Ad Widget .

ದ್ವಾದಶ ರಾಶಿಗಳ ವಾರ ಭವಿಷ್ಯ

ಸಮಗ್ರ ನ್ಯೂಸ್: ಹೊಸ ವರ್ಷದ ಮೊದಲ ವಾರ ಕಳೆದು ಇದೀಗ ಎರಡನೇ ವಾರಕ್ಕೆ ಕಾಲಿಡುತ್ತಿದ್ದೇವೆ, ಈ ಹೊಸ ವರ್ಷ ನಿಮ್ಮೆಲ್ಲರಿಗೂ ತುಂಬಾ ಚೆನ್ನಾಗಿರಲಿ. ಜ್ಯೋತಿಷ್ಯದ ಪ್ರಕಾರ ರಾಶಿಗಳಿಗೆ ತಕ್ಕಂತೆ ಮುಂದಿನ ವಾರ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿಯೋಣ ಬನ್ನಿ…

Ad Widget . Ad Widget .

ಮೇಷ ರಾಶಿ: ವಾರದ ಆರಂಭದಲ್ಲಿ ಸ್ವಲ್ಪ ವ್ಯಗ್ರ ಸ್ವಭಾವವಿರುತ್ತದೆ. ನಡವಳಿಕೆಯಲ್ಲಿ ಸ್ವಲ್ಪ ಆಲಸ್ಯವನ್ನು ಕಾಣಬಹುದು. ಯಾರೊಂದಿಗೂ ಕಠಿಣ ಮಾತುಗಳು ಬೇಡ. ಕೃಷಿಕರಿಗೆ ಉತ್ತಮ ಬೆಳೆ ಪಡೆಯುವ ಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಅವಕಾಶ ದೊರೆಯುತ್ತದೆ. ಉಷ್ಣದಿಂದ ರಕ್ತ ಕೆಟ್ಟು ಮೈಮೇಲೆ ಗುಳ್ಳೆಗಳಾಗಬಹುದು. ಸಂಗಾತಿಯ ಸ್ವಾರ್ಥ ಹಾಗೂ ಜಿಗುಟುತನ ಬೇಸರ ತರಿಸುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಸೈನಿಕರಿಗೆ ಹೆಚ್ಚು ಸವಲತ್ತುಗಳ ಜೊತೆಗೆ ಹೆಚ್ಚು ಕೆಲಸವೂ ಇರುತ್ತದೆ. ತಂದೆಯು ನಡೆಸುತ್ತಿದ್ದ ವ್ಯವಹಾರಗಳಲ್ಲಿ ನಿಮಗೆ ಪ್ರಾಮುಖ್ಯತೆ ದೊರೆಯುತ್ತದೆ. ವೃತ್ತಿಯಲ್ಲಿ ಹೆಚ್ಚು ಸಂಪಾದನೆ ಆದರೂ ಒಂದು ರೀತಿಯಲ್ಲಿ ಮುಜುಗರವಿರುತ್ತದೆ. ಸಾಂಪ್ರದಾಯಿಕ ಕೃಷಿಗೆ ಹೆಚ್ಚಿನ ಬೇಡಿಕೆ ಬರುತ್ತದೆ.

Ad Widget . Ad Widget .

ವೃಷಭ ರಾಶಿ:
ನಿಮ್ಮ ನಡವಳಿಕೆಯಲ್ಲಿ ಹೆಚ್ಚು ಕೋಪವನ್ನು ಕಾಣಬಹುದು. ಮಾತಿನಲ್ಲಿ ದ್ವಂದ್ವಾರ್ಥಗಳಿರುತ್ತವೆ. ಚುರುಕಾಗಿ ಕೆಲಸ ಮಾಡಿ ಎಲ್ಲರಿಂದಲೂ ಕೆಲಸವನ್ನು ಮಾಡಿಸುವಿರಿ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಾಣಬಹುದು. ರಕ್ತ ಪರಿಚಲನೆಯಲ್ಲಿ ವ್ಯತ್ಯಾಸವಿರುವವರು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಸಂಗಾತಿಯೊಡನೆ ಕಲಹಗಳಾಗಬಹುದು, ಮೌನವಾಗಿರುವುದು ಬಹಳ ಉತ್ತಮ. ಅನಿರೀಕ್ಷಿತ ಆದಾಯ ಬರುವ ಸಾಧ್ಯತೆಯಿದೆ. ಕೃಷಿಯಿಂದ ಆದಾಯ ಹೆಚ್ಚುವ ಸಾಧ್ಯತೆ ಇದೆ. ಅನುವಂಶಿಯ ವ್ಯವಹಾರಗಳಲ್ಲಿ ಈಗ ನಿಮಗೆ ಸ್ಥಾನ ಸಿಗುತ್ತದೆ. ವೃತ್ತಿಯಲ್ಲಿ ಹೆಚ್ಚು ಆದಾಯವಿದ್ದರೂ ನೆಮ್ಮದಿ ಇರುವುದಿಲ್ಲ. ಕಬ್ಬಿಣದ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರಿಗೆ ಹೆಚ್ಚಿನ ಕೆಲಸ ದೊರೆತು ಆದಾಯ ಹೆಚ್ಚುತ್ತದೆ.

ಮಿಥುನ ರಾಶಿ:
ಸರ್ಕಾರಿ ಹುದ್ದೆಯಲ್ಲಿರುವವರಿಗೆ ಹೆಚ್ಚಿನ ಜವಾಬ್ದಾರಿಗಳು ದೊರೆಯುತ್ತವೆ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಸರ್ಕಾರಿ ಸಂಸ್ಥೆಗಳ ಸಾಲ ಈಗ ದೊರೆಯುತ್ತದೆ. ನಿಮ್ಮ ತಾಯಿಯಿಂದ ನಿಮಗೆ ಸೂಕ್ತ ಧನಸಹಾಯ ಸಿಗುತ್ತದೆ. ಸಂಗಾತಿಯ ಸಹಕಾರ ನಿಮ್ಮ ಕೆಲಸಕಾರ್ಯಗಳಿಗೆ ಸಿಗುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಸ್ವಲ್ಪ ಹಿನ್ನಡೆ ಕಾಣಬಹುದು. ಸಾಂಪ್ರದಾಯಿಕ ಕೃಷಿಯನ್ನು ಮಾಡುವವರಿಗೆ ಇಳುವರಿ ಕಮ್ಮಿಯಾಗಬಹುದು. ಶಿಕ್ಷಣ ಸಂಸ್ಥೆಗಳನ್ನು ನಡೆಸುವವರಿಗೆ ಸಿಗಬೇಕಾದ ಸೌಲಭ್ಯವು ಸರ್ಕಾರದಿಂದ ದೊರೆಯುತ್ತದೆ. ವಿದೇಶಕ್ಕೆ ಹೋಗಬೇಕೆನ್ನುತ್ತಿರುವವರಿಗೆ ಅನುಕೂಲಕರ ವಾತಾವರಣ ದೊರೆಯುತ್ತದೆ. ಆಟೋಮೊಬೈಲ್ ಏಜೆನ್ಸಿಗಳಿಗೆ ವಾಹನ ವ್ಯಾಪಾರದಲ್ಲಿ ಏರಿಕೆ ಕಾಣಬಹುದು.

ಕಟಕ ರಾಶಿ:‌ ವಾರದ ಆರಂಭವು ಆನಂದದಾಯಕವಾಗಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸ್ವಲ್ಪ ಹಿನ್ನಡೆ ಕಾಣಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಖರ್ಚುಗಳು ಹೆಚ್ಚಾಗುವ ಎಲ್ಲಾ ಸಂದರ್ಭಗಳಿವೆ. ಸಂಗಾತಿಯೊಂದಿಗೆ ಇದ್ದ ಮುನಿಸು ಕೊನೆಗೊಳ್ಳುವ ಲಕ್ಷಣಗಳಿವೆ. ಕೆಲವೊಂದು ಬೆಳ್ಳಿ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವಾಗಬಹುದು. ಹಿರಿಯರಿಂದ ಧನಸಹಾಯ ಮತ್ತು ಸೂಕ್ತ ಮಾರ್ಗದರ್ಶನ ನಿಮಗೆ ಹೆಚ್ಚು ಅನುಕೂಲವಾಗುತ್ತದೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕೆಲವರಿಗೆ ಸ್ಥಾನಮಾನ ಹೆಚ್ಚಾಗುವ ಸಾಧ್ಯತೆ ಇದೆ. ಕೃಷಿ ಸಲಕರಣೆಗಳನ್ನು ತಯಾರಿಸಿ ಮಾರುವವರ ವ್ಯಾಪಾರ ಮತ್ತು ವ್ಯವಹಾರ ವಿಸ್ತರಿಸುತ್ತದೆ. ನಿಮ್ಮ ಅತಿಯಾದ ಬುದ್ಧಿವಂತಿಗೆ ಹೆಚ್ಚಿನ ನಷ್ಟಕ್ಕೂ ಕಾರಣವಾಗಬಹುದು.

ಸಿಂಹ ರಾಶಿ:
ನಿಮ್ಮ ಮಾನಸಿಕ ದೃಢತೆ ಹೆಚ್ಚಿರುತ್ತದೆ. ಹಣದ ಒಳಹರಿವು ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಆಲಸ್ಯ ಕಾಣಬಹುದು. ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ದೊರೆಯುವ ಸಂದರ್ಭ. ಸ್ತ್ರೀರೋಗ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಸಂಗಾತಿಯ ಖರ್ಚುವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಆಗಲಿ ವ್ಯಾಪಾರದಲ್ಲಾಗಲಿ ಹಿರಿಯರನ್ನು ಎದುರು ಹಾಕಿಕೊಳ್ಳುವುದು ಬೇಡ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿರುವವರಿಗೆ ಸರ್ಕಾರದಿಂದ ಬರಬೇಕಿದ್ದ ಬಾಕಿ ಹಣ ಬರುತ್ತವೆ. ನಿಮ್ಮ ಆಲಸಿತನ ಕೆಲವೊಂದು ಲಾಭವನ್ನು ಕಿತ್ತುಕೊಳ್ಳುತ್ತದೆ.

ಕನ್ಯಾ ರಾಶಿ:
ಇದ್ದದರಲ್ಲಿ ತೃಪ್ತಿ ಪಡಬೇಕಾದ ಅವಕಾಶ ನಿಮ್ಮದಾಗಿರುತ್ತದೆ. ಧಾರ್ಮಿಕ ಕಾರ್ಯಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದುವಿರಿ. ಕೃಷಿ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಆಸಕ್ತಿ ಮೂಡುತ್ತದೆ. ಆಸ್ತಿ ವಿಚಾರದಲ್ಲಿ ಸ್ವಲ್ಪ ಮುನ್ನಡೆಯನ್ನು ಸಾಧಿಸಬಹುದು. ಮಕ್ಕಳ ಆರೋಗ್ಯದ ವಿಚಾರದ ಬಗ್ಗೆ ಹೆಚ್ಚಿನ ಚಿಂತೆ ಮೂಡುತ್ತದೆ. ವಾತರೋಗವಿರುವವರು ಹೆಚ್ಚು ಎಚ್ಚರಿಕೆವಹಿಸಿರಿ. ಸಂಗಾತಿಗೆ ಆದಾಯವಿದ್ದರೂ ಖರ್ಚಿಗೆ ಸರಿ ಸಮಾನ ಆಗುವುದಿಲ್ಲ. ವಿದೇಶದಲ್ಲಿರುವವರಿಗೆ ಅನಿರೀಕ್ಷಿತ ಕಾನೂನು ತೊಡಕುಗಳು ಎದುರಾಗುವ ಸಾಧ್ಯತೆ ಇದೆ. ಸಾಂಪ್ರದಾಯಿಕ ಬೀಜ ಮತ್ತು ಸಸಿಗಳನ್ನು ತಯಾರು ಮಾಡುವವರಿಗೆ ಬೇಡಿಕೆ ಇರುತ್ತದೆ. ವೃತ್ತಿಯಲ್ಲಿ ಯಾವುದೇ ಏರಿಳಿತ ಇರುವುದಿಲ್ಲ. ಹೈನುಗಾರಿಕೆಯನ್ನು ಮಾಡುವವರಿಗೆ ಲಾಭವಿರುತ್ತದೆ ಮತ್ತು ಹಾಲು ಮತ್ತು ಅದರ ಉತ್ಪನ್ನಗಳನ್ನು ಮಾರುವವರಿಗೆ ಹೆಚ್ಚಿನ ಲಾಭವಿರಲಿದೆ.

ತುಲಾ ರಾಶಿ:
ಜೀವನದ ಬಗ್ಗೆ ವೈರಾಗ್ಯ ಮೂಡಬಹುದು, ಇದು ಕೆಲವು ದಿನಗಳ ಮಟ್ಟಿಗೆ ಮಾತ್ರ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಆಸ್ತಿ ಮಾರುವ ವಿಚಾರದಲ್ಲಿ ದ್ವಂದ್ವವಿರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಉದರ ಸಂಬಂಧಿ ಕಾಯಿಲೆ ಕಾಡಬಹುದು. ವಿದೇಶದಲ್ಲಿರುವವರು ತಮ್ಮ ಸಂಗಾತಿಯನ್ನು ಈಗ ತಮ್ಮ ಬಳಿಗೆ ಕರೆಸಿಕೊಳ್ಳಬಹುದು. ಕೃಷಿ ಉತ್ಪನ್ನಗಳನ್ನು ಮಾರುವವರಿಗೆ ಅಲ್ಪಮಟ್ಟಿನ ಹಿನ್ನಡೆ ಇರುತ್ತದೆ. ತಂದೆಯ ವೃತ್ತಿಯನ್ನು ಮುಂದುವರಿಸುವ ಅವಕಾಶ ದೊರೆಯುತ್ತದೆ. ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಲಾಭವಿರುತ್ತದೆ. ಸಿದ್ಧಪಡಿಸಿದ ಆಹಾರ ಮಾರುವವರಿಗೆ ಲಾಭ ಹೆಚ್ಚುವ ಅವಕಾಶಗಳಿವೆ. ವ್ಯವಹಾರಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು.

ವೃಶ್ಚಿಕ ರಾಶಿ:
ನಿಮ್ಮಲ್ಲಿನ ಕಾರ್ಯ ಉತ್ಸಾಹ ಈಗ ಜಾಸ್ತಿ ಇರುತ್ತದೆ. ಧನ ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಬಂಧುಗಳಲ್ಲಿ ಕೆಲವರು ನಿಮ್ಮ ಪರ, ಕೆಲವರು ನಿಮ್ಮ ವಿರುದ್ಧವಿರುತ್ತಾರೆ. ಸ್ಥಿರಾಸ್ತಿಯ ಬಗ್ಗೆ ಈಗ ಆಲೋಚನೆ ಬೇಡ, ಅದು ದುಬಾರಿಯಾಗಿ ಪರಿಣಮಿಸಬಹುದು. ಅಧ್ಯಯನ ಮಾಡುವವರಿಗೆ ಉತ್ತಮ ವಾತಾವರಣ ಹಾಗೂ ಅನುಕೂಲ ಸಿಗುತ್ತದೆ. ಮೂಳೆ ಸಂಬಂಧಿ ಅಥವಾ ಕೀಲುಗಳ ನೋವು ಇರುವವರು ಎಚ್ಚರವಹಿಸಿರಿ. ವಾಹನಗಳನ್ನು ರಿಪೇರಿ ಮಾಡುವವರಿಗೆ ಹೆಚ್ಚು ಕೆಲಸ ದೊರೆಯುತ್ತದೆ. ಸಂಗಾತಿಗೆ ಸ್ಥಿರಾಸ್ತಿ ಸಿಗಬಹುದು. ಕೆಲವೊಮ್ಮೆ ಅನಿರೀಕ್ಷಿತ ಆದಾಯಗಳು, ಅನಿರೀಕ್ಷಿತ ಖರ್ಚುಗಳೂ ಬರುತ್ತವೆ. ಮಾತೃ ವರ್ಗದ ಕಡೆಯವರಿಂದ ಹೆಚ್ಚಿನ ಸಹಾಯ ಇರುತ್ತದೆ. ವೃತ್ತಿಯಲ್ಲಿ ಅವರ ಕೌಶಲಕ್ಕೆ ತಕ್ಕಂತೆ ವೇತನ ಹೆಚ್ಚಬಹುದು.

ಧನಸ್ಸು ರಾಶಿ:
ಆತ್ಮವಿಶ್ವಾಸ ತುಸು ಹೆಚ್ಚಾಗಿಯೇ ಇರುತ್ತದೆ. ಆದಾಯದಲ್ಲಿ ಸ್ವಲ್ಪ ಕೊರತೆ ಇದ್ದರೂ ತೊಂದರೆ ಇರುವುದಿಲ್ಲ. ನಿಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಹಿರಿಯರಿಂದ ಸೂಕ್ತ ಮಾರ್ಗದರ್ಶನ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಹಿನ್ನಡೆ ಇರುತ್ತದೆ. ವಿದೇಶಿ ಭಾಷೆಗಳನ್ನು ಕಲಿಯುವವರಿಗೆ ಸಾಕಷ್ಟು ಮುನ್ನಡೆ ಇರುತ್ತದೆ. ಹರಿತವಾದ ಆಯುಧಗಳಿಂದ ದೂರ ಇರುವುದು ಒಳ್ಳೆಯದು. ಸಂಗಾತಿಯ ಆಲೋಚನೆ ನಿಮ್ಮ ಆಲೋಚನೆ ವ್ಯವಹಾರ ವೃದ್ಧಿಸುವಲ್ಲಿ ಒಂದೇ ರೀತಿ ಇರುತ್ತದೆ. ಶೀತ ಬಾಧೆ ಕಾಡಬಹುದು. ತಂದೆಯು ನಿಮಗೆ ವ್ಯವಹಾರದ ಒಳಗುಟ್ಟುಗಳನ್ನು ತಿಳಿಸುವರು. ವೃತ್ತಿಯಲ್ಲಿ ಉತ್ತಮ ಸ್ಥಾನಮಾನ ಸಿಗುವ ಸಾಧ್ಯತೆಗಳಿವೆ. ಧಾರ್ಮಿಕ ವಿಷಯಗಳಲ್ಲಿ ಹೆಚ್ಚು ಆಸಕ್ತರಾಗುವಿರಿ. ಭೂ ಅಭಿವೃದ್ಧಿ ಮಾಡುವವರಿಗೆ ಸ್ವಲ್ಪ ತೊಡಕು ಎದುರಾಗಬಹುದು. ಪುಣ್ಯಕ್ಷೇತ್ರದ ದರ್ಶನದ ಯೋಗವಿದೆ.

ಮಕರ ರಾಶಿ:
ಸಮಾಜದಿಂದ ಗೌರವ ದೊರೆಯುತ್ತದೆ. ವೃತ್ತಿಯಲ್ಲಿ ಬಹಳ ಶ್ರದ್ಧೆ ತೋರುವಿರಿ. ಕೆಲಸಗಾರರನ್ನು ಒಲಿಸಿಕೊಂಡು ನಿಮ್ಮ ಕಾರ್ಯಸಾಧನೆ ಮಾಡುವಿರಿ. ಬಂಧುಗಳಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಲು ಪ್ರಯತ್ನಪಡುವಿರಿ. ವಿದೇಶದಲ್ಲಿರುವವರಿಗೆ ಆಸ್ತಿ ಮಾಡುವ ಯೋಗ ಬರುತ್ತದೆ. ಕೃಷಿಯನ್ನು ಅಧ್ಯಯನ ಮಾಡುತ್ತಿರುವವರಿಗೆ ಉತ್ತಮ ಸೌಲಭ್ಯವಿರುತ್ತದೆ. ಸರ್ಕಾರಿ ವ್ಯವಹಾರಗಳು ಬಂದರೂ ಅದು ಅಷ್ಟು ಲಾಭದಾಯಕವಲ್ಲ. ತಾಯಿ ಜೊತೆ ಸಂಬಂಧ ಸುಧಾರಿಸುತ್ತದೆ. ಸಂಗಾತಿಯೊಡನೆ ಮಾಡುವ ಹೈನುಗಾರಿಕೆ ವ್ಯವಹಾರ ಲಾಭ ತರುತ್ತದೆ. ಧನ ಆದಾಯವು ಸಾಮಾನ್ಯವಾಗಿರುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಶಿಸ್ತುಕ್ರಮ ಆಗುವ ಸಾಧ್ಯತೆಗಳಿವೆ, ಎಚ್ಚರ. ಕೆಲವೊಂದು ವಿಚಾರಗಳಲ್ಲಿ ದೇವರ ಮೊರೆ ಹೋಗುವಿರಿ.

ಕುಂಭ ರಾಶಿ:
ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸರಾಗತೆಯನ್ನು ಕಾಣಬಹುದು. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಉಪನ್ಯಾಸಕರಿಗೆ ಹಾಗೂ ಭಾಷಣಕಾರರಿಗೆ ಉತ್ತಮ ವೇದಿಕೆ ದೊರೆತು ಸಂತಸವಾಗುತ್ತದೆ. ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯು ಮೂಡುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರಲಿದೆ. ಶೀತ ಸಂಬಂಧಿ ಕಾಯಿಲೆ ಇರುವವರು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಸಂಗಾತಿಯ ಸಲಹೆ ನಿಮಗೆ ಬಹಳ ಉಪಯುಕ್ತವಾಗುತ್ತವೆ. ಯುವಕರ ಅಹಂಭಾವ ಅಥವಾ ಉದಾಸೀನತೆ ಅವರಿಗೆ ಪಶ್ಚಾಃತಾಪ ಪಡುವಂತೆ ಮಾಡುತ್ತದೆ. ಕೆಲವೊಂದು ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭವಿರುತ್ತದೆ. ಧರ್ಮ ಪ್ರವೃತ್ತಿಯಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚು ಗೌರವ ದೊರೆಯುತ್ತದೆ. ಸಾಹಸ ಕ್ರೀಡೆಗಳಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚು ಅವಕಾಶಗಳು ದೊರೆಯುತ್ತವೆ.

ಮೀನ ರಾಶಿ:
ನಿಮ್ಮ ಮಾತಿನಲ್ಲಿ ಹೆಚ್ಚು ಕಠೋರತೆಯನ್ನು ಕಾಣಬಹುದು. ನಿಮ್ಮ ವೈಯಕ್ತಿಕ ಕೆಲಸಗಳಿಗೆ ಮಾತ್ರ ಹೆಚ್ಚಿನ ಗಮನ ಕೊಡುವಿರಿ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ಕಾಲ. ಆಸ್ತಿ ಕೊಳ್ಳುವಲ್ಲಿ ಕಿರಿಕಿರಿಯುಂಟಾಗುತ್ತದೆ. ಕಣ್ಣಿನ ಸೋಂಕು ಇರುವವರು ಎಚ್ಚರವಹಿಸಿರಿ. ಸಂಗಾತಿಯ ವಶೀಲಿಯಿಂದ ಉದ್ಯೋಗ ದೊರಕುವ ಸಾಧ್ಯತೆ ಇದೆ. ಕೆಲವು ಧಾರ್ಮಿಕ ಆಚರಣೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸುವಿರಿ. ತಾಯಿಯ ಬಗ್ಗೆ ಹೆಚ್ಚು ಓಲೈಕೆ ಮಾಡುವಿರಿ. ಗಣಿತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಸರ್ಕಾರಿ ಕೆಲಸಗಳಲ್ಲಿ ವೇಗವನ್ನು ಕಾಣಬಹುದು. ರೇಷ್ಮೆ ವಸ್ತ್ರಗಳ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗಿ ಹೆಚ್ಚು ಲಾಭವಿರುತ್ತದೆ. ಕಬ್ಬಿಣದ ವ್ಯವಹಾರಗಳನ್ನು ಮಾಡುವವರಿಗೆ ವ್ಯವಹಾರ ವಿಸ್ತರಣೆ ಆಗುವ ಯೋಗವಿದೆ. ವಿದೇಶಿ ಸಂಸ್ಥೆಗಳ ಜೊತೆ ಹಣಕಾಸಿನ ವ್ಯವಹಾರವನ್ನು ಮಾಡುವವರಿಗೆ ಲಾಭ ಹೆಚ್ಚುತ್ತದೆ.

Leave a Comment

Your email address will not be published. Required fields are marked *