Ad Widget .

5 ವರ್ಷದ ಮಗುವಿನ ಮೇಲೆ‌ 15ರ ಬಾಲಕನಿಂದ ಅತ್ಯಾಚಾರ

ಸಮಗ್ರ ನ್ಯೂಸ್: 15 ವರ್ಷದ ಬಾಲಕನೊಬ್ಬ 5 ವರ್ಷದ ಬಾಲಕಿಯ ಮೇಲೆ ಆತ್ಯಾಚಾರ ಮಾಡಿದ್ದಾನೆ. ಇದೀಗ ತಪ್ಪೊಪ್ಪಿಕೊಂಡಿರುವ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನ ವಿರುದ್ಧ ಐಪಿಸಿ ಮತ್ತು ಪೋಕ್ಸೋ ಕಾಯ್ದೆ ಸಂಬಂಧಿತ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Ad Widget . Ad Widget .

ಅಪ್ರಾಪ್ತ ವಯಸ್ಸಿನ ಬಾಲಕಿ, ಶಾಲೆಯ ವಠಾರದಲ್ಲಿ ಕುಳಿತು ಅಳುತ್ತಿರುವುದನ್ನು ದಾರಿ ಹೋಕರೊಬ್ಬರು ಗಮನಿಸಿದ್ದಾರೆ. ಕೂಡಲೇ ಅವರು ಬಂದು ವಿಚಾರಿಸಿ ಆಕೆಯನ್ನು ಮನೆಗೆ ಕರೆ ತಂದು ಬಿಟ್ಟಿದ್ದಾರೆ. ಘಟನೆಯ ಬಗ್ಗೆ ಬಾಲಕಿ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಕೂಡಲೇ ಎಚ್ಚೆತ್ತ ಪೋಷಕರು, ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

Ad Widget . Ad Widget .

ಪ್ರಕರಣ ದಾಖಲಿಸಿಕೊಂಡ ನಾಗ್ಪಾಡಾ ಪೊಲೀಸ್ ಠಾಣೆಯ ಅಧಿಕಾರಿಗಳು, ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಸಮೀಪದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದ ಪೊಲೀಸರು ನಲ್ಲಸೊಪಾರ ಎಂಬ ಪ್ರದೇಶದಲ್ಲಿದ್ದ ಆರೋಪಿ ಬಾಲಕನನ್ನು ಬಂಧಿಸಿದ್ದಾರೆ.

ಆರೋಪಿ ಬಾಲಕ, ಬಾಲಕಿಯ ಬಾಯಿಯನ್ನು ಬಟ್ಟೆಯಿಂದ ಬಿಗಿದು ಶಾಲಾ ವಠಾರದಲ್ಲಿದ್ದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಇದಕ್ಕೂ ಮೊದಲು ಆತನ ನನಗೆ ಹೊಡೆದಿದ್ದಾನೆ ಎಂದು ಬಾಲಕಿನ ಪೊಲೀಸರಲ್ಲಿ ಹೇಳಿಕೊಂಡಿದ್ದಾಳೆ.

Leave a Comment

Your email address will not be published. Required fields are marked *