ಚುನಾವಣೆಯಲ್ಲಿ ಸೋಲಿಸಲು ಪಕ್ಷೇತರರಿಗೆ ಹಣ ನೀಡಿಲ್ಲವೆಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ| ವಿಜಯೇಂದ್ರ, ನಿರಾಣಿಗೆ ಸವಾಲೆಸೆದ ಯತ್ನಾಳ್

ಸಮಗ್ರ ನ್ಯೂಸ್: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಪಕ್ಷೇತರ ಅಭ್ಯರ್ಥಿಗಳಿಗೆ ಒಂದು ರೂಪಾಯಿ ಹಣವನ್ನೂ ನೀಡಿಲ್ಲ ಎಂದು ಸಚಿವ ನಿರಾಣಿ ಹಾಗೂ ವಿಜಯೇಂದ್ರ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿ ಸನ್ನಿಧಾನದಲ್ಲಿ ಆಣೆ ಮಾಡಲಿ ಎಂದು ಶಾಸಕ ಯತ್ನಾಳ್ ಸವಾಲು ಹಾಕಿದ್ದಾರೆ.

Ad Widget ... ..

ವಿಜಯಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾಚಣೆಯಲ್ಲಿ ನನಗೆ ಟಿಕೆಟ್ ಕೊಡಿಸಲು, ಸೋಲಿಸಲು ನಿರಾಣಿ ಯಾರು ಎಂದು ಹರಿಹಾಯ್ದು, ಪಾಲಿಕೆ ಚುನಾವಣೆಯಲ್ಲಿ ನೀವು ಯಾರಿಗೆ ಎಷ್ಟು ಹಣ ಕೊಟ್ಟಿದ್ದೀರಿ ಎಂಬುದು ಗೊತ್ತು, ಈ ವಿಚಾರ ಚುನಾವಣಾ ವೀಕ್ಷಕರಿಗೆ, ಕೇಂದ್ರದ ನಾಯಕರಿಗೂ ತಿಳಿದಿದೆ.

Ad Widget

ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗಾಗಿ ಪಕ್ಷದಿಂದಾಗಲಿ, ನಿರಾಣಿ ಹಾಗೂ ವಿಜಯೇಂದ್ರ ಹಣ ನೀಡಿಲ್ಲ, ನಾವು ಹಣ ಪಡೆದಿಲ್ಲ. ನಗರದ ಮತದಾರರು ನಮ್ಮ ಅಭ್ಯರ್ಥಿಗಳಿಗೆ ಹಣ ಪಡೆಯದೇ ಅಭಿವೃದ್ಧಿಗಾಗಿ ಮತ ಹಾಕಿ ಗೆಲ್ಲಿಸಿದ್ದಾರೆ ಎಂದರು.

Leave a Comment

Your email address will not be published. Required fields are marked *