Ad Widget .

ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ರೂಪೇಶ್ ಶೆಟ್ಟಿ| ಇಷ್ಟು ಬೇಗ ಮದ್ವೆಯಾದ್ರಾ ಬಿಗ್ ಬಾಸ್-9 ವಿನ್ನರ್?

ಸಮಗ್ರ ನ್ಯೂಸ್: ಬಿಗ್​ ಬಾಸ್ ಸೀಸನ್ 9ರ ವಿನ್ನರ್​​ ರೂಪೇಶ್​ ಶೆಟ್ಟಿ ಸಿಹಿ ಸುದ್ದಿ ನೀಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಫ್ಯಾನ್ಸ್​ಗಳು ರೂಪೇಶ್​ ಅವರನ್ನ ಮದುವೆ ಯಾವಾಗ ಎಂದು ಪ್ರಶ್ನಿಸುತ್ತಿದ್ದರು. ಆದರೆ ರೂಪೇಶ್ ಶೆಟ್ಟಿ​ ನನ್ನ ಕೆರಿಯರ್​ ಮೊದಲು ನೋಡಬೇಕು ಎಂದು ಉತ್ತರಿಸಿದ್ದರು

Ad Widget . Ad Widget .

ಆದರೀಗ ರೂಪೇಶ್​ ವಿವಾಹ ನೋಂದಣಾಧಿಕಾರಿ ಕಛೇರಿಯಲ್ಲಿ ಇದ್ದಾರೆ. ಆ ಮೂಲಕ ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಲು ಹೊರಟಿದ್ದಾರೆ. ಹಾಗಂತ ರೂಪೇಶ್ ಶೆಟ್ಟಿ​​ ಮದುವೆ ಆಗುತ್ತಿದ್ದಾರಾ ಎಂದು ಗೊಂದಲ ಆಗ್ಬೇಡಿ. ಖಂಡಿತಾ ರೂಪೇಶ್​​ ಮದುವೆ ಆಗುತ್ತಿದ್ದಾರೆ. ಆದರೆ ವಿವಾಹ ಕುರಿತಾದ ಕಥೆಯನ್ನು ಹೊಂದಿರುವ ಸಿನಿಮಾದ ಮೂಲಕ ಎಂಬುದು ವಿಶೇಷ.

Ad Widget . Ad Widget .

ಹೌದು. ರೂಪೇಶ್​ ಶೆಟ್ಟಿ ‘ಮಂಕುಭಾಯ್ ಫಾಕ್ಸಿ ರಾಣಿ​’ ಎಂಬ ಟೈಟಲ್​ನಲ್ಲಿ ನಾಯಕನಾಗಿ ನಟಿಸಿರುವ ಸಿನಿಮಾವನ್ನು ಲಾಂಚ್​ ಮಾಡಲು ಮುಂದಾಗಿದ್ದಾರೆ. ಆ ಮೂಲಕ ಅಭಿಮಾನಿಗಳ ರೂಪಿ ಹೊಸ ವರ್ಷಕ್ಕೆ ಮೊದಲ ಸಿನಿ ಸಿಹಿ ಸುದ್ದಿ ನೀಡುತ್ತಿದ್ದಾರೆ.

ಅಂದಹಾಗೆ, ರೂಪೇಶ್​ ಶೆಟ್ಟಿ ಅವರು ಮಂಕುಭಾಯ್ ಫಾಕ್ಸಿ ರಾಣಿ ಸಿನಿಮಾವನ್ನು 2019ರಲ್ಲಿ ನಟಿಸಿದ್ದಾರೆ. ಆದರೀಗ ಬಿಗ್​ ಬಾಸ್​ ಮನೆಯಿಂದ ಹೊರಬಂದ ಬಳಿಕ ಅದನ್ನು ತೆರೆ ಮೇಲೆ ಪ್ರದರ್ಶನ ಮಾಡಲು ಮುಂದಾಗಿದ್ದಾರೆ. ಇದೇ 13ನೇ ತಾರೀಕಿನಂದು ಈ ಸಿನಿಮಾ ತೆರೆ ಮೇಲೆ ಬರಲಿದೆ. ಇನ್ನು ಮಂಕುಭಾಯ್ ಫಾಕ್ಸಿ ರಾಣಿ ಸಿನಿಮಾದಲ್ಲಿ ನಾಯಕಿಯಾಗಿ ಗೀತಾ ಭಾರತಿ ಭಟ್​​ ನಟಿಸಿದ್ದಾರೆ.

ತುಳುವಿನಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ನಟ ರೂಪೇಶ್​ ಶೆಟ್ಟಿ ಇದೀಗ ಸ್ಯಾಂಡಲ್​ವುಡ್​ ಪರದೆಯ ಮೇಲೆ ದೊಡ್ಡದಾಗಿ ಮಿಂಚಬೇಕು ಎಂಬ ಕನಸು ಕಂಡಿದ್ದಾರೆ. ಬಿಗ್​ ಬಾಸ್​ ಮೂಲಕ ಜನರ ಪ್ರೀತಿಗಳಿಸಿ ವಿನ್ನರ್​ ಪಟ್ಟ ಅಲಂಕರಿಸಿದ ಶೆಟ್ರು ಹಿರಿ ಪರದೆಯ ಮೇಲೆ ಮೋಡಲು ಅಭಿಮಾನಿಗಳಂತೂ ಕಾದು ಕುಳಿತ್ತಿದ್ದಾರೆ.

Leave a Comment

Your email address will not be published. Required fields are marked *