Ad Widget .

ಸಂಕ್ರಾಂತಿ ಹಬ್ಬಕ್ಕೆ ಈ ಐಟಂ ರೆಡಿ ಮಾಡಿ ಸವಿಯಿರಿ| ರುಚಿಯಾದ ಶೇಂಗಾ ಹೋಳಿಗೆ ತಯಾರಿಸೋದು ಹೇಗೆ?

ಸಮಗ್ರ ನ್ಯೂಸ್: ನೋಡನೋಡುತ್ತಲೇ‌ ಸಂಕ್ರಾಂತಿ ಹಬ್ಬ ಬಂದಿದೆ. ಇದು ಈ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ. ಕೆಲವರು ಪೊಂಗಲ್ ತಯಾರಿಸಿದ್ರೆ, ಇನ್ನು ಕೆಲವರು ರೊಟ್ಟಿ ಊಟ ತಯಾರಿಸುತ್ತಾರೆ. ಮತ್ತೆ ಕೆಲವರು ಶೇಂಗಾ ಹೊಳಿಗೆ, ಶೇಂಗಾ ಲಾಡುವನ್ನು ತಯಾರಿಸಿ, ದೇವರಿಗೆ ನೈವೇದ್ಯ ಮಾಡುತ್ತಾರೆ. ಹಾಗಾದ್ರೆ ಶೇಂಗಾ ಹೋಳಿಗೆ ರೆಸಿಪಿ ಮಾಡೋದು ಹೇಗೆ? ತಿಳಿಯೋಣ ಬನ್ನಿ…

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೇಕಾಗುವ ಸಾಮಗ್ರಿ: ಒಂದು ಕಪ್ ಶೇಂಗಾ, ಒಂದು ಕಪ್ ಬೆಲ್ಲ, ಕಾಲು ಕಪ್ ಎಳ್ಳು, ಒಂದೂವರೆ ಕಪ್ ಮೈದಾ, 2 ಸ್ಪೂನ್ ಚಿರೋಟಿ ರವಾ, ಅಗತ್ಯಕ್ಕೆ ತಕ್ಕಷ್ಟು ತುಪ್ಪ, ಕೊಂಚ ಉಪ್ಪು.

Ad Widget . Ad Widget . Ad Widget .

ಮಾಡುವ ವಿಧಾನ: ಶೇಂಗಾವನ್ನು ಚೆನ್ನಾಗಿ ಹುರಿದು ಪಕ್ಕಕ್ಕಿರಿಸಿ. ಅದೇ ಪ್ಯಾನ್‌ನಲ್ಲಿ ಎಳ್ಳನ್ನ ಕೂಡಾ ಹುರಿದಿಡಿ. ಈಗ ಹಿಟ್ಟು ತಯಾರಿಸಿ. ಮೈದಾ, ರವಾ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಕೊಂಚ ಕೊಂಚ ತುಪ್ಪ ಮತ್ತು ನೀರು ಸೇರಿಸುತ್ತ ಚಪಾತಿಯಂಂತೆ ಹಿಟ್ಟು ಕಲಿಸಿದ್ರೆ ಹೋಳಿಗೆ ಹಿಟ್ಟು ರೆಡಿ.

ಈಗ ಹೂರಣ ತಯಾರಿಸಿ. ಹುರಿದ ಶೇಂಗಾವನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿ. ನಂತರ ಇದಕ್ಕೆ ಬೆಲ್ಲ ಸೇರಿಸಿ ಮತ್ತೆ ಗ್ರೈಂಡ್ ಮಾಡಿ. ಈ ಮಿಶ್ರಣಕ್ಕೆ ಹುರಿದ ಎಳ್ಳು ಸೇರಿಸಿದ್ರೆ ಹೂರಣ ರೆಡಿ. ಈಗ ಹಿಟ್ಟು ಮತ್ತು ಹೂರಣ ಹಾಕಿ ಹೋಳಿಗೆ ತಯಾರಿಸಿ, ತುಪ್ಪ ಹಾಕಿ ಹುರಿದ್ರೆ ಶೇಂಗಾ ಹೋಳಿಗೆ ರೆಡಿ..

Leave a Comment

Your email address will not be published. Required fields are marked *