Ad Widget .

ನಾನಿನ್ನೂ ಕೆಜಿಎಫ್ 2 ನೋಡಿಲ್ಲ, ಅದು ನನ್ನ ಅಭಿರುಚಿಯ ಸಿನಿಮಾವಲ್ಲ -ನಟ ಕಿಶೋರ್

ಸಮಗ್ರ ನ್ಯೂಸ್: ಯಶ್ ನಾಯಕನಾಗಿ ನಟಿಸಿರುವ ಹೊಂಬಾಳೆ ಫಿಲಂ ಬ್ಯಾನರ್ ಅಡಿಯಲ್ಲಿ ತಯಾರಾದ ಕೆಜಿಎಫ್ – 2 ಸಿನೆಮಾದ ಬಗ್ಗೆ ನಟ ಕಿಶೋರ್ ಪ್ರತಿಕ್ರಿಯಿಸಿದ್ದಾರೆ. ತಾನಿನ್ನೂ ಕೆಜಿಎಫ್ ಸಿನಿಮಾ ನೋಡಿಲ್ಲ ಎಂದು ಕಿಶೋರ್‌ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Ad Widget . Ad Widget .

ಕೆಜಿಎಫ್‌ ಕುರಿತಾಗಿನ ಪ್ರಶ್ನೆಗೆ ಉತ್ತರಿಸಿದ ಕಿಶೋರ್‌, ”ತಾನಿನ್ನೂ ಕೆಜಿಎಫ್ ನೋಡಿಲ್ಲ, ಇದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ, ಕೆಜಿಎಫ್‌ ತನ್ನ ಅಭಿರುಚಿಗೆ ಹೊಂದುವ ಸಿನೆಮಾ ಅಲ್ಲ” ಎಂದು ಪ್ರಾಮಾಣಿಕವಾಗಿ ಹೇಳಿದ್ದಾರೆ.

Ad Widget . Ad Widget .

‘ಸಿನೆಮಾ ಎಷ್ಟೇ ಬ್ಲಾಕ್ ಬಸ್ಟರ್ ಆಗಿದ್ದರೂ ಸಿನೆಮಾ ನೋಡಬೇಕೋ ಬೇಡವೋ ಎಂಬುದು ನಮ್ಮ ವೈಯಕ್ತಿಕ ಆಯ್ಕೆ. ಇದಲ್ಲದೆ, ಗಂಭೀರವಾದ ವಿಷಯದ ಬಗ್ಗೆ ಇರುವ ಚಿತ್ರಗಳನ್ನು ನೋಡುತ್ತೇನೆ. ಕಡಿಮೆ ವೆಚ್ಚದ ಆದರೆ ಗಂಭೀರ ವಿಷಯಗಳನ್ನು ಹೇಳುವ ಚಿತ್ರಗಳು ತನಗೆ ಇಷ್ಟವಾಗುತ್ತವೆ’ ಎಂದು ಕಿಶೋರ್‌ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

‘ನಾನು ಇದನ್ನು ಹೇಳಬಹುದೇ ಎಂದು ನನಗೆ ಗೊತ್ತಿಲ್ಲ ಆದರೆ ನಾನು ಕೆಜಿಎಫ್ ನೋಡಿಲ್ಲ. ಇದು ನಿಜವಾಗಿಯೂ ನನ್ನ ಪ್ರಕಾರದ ಸಿನಿಮಾ ಅಲ್ಲ. ಸಿನಿಮಾ ನೋಡಬೇಕೋ ಬೇಡವೋ ಎಂಬುದು ನನ್ನ ವೈಯಕ್ತಿಕ ಆಯ್ಕೆ. ಸಕ್ಸಸ್ ಆಗದಿದ್ದರೂ ಸೀರಿಯಸ್ ಸಬ್ಜೆಕ್ಟ್ ಇಟ್ಟುಕೊಂಡು ಮಾಡಿದ ಚಿಕ್ಕ ಸಿನಿಮಾವನ್ನು ನೋಡುತ್ತೇನೆ’ ಎಂದು ಹೇಳಿರುವುದಾಗಿ ವರದಿಯಾಗಿದೆ.

Leave a Comment

Your email address will not be published. Required fields are marked *