Ad Widget .

ಗುಡ್ ನ್ಯೂಸ್ ನೀಡಿದ ಚಂದನ್ ಶೆಟ್ಟಿ – ನಿವೇದಿತಾ| ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಂಡಲ್ ವುಡ್ ಕ್ಯೂಟ್ ಜೋಡಿ!

ಸಮಗ್ರ ನ್ಯೂಸ್: ಗಾಯಕ, ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಕೊನೆಗೂ ಗುಡ್ ನ್ಯೂಸ್ ನೀಡಿದ್ದಾರೆ. ನಿವೇದಿತಾ ಮತ್ತು ಚಂದನ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಬಹಿರಂಗ ಪಡಿಸಿದ್ದಾರೆ. ವಿಶೇಷ ವಿಡಿಯೋ ಮೂಲಕ ಚಂದನ್ ಮತ್ತು ನಿವಿ ದಂಪತಿ ಸುಳಿವು ನೀಡಿದ್ದಾರೆ.

Ad Widget . Ad Widget .

ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ Fat + Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್​ ಶೆಟ್ಟಿ ಕೇಳಿದ್ದಾರೆ. ಅದಕ್ಕೆ ಉತ್ತರ ‘ಫಾದರ್​’. ಹಾಗಾಗಿ ಚಂದನ್​ ಶೆಟ್ಟಿ ತಂದೆ ಆಗುತ್ತಿದ್ದಾರೆ ಎಂದು ಫ್ಯಾನ್ಸ್​ ಕಾಮೆಂಟ್ ಮಾಡುತ್ತಿದ್ದಾರೆ. ಇಬ್ಬರ ವಿಡಿಯೋ ನೋಡಿ ಎಲ್ಲರೂ ಅಭಿನಂದನೆ ತಿಳಿಸುತ್ತಿ​ದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget . Ad Widget .

ನಿವೇದಿತಾ ಮತ್ತು ಚಂದನ್ ಇಬ್ಬರೂ’ಬಿಗ್​ ಬಾಸ್​ ಕನ್ನಡ ಸೀಸನ್​ 5′ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಆಗ ಇಬ್ಬರೂ ಮೊದಲ ಬಾರಿಗೆ ಪರಿಚಿತರಾಗಿದ್ದರು. ನಂತರ ಇಬ್ಬರ ನಡುವೆ ಪ್ರೀತಿ ಆಗಿ 2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದರು. ಮೂರು ವರ್ಷಗಳ ಬಳಿಕ ಈ ಜೋಡಿ ಗುಡ್​ ನ್ಯೂಸ್​ ನೀಡಿದೆ.

Leave a Comment

Your email address will not be published. Required fields are marked *