Ad Widget .

ಸುಳ್ಯ: ಧರ್ಮದಂಗಲ್ ನಡುವೆ ಮಿಂಚಿದ ಸೌಹಾರ್ದತೆಯ ಬೆಳಕು| ಅಯ್ಯಪ್ಪ ವೃತಧಾರಿ ಬಾಲಕನ ಕೈಹಿಡಿದು ದಾಟಿಸಿದ ಮುಸ್ಲಿಂ ಬಾಂಧವ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ಆಗಾಗ್ಗೆ ಭುಗಿಲೇಳುವ ಹಿಂದೂ -ಮುಸ್ಲಿಂ ಕೋಮು ಸಂಘರ್ಷದ ನಡುವೆ ಧರ್ಮಕ್ಕೂ ಮಿಗಿಲಾದ ಸೌಹಾರ್ದತೆಯ ಘಟನೆಯೊಂದು ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Ad Widget . Ad Widget .

ಧರ್ಮದಂಗಲ್ ನ ನಡುವೆ ಮುಸ್ಲಿಂ ವ್ಯಕ್ತಿಯೊಬ್ಬರು ಅಯ್ಯಪ್ಪ ಮಾಲಾಧಾರಿ ಪುಟ್ಟ ಬಾಲಕನ ಕೈ ಹಿಡಿದು ರಸ್ತೆ ದಾಟಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮನುಷ್ಯತ್ವಕ್ಕಿಂತ ಮಿಗಿಲಾದ ಧರ್ಮವಿಲ್ಲ ಎಂಬುದನ್ನು ಸಾರಿ ಹೇಳುವಂತಿದೆ.

Ad Widget . Ad Widget .

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿ ಎಂಬಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಯ ಸಂದೇಶ ಸಾರಿದ ವಿಶೇಷ ಘಟನೆ ನಡೆದಿದೆ. ಇಬ್ರಾಹಿಂ ಮೈಲಿಕಲ್ಲು ಅನ್ನುವ ಹಿರಿಯ ಮುಸ್ಲಿಂ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಎದುರಿಗೆ ಅಯ್ಯಪ್ಪ ಮಾಲಾಧಾರಿ ಬಾಲಕ ಎದುರಾಗಿದ್ದಾನೆ. ಆತ ರಸ್ತೆ ದಾಟುವುದಕ್ಕೆ ಪ್ರಯತ್ನಿಸುತ್ತಿದ್ದಾಗ ಆತನ ಕೈ ಹಿಡಿದು ಇಬ್ರಾಹಿಂ ರಸ್ತೆ ದಾಟಿಸಿದ್ದಾರೆ. ಅಲ್ಲದೆ ಆತನನ್ನು ಹಣ್ಣಿನ ಅಂಗಡಿಗೆ ಕರೆದುಕೊಂಡು ಹೋಗಿ ಹಣ್ಣು -ಹಂಪಲು ನೀಡಿ ಕಳುಹಿಸಿಕೊಟ್ಟಿದ್ದಾರೆ. ಇಬ್ರಾಹಿಂ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

1 thought on “ಸುಳ್ಯ: ಧರ್ಮದಂಗಲ್ ನಡುವೆ ಮಿಂಚಿದ ಸೌಹಾರ್ದತೆಯ ಬೆಳಕು| ಅಯ್ಯಪ್ಪ ವೃತಧಾರಿ ಬಾಲಕನ ಕೈಹಿಡಿದು ದಾಟಿಸಿದ ಮುಸ್ಲಿಂ ಬಾಂಧವ”

  1. ಮಾನವೀಯತೆ ಮರೆಯಲ್ಲ ಎಂಬ ದರ್ಪದಿಂದ
    ಮೈನವಿರೇಳಿಸುವ ಮಮತೆಯ ಧರ್ಮಗಳು.

Leave a Comment

Your email address will not be published. Required fields are marked *