕೊಂಡು ಅದರಲ್ಲಿ ಚೆನ್ನಾಗಿ ಕುದಿಸಬೇಕು. ಎಣ್ಣೆಯ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಹೀಗೆ ಮಾಡಬೇಕು. ಇದು ತಣ್ಣಗಾದ ನಂತರ ಕೂದಲಿನ ಬೇರುಗಳಿಗೆ ಈ ಮಿಶ್ರಣವನ್ನು ಹಚ್ಚಿ ಮಸಾಜ್ ಮಾಡಬೇಕು.

Ad Widget . Ad Widget . Ad Widget .

ತಲೆ ಕೂದಲಿನ ಬೇರುಗಳಿಗೆ ಎಣ್ಣೆ ತಲುಪಬೇಕು. ಅರ್ಧ ಗಂಟೆ ನಂತರ ತೊಳೆದುಕೊಳ್ಳಬೇಕು. ಇದನ್ನು ವಾರದಲ್ಲಿ ಕನಿಷ್ಠ ಎರಡು ಬಾರಿಯಾದರೂ ಮಾಡುತ್ತಾ ಇದ್ದರೆ ಕ್ರಮೇಣ ಕೂದಲು ಉದುರುವಿಕೆ, ಬೆಳ್ಳಗಾಗುವ ಸಮಸ್ಯೆ ನಿಯಂತ್ರಣಕ್ಕೆ ಬರುವುದು.

ತೆಂಗಿನ ಎಣ್ಣೆಯಲ್ಲಿ ಸಣ್ಣದಾಗಿ ಪೀಸ್ ಮಾಡಿ ಒಣಗಿಸಿದ ನೆಲ್ಲಿಕಾಯಿ ಹಾಕಿ ಸ್ವಲ್ಪ ಹೊತ್ತು ಕುದಿಸಿ ತಣ್ಣಗಾದ ನಂತರ ತಲೆ ಕೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲಿನ ಉತ್ತಮ ಬೆಳವಣಿಗೆ ಆಗುವುದು. ಇದನ್ನು ಕೂಡ ವೃದಲ್ಲಿ ಎರಡು ಬಾರಿಯಾದರೂ ಮಾಡುತ್ತಾ ಇದ್ದಲ್ಲಿ ಉತ್ತಮ ಫಲಿತಾಂಶ ದೊರೆಯುವುದು.

ತಲೆ ಕೂದಲಿನ ಆರೋಗ್ಯಕ್ಕೆ ಕರಿಬೇವಿನ ಎಲೆಗಳು ಮತ್ತು ಒಂದು ಕಪ್ ಮಜ್ಜಿಗೆ ಮಿಕ್ಸ್ ಮಾಡಿ ನೆತ್ತಿಯ ಭಾಗಕ್ಕೆ ಅನ್ವಯಿಸಿ ಮಸಾಜ್ ಮಾಡಬೇಕು. ಇದನ್ನು 30 ನಿಮಿಷ ಕಾಲ ಹಾಗೆ ಬಿಟ್ಟು ನಂತರ ತಲೆ ತೊಳೆದುಕೊಳ್ಳಬೇಕು.

ಕ್ಯಾರೆಟ್ ಸೀಡ್ ಆಯಿಲ್ ಮತ್ತು ಎಳ್ಳೆಣ್ಣೆ ಮಿಶ್ರಣ ಅದ್ಭುತ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅರ್ಧ ಟೇಬಲ್ ಚಮಚ ಕ್ಯಾರೆಟ್ ಬೀಜಗಳ ಎಣ್ಣೆ ಮತ್ತು ನಾಲ್ಕು ಟೇಬಲ್ ಚಮಚ ಎಳ್ಳೆಣ್ಣೆ ಮಿಶ್ರಣ ಮಾಡಿ ತಲೆ ಕೂದಲಿನ ಬೇರುಗಳಿಗೆ ಹಾಗೂ ನೆತ್ತಿಯ ಭಾಗಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಶಾಂಪು ಹಾಕಿ ತಲೆ ತೊಳೆದುಕೊಳ್ಳಬೇಕು.

Leave a Comment

Your email address will not be published. Required fields are marked *