Ad Widget .

ಕೊರಗಜ್ಜನೇ ನನ್ನ ಗೆಲ್ಲಿಸಿದ್ದಾರೆ| ಮಂಗಳೂರಿಗೆ ಮನಬಿಚ್ಚಿ ಮಾತನಾಡಿದ ರೂಪೇಶ್‌ ಶೆಟ್ಟಿ

ಸಮಗ್ರ ನ್ಯೂಸ್: ‘ನಾನು ಕೊರಗಜ್ಜ ದೇವರನ್ನು ತುಂಬ ಆರಾಧನೆ ಮಾಡುತ್ತೇನೆ. ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಆಡುವಾಗ ಕೊರಗಜ್ಜನ ಹೆಸರು ಹೇಳುತ್ತಿದ್ದೆ. ನಾನು ಗೆಲ್ಲುವುದು ಬೇಡ, ಕನಿಷ್ಠ ಟಾಪ್​ 5ರಲ್ಲಿ ಬಂದರೂ ಕೂಡ ಮೊದಲು ಹೋಗುವುದು ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಅಂದುಕೊಂಡಿದ್ದೆ. ನನ್ನನ್ನು ಅವರೇ ಗೆಲ್ಲಿಸಿದ್ದಾರೆ’ ಎಂದು ರೂಪೇಶ್​ ಶೆಟ್ಟಿ ಹೇಳಿದ್ದಾರೆ.

Ad Widget . Ad Widget .

ಬಿಗ್ ಬಾಸ್ ಗೆದ್ದ ಬಳಿಕ ಮಂಗಳೂರಿಗೆ ಬಂದ ರೂಪೇಶ್​ ಶೆಟ್ಟಿಗೆ ಹುಲಿ ವೇಷದ ಕಲಾವಿದರು ಸ್ವಾಗತ ಕೋರಿದ್ದಾರೆ. ಅದು ಅವರಿಗೆ ಹೆಚ್ಚು ಸಂತಸ ತಂದಿದೆ. ಆ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ಚಿಕ್ಕ ವಯಸ್ಸಿನಿಂದಲೂ ನನಗೆ ಹುಲಿ ವೇಷ ಎಂದರೆ ಇಷ್ಟ. ತುಳು ನಾಡಿನ ಈ ಸಾಂಸ್ಕೃತಿಕ ಕಲೆಯನ್ನು ಬಿಗ್​ ಬಾಸ್​ ಮನೆಯಲ್ಲಿ ಪ್ರದರ್ಶನ ಮಾಡಲು ಅವಕಾಶ ಸಿಕ್ಕಿತು. ಇಲ್ಲಿಯೂ ಹುಲಿವೇಷವನ್ನು ನನ್ನ ಸ್ನೇಹಿತರು ಪ್ಲ್ಯಾನ್​ ಮಾಡಿದ್ದಾರೆ. ನಾನು ಇದನ್ನು ನಿರೀಕ್ಷಿಸಿರಲಿಲ್ಲ’ ಎಂದಿದ್ದಾರೆ ರೂಪೇಶ್​ ಶೆಟ್ಟಿ.

Ad Widget . Ad Widget .

ಬಿಗ್​ ಬಾಸ್​ ಗೆದ್ದ ಬಳಿಕ ರೂಪೇಶ್​ ಶೆಟ್ಟಿ ಅವರಿಗೆ ಅನೇಕ ಆಫರ್​ಗಳು ಬರುತ್ತಿವೆ. ಆ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ನನ್ನ ತುಳು ಸಿನಿಮಾ ‘ಸರ್ಕಸ್​’ ರಿಲೀಸ್​ಗೆ ಸಿದ್ಧವಾಗಿದೆ. ನಾಲ್ಕರಿಂದ ಐದು ಕನ್ನಡ ಸಿನಿಮಾಗಳ ಆಫರ್​ ಬಂದಿದೆ. ಮುಂದಿನ ವಾರ ಅವುಗಳನ್ನು ಪಕ್ಕಾ ಮಾಡಿಕೊಳ್ಳುತ್ತೇನೆ’ ಎಂದು ರೂಪೇಶ್​ ಶೆಟ್ಟಿ ಹೇಳಿದ್ದಾರೆ.

Leave a Comment

Your email address will not be published. Required fields are marked *