Ad Widget .

ಯುವತಿಗೆ ಬೆತ್ತಲೆ ಚಿತ್ರತೋರಿಸಿ ಬ್ಲಾಕ್ ಮೇಲ್ ಮಾಡಿದಾತನ ಕೊಲೆಗೈದ ಸಹೋದರ

ಸಮಗ್ರ‌ ನ್ಯೂಸ್: ಬೆತ್ತಲೆ ಚಿತ್ರ ತೋರಿಸಿ ಯುವತಿಯನ್ನು ಬ್ಲಾಕ್ ಮೇಲ್ ಮಾಡಿದ ಯುವಕನನ್ನು ಆಕೆಯ ಸೋದರ ತನ್ನ ಸ್ನೇಹಿತನೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

Ad Widget . Ad Widget .

ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಹಳ್ಳಿ ಗ್ರಾಮದ ಚಂದ್ರಗೌಡ(25) ಕೊಲೆಯಾದ ಯುವಕ ಎಂದು ಹೇಳಲಾಗಿದೆ.

Ad Widget . Ad Widget .

ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ಬಿಳಿಗೆರೆ ಹುಂಡಿ ಗ್ರಾಮದ ಲಿಂಗರಾಜು ಮತ್ತು ಆತನ ಸ್ನೇಹಿತ ಎರಗನಹುಂಡಿ ಗ್ರಾಮದ ಕಿರಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಚಂದ್ರಗೌಡ ಯುವತಿಗೆ ಬೆತ್ತಲೆ ಚಿತ್ರ ತೋರಿಸಿ ಬ್ಲಾಕ್ಮೇಲ್ ಮಾಡುತ್ತಿದ್ದ. ಈತನ ಉಪಟಳ ಸಹಿಸಲಾರದೆ ಯುವತಿ ತನ್ನ ಸಹೋದರ ಲಿಂಗರಾಜು ಜೊತೆಗೆ ದೂರು ನೀಡಿದ್ದು, ಆತ ಸಹೋದರಿಯನ್ನು ಕೊಟ್ಟು ಮದುವೆ ಮಾಡುವುದಾಗಿ ಚಂದ್ರೇಗೌಡನಿಗೆ ತಿಳಿಸಿ ಬರಹೇಳಿದ್ದ ಎನ್ನಲಾಗಿದೆ. ಆತನನ್ನು ಕರೆಸಿಕೊಂಡ ಲಿಂಗರಾಜು ಹಾಗೂ ಸ್ನೇಹಿತ ಕಿರಣ್ ಜೊತೆ ಸೇರಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *