Ad Widget .

ಆರೋಗ್ಯಕರ ಮೆಂತೆ ಮುದ್ದೆ ಹೀಗೆ ಮಾಡಿ| ಬೆಳಗಿನ ಬ್ರೇಕ್ ಪಾಸ್ಟ್ ರುಚಿ ಜೊತೆ ಪೌಷ್ಟಿಕಾಹಾರ ಆಗಿರಲಿ

ಸಮಗ್ರ ನ್ಯೂಸ್: ಮೆಂತೆ ಬಾಣಂತಿಯರಿಗಷ್ಟೇ ಅಲ್ಲದೇ ಬೆಳೆಯುವ ಮಕ್ಕಳಿಗೂ ಮೆಂತ್ಯ ಮುದ್ದೆ ಪೌಷ್ಟಿಕವಾದಂತಹ ಆಹಾರ ಆಗಿದೆ. ಇದು ಮಲೆನಾಡಿನ ಒಂದು ಸಾಂಪ್ರದಾಯಿಕ ರೆಸಿಪಿಯಾಗಿದ್ದು, ತಿನ್ನುವುದಕ್ಕೂ ಬಹಳ ರುಚಿಯಾಗಿರುತ್ತದೆ. ಈ ಮೆಂತ್ಯ ಮುದ್ದೆಯನ್ನು ಬಾಣಂತಿಯರಿಗೆ, ಮೊದಲ ಬಾರಿಗೆ ಋತುಮತಿಯಾದವರಿಗೆ, ವಯಸ್ಸಾದವರಿಗೆ ಹೆಚ್ಚಾಗಿ ನೀಡಲಾಗುತ್ತದೆ. ಇದರಿಂದ ಸೊಂಟಕ್ಕೆ ಶಕ್ತಿ ಬರುತ್ತದೆ ಎಂದು ಹೇಳಲಾಗುತ್ತದೆ. ಸೊಂಟದ ನೋವು, ಕೈ, ಕಾಲು ನೋವು ಇದ್ದವರಿಗೆ ಇದು ಆರೋಗ್ಯಕರವಾದ ಆಹಾರವಾಗಿದೆ. ಅದರಲ್ಲಿಯೂ ಬೆಳಗ್ಗಿನ ತಿಂಡಿಯಾಗಿ ಇದನ್ನು ತುಪ್ಪದ ಜೊತೆಗೆ ಸೇವಿಸುವುದು ಬಹಳ ಉತ್ತಮ. ಬೇಕಾದರೆ ಈ ಮುದ್ದೆಯನ್ನು ಸಾಂಬಾರ್ ಜೊತೆಗೆ ಸವಿಯಬಹುದು, ಆದರೆ ಇದು ಸಿಹಿಯಾದ ಮೆಂತ್ಯ ಮುದ್ದೆ ಆಗಿರುವುದರಿಂದ ತುಪ್ಪದೊಂದಿಗೆ ಸವಿಯಲು ಹೆಚ್ಚು ರುಚಿಕರವಾಗಿತ್ತದೆ.

Ad Widget . Ad Widget .

ಮೆಂತ್ಯ ಮುದ್ದೆ ಮಾಡಲು ಬೇಕಾಗಿರುವ ಸಾಮಾಗ್ರಿಗಳು
2 ಲೋಟ ಗೋಧಿ, 1 ಲೋಟ ಉದ್ದಿನ ಕಾಳು, 1 ಲೋಟ ಮೆಂತ್ಯ, 2 ಲೋಟ ಅಕ್ಕಿ, 1 ಲೋಟ ಬೆಲ್ಲ, 1 ಕಪ್ ತುಪ್ಪ

Ad Widget . Ad Widget .

ಮೆಂತ್ಯ ಮುದ್ದೆ ಮಾಡುವ ವಿಧಾನ:
ಮೊದಲಿಗೆ ಒಲೆ ಮೇಲೆ ಪ್ಯಾನ್ ಇಟ್ಟು ಅದಕ್ಕೆ 2 ಲೋಟ ಗೋಧಿ ಹಾಕಿ ಸ್ವಲ್ಪ ಬಿಸಿ ಮಾಡಿ, ಒಂದು ಪ್ಲೇಟ್​ನಲ್ಲಿ ಸುರಿದುಕೊಳ್ಳಬೇಕು. ನಂತರ 1 ಲೋಟ ಉದ್ದಿನ ಕಾಳನ್ನು ಉರಿದುಕೊಂಡು ಅದನ್ನು ಗೋಧಿ ಇರುವ ಪ್ಲೇಟ್​ಗೆ ಹಾಕಿಕೊಳ್ಳಬೇಕು. ಅದೇ ರೀತಿ 2 ಲೋಟದಷ್ಟು ಅಕ್ಕಿ ಉರಿದುಕೊಂಡು ಇದನ್ನು ಗೋಧಿ ಇರುವ ಪ್ಲೇಟ್​ಗೆ ಸುರಿದುಕೊಳ್ಳಬೇಕು. ಅದಕ್ಕೆ ಹುರಿಯದೇ ಇರುವ ಒಂದು ಲೋಟ ಮೆಂತ್ಯ ಸುರಿದು, ಎಲ್ಲವನ್ನು ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಫ್ಲೋರ್​ ಮಿಲ್​ನಲ್ಲಿ ನುಣ್ಣಗೆ ರುಬ್ಬಿಸಿಕೊಂಡು ಬನ್ನಿ.

ನಂತರ ತರಿ ತರಿ ಇಲ್ಲದ ಈ ಹಿಟ್ಟಿನಲ್ಲಿ ಒಂದು ಲೋಟ ಹಿಟ್ಟು, ಒಂದು ಲೋಟ ಬೆಲ್ಲವನ್ನು ಇಟ್ಟುಕೊಳ್ಳಬೇಕು. ಬಳಿಕ ಒಂದು ಪಾತ್ರೆಗೆ ಹಿಟ್ಟು ತೆಗೆದುಕೊಂಡ ಅಳತೆಯ ಲೋಟದಲ್ಲಿಯೇ ಒಂದೂವರೆ ಲೋಟದಷ್ಟು ನೀರನ್ನು ಹಾಕಿ, ಒಂದು ಲೋಟ ಬೆಲ್ಲ ಹಾಕಬೇಕು. ನಂತರ ಅರ್ಧ ಲೋಟ ಬೆಲ್ಲದ ನೀರನ್ನು ತೆಗೆದುಕೊಂಡು ಇಟ್ಟುಕೊಳ್ಳಬೇಕು.

ಉಳಿದಂತೆ ಕುದಿಯುತ್ತಿರುವ ಬೆಲ್ಲದ ನೀರಿಗೆ ಒಂದು ಗ್ಲಾಸ್ ಹಿಟ್ಟನ್ನು ಹಾಕಿ, ಇದೇ ವೇಳೆ ಎರಡು ಚಮಚದಷ್ಟು ತುಪ್ಪ ಹಾಕಿ, ಮುದ್ದೆ ತಿರುವುವಂತಹ ಕೋಲು ಅಥವಾ ಸ್ಪೋನಿನಿಂದ ಗಂಟು ಆಗದಂತೆ ತಿರುವಬೇಕು. ಒಲೆ ಮೇಲೆ ತಿರುವಲು ಸಾಧ್ಯವಾಗದಿದ್ದರೆ, ಕೆಳಗೆ ಪಾತ್ರೆಯನ್ನು ಇಳಿಸಿಕೊಂಡು ಗಂಟಾಗದಂತೆ ಮೃದುವಾಗುವವರೆಗೂ ಚೆನ್ನಾಗಿ ತಿರುವ ಬೇಕಾಗುತ್ತದೆ. ಅಗತ್ಯವಿದ್ದರೆ ತೆಗೆದಿಟ್ಟುಕೊಂಡಿದ್ದ ಬೆಲ್ಲದ ನೀರನ್ನು ಕೊಂಚ ಬೆರೆಸಿ, ಚೆನ್ನಾಗಿ ತಿರುವಬೇಕು. ನಂತರ ಕೊಂಚ ಉರಿಯಲ್ಲಿ ಹಿಟ್ಟನ್ನು ಬೇಯಿಸಿಕೊಳ್ಳಿ.

ಇದೇ ವೇಳೆ ಮತ್ತೊಂದು ತಟ್ಟೆಗೆ ಚೆನ್ನಾಗಿ ತುಪ್ಪ ಸವರಿ, ಒಲೆ ಮೇಲೆ ಪಾತ್ರೆಯಲ್ಲಿರುವ ಮೆಂತ್ಯ ಮುದ್ದೆಯನ್ನು ಹತ್ತಿಯಂತೆ ಮೃದುವಾಗುವವರೆಗೂ ಮತ್ತಷ್ಟು ಚೆನ್ನಾಗಿ ತಿರುವ ಬೇಕು. ನಂತರ ತುಪ್ಪ ಸವರಿರುವ ತಟ್ಟೆಗೆ ಬೇಯಿಸಿರುವ ಮೆಂತ್ಯ ಹಿಟ್ಟು ಹಾಕಿಕೊಂಡು, ಮುದ್ರೆ ಆಕಾರ ಬರುವಂತೆ ಬಿಸಿ, ಬಿಸಿ ಇರುವಾಗಲೇ ತಟ್ಟಿಕೊಳ್ಳಬೇಕು. ಬಳಿಕ ತಯಾರಾದ ಮುದ್ದೆಯನ್ನು ತುಪ್ಪದೊಂದಿಗೆ ಸವಿಯಬಹುದು.

Leave a Comment

Your email address will not be published. Required fields are marked *