Ad Widget .

ಸುಳ್ಯ ತಾಲೂಕು ಆಡಳಿತದಲ್ಲಿ ಅಧಿಕಾರಿಗಳು ಆಡಿದ್ದೇ ಆಟ| ಮೌನಕ್ಕೆ ಶರಣಾದ ಜನಪ್ರತಿ”ನಿಧಿ”ಗಳು|

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನಾದ್ಯಂತ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆಯಲ್ಲಿ ವಾಸನೆ ಬಡಿಯುತ್ತಿದ್ದು ಇದೀಗ ಇದೇ ರೀತಿಯಲ್ಲಿ ನ್ಯಾಯಾಲಯದ ಆದೇಶ ಧಿಕ್ಕರಿಸಿ ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

Ad Widget . Ad Widget .

ಸುಳ್ಯದಲ್ಲಿ ಹಲವಾರು ತಿಂಗಳುಗಳ ಕಾಲ ಪೋಲೀಸ್ ಕಾವಲು ಕುಳಿತು ಕೋಮು ಸಂಘರ್ಷವನ್ನು ತಹಬದಿಗೆ ತಂದಿರುವ ಮೇನಾಲ ದರ್ಗಾ ಬಳಿಯ 155/1 ಮತ್ತು 155/ 2 ಸರ್ವೆ ನಂಬರ್ ಸರಕಾರಿ ಸ್ಥಳವಾಗಿದ್ದು ಕೆಲ ದಿನಗಳ ಹಿಂದೆ ಕಾಂಪೌಂಡ್ ವಿಚಾರವಾಗಿ ಭಾರಿ ಹೈ ಡ್ರಾಮವೇ ನಡೆದು ಸ್ಥಳಕ್ಕೆ ಸುಳ್ಯ ತಹಶೀಲ್ದಾರ್ ಕು.ಅನಿತಾಲಕ್ಷ್ಮಿ ಆಗಮಿಸಿ ಖಡಕ್ ಎಚ್ಚರಿಕೆ ನೀಡಿ ತೆರಳಿದ್ದರು.

Ad Widget . Ad Widget .

ಇತ್ತ ಈ ಪ್ರಕರಣವು ನ್ಯಾಯಾಲಯದಲ್ಲಿ ಇದ್ದು ಯಥಾಸ್ಥಿತಿ ಕಾಪಾಡಿಕೊಂಡು ಬರಲು ನ್ಯಾಯಾಲಯದ ಆದೇಶ ನೀಡಲಾಗಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ. ಆದರೆ ಇದೀಗ ಇದೇ ದರ್ಗಾದ ಹೆಸರಿನಲ್ಲಿ ಅಕ್ರಮವಾಗಿ ಒಂದು “ನೆಲಮಹಡಿ” (ಅಂಡರ್ ಗ್ರೌಂಡ್ ) ನಿರ್ಮಿಸುತ್ತಿದ್ದು ಇದೀಗ ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ವಿಚಾರವಾಗಿ ಸ್ಥಳೀಯ ನಾಗರಿಕರು ಜಿಲ್ಲಾಧಿಕಾರಿ , ಸಹಾಯಕ ಆಯುಕ್ತರು ಪುತ್ತೂರು , ಮತ್ತು ತಹಶೀಲ್ದಾರ್ ಸುಳ್ಯ ಇವರಿಗೆ ತಮ್ಮ ದೂರುಗಳನ್ನು ನೀಡಿದ್ದು ಇತ್ತ ಸ್ಥಳೀಯ ಪಂಚಾಯತ್ ಗಮನಕ್ಕೂ ತಂದಿದ್ದು ಆ ಸಂದರ್ಭದಲ್ಲಿ ಪಂಚಾಯತ್
ಅಧಿಕಾರಿಗಳ ವರ್ತನೆಯನ್ನು ಗಮನಿಸಿದಾಗ ಎಲ್ಲವೂ ಅಕ್ರಮಗಳಿಗೆ ಸಹಾಯ ನೀಡುತ್ತಿರುವ ರೀತಿಯಲ್ಲಿಯೇ ಮಾತುಗಳನ್ನಾಡುತ್ತಿದ್ದು ಇದೀಗ ಭಾರಿ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಸುಳ್ಯ ತಾಲೂಕಿನ ‌ನಾನಾ ಕಡೆಗಳಲ್ಲಿ ಅಕ್ರಮಗಳದ್ದೆ‌ ಕಾರುಬಾರುಗಳ ಬಗ್ಗೆ ಸಂದೇಶ ರವಾನೆಯಾಗುತ್ತಿದ್ದು ಇತ್ತ ರಾಜ್ಯ ಸರಕಾರದ ಪ್ರತಿನಿಧಿ ಸಚಿವ ಎಸ್ ಅಂಗಾರ ಅವರ ಸ್ವಂತ ಕ್ಷೇತ್ರದಲ್ಲಿ ಇಂತಹ ಘಟನೆಗಳು ಪದೇ ಪದೇ ಜರುಗುತ್ತಿದೆ. ತಾಲೂಕು ಆಡಳಿತದ ವಿರುದ್ದ ಇಡೀ ಕ್ಷೇತ್ರದ ಜನತೆ ರೋಸಿಹೊಗಿದ್ದು ಕಾನೂನು ಗಾಳಿಗೆ ತೂರಿ ಅಕ್ರಮಗಳಿಗೆ ಸಾಥ್ ನೀಡಲಾಗುತ್ತಿದೆಯೇ ಎಂಬ ಸಂಶಯ ಜನಸಾಮಾನ್ಯರದ್ದು.

ವರದಿ: ಮಿಥುನ್ ಸುಳ್ಯ .

Leave a Comment

Your email address will not be published. Required fields are marked *