Ad Widget .

ಹೊಸ ವಿನ್ಯಾಸದ ಬಟ್ಟೆಗಳಿಗೆ ಆದ್ಯತೆ ನೀಡಿ ಗ್ರಾಹಕರನ್ನು ಆಕರ್ಷಿಸಬೇಕು – ರಾಜಮಾತೆ ಪ್ರಮೋದಾದೇವಿ

ಸಮಗ್ರ ನ್ಯೂಸ್: ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ಉತ್ಪಾದಿಸಿ ಗ್ರಾಹಕರನ್ನು ಆಕರ್ಷಿಸಬೇಕು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಕಿವಿಮಾತು ಹೇಳಿದರು.

Ad Widget . Ad Widget .

ಮೈಸೂರಿನಲ್ಲಿ ಭಾನುವಾರ ರೀಡ್‌ ಅಂಡ್‌ ಟೇಲರ್‌ ರಜನ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ಕೃಷ್ಟ ದರ್ಜೆಯ ಉತ್ಪನ್ನಗಳನ್ನು ಉತ್ಪಾದಿಸಿದಷ್ಟು ಗ್ರಾಹಕರಿಗೆ ಅನುಕೂಲವಾಗುತ್ತದೆ.

Ad Widget . Ad Widget .

ಹೊಸ ಹೊಸ ವಿನ್ಯಾಸದ ಬಟ್ಟೆ ಉತ್ಪಾದಿಸಬೇಕು. ಆಗ ಗ್ರಾಹಕರು ಆಕರ್ಷಿತರಾಗುತ್ತಾರೆ ಎಂದರು.

ಜೋಸೆಫ್‌ ಟಾಯ್ಲರ್‌ ಎಂಬವರಿಂದ ಬ್ರಾಂಡ್‌ 1830ರಲ್ಲಿ ಆರಂಭವಾಯಿತು. ನಂತರ, 1998ರಲ್ಲಿ ಭಾರತ ದೇಶದಲ್ಲಿ ಆರಂಭವಾಯಿತು. ಮೈಸೂರಿನಲ್ಲಿ ರೀಡ್‌ ಅಂಡ್‌ ಟೇಲರ್‌ ಆರಂಭವಾಗಿ 25 ವರ್ಷಗಳನ್ನು ಪೂರೈಸಿದೆ. ಈ ಕಂಪನಿಯು ಹಲವಾರು ಏಳು-ಬೀಳು ಕಂಡು ಪ್ರಗತಿ ಸಾಧಿಸಿದೆ ಎಂದರು.

ಉತ್ಕೃಷ್ಟ ಉತ್ಪನ್ನಗಳನ್ನು ತಯಾರಿಸುವ ಮೂಲಕ ಗ್ರಾಹಕರ ಆಕರ್ಷಣೆಗೆ ತಕ್ಕಂತೆ ಒದಗಿಸಿದರೆ ಉತ್ತಮ. ಹೊಸ ಶೈಲಿಯ ಗುಣಮಟ್ಟದ ಶೂಟಿಂಗ್‌ ಶರ್ಚ್‌ಗಳನ್ನು ನೀಡಿದರೆ ಆಕರ್ಷಿಸಬಹುದು ಎಂದರು.

Leave a Comment

Your email address will not be published. Required fields are marked *