Ad Widget .

ಬೆಳಗಾವಿ ನಮ್ಮದು, ಬೇಕಾದ್ರೆ ಮಹಾಜನ್ ವರದಿ ಓದ್ಕೋಳ್ಳಿ – ಸಾಹಿತ್ಯ ಸಮ್ಮೇಳನದಲ್ಲಿ ಗುಡುಗಿದ ಸಾಹಿತಿ ದೊಡ್ಡರಂಗೇಗೌಡ

ಸಮಗ್ರ ನ್ಯೂಸ್: ಮರಾಠಿಗರು ಇವತ್ತು ಬೆಳಗಾವಿ ನಮ್ಮದು ಅನ್ನುತ್ತಿದ್ದಾರೆ. ನಮ್ಮದು ಎಂದು ಹಠ ಮಾಡುತ್ತಿದ್ದಾರೆ. ಬಸ್ ಸುಡುವುದು ಮಾಡುತ್ತಿದ್ದಾರೆ. ಇದು ಬಗೆಹರಿಯುವಂತೆ ಕಾಣುತ್ತಿಲ್ಲ. ಬೆಳಗಾವಿಯ ಒಂದು ಅಂಗುಲ ಜಾಗವನ್ನೂ ಬಿಡುವುದಿಲ್ಲ. ಇದು ನಮ್ಮ ಶಪಥ. ಬೆಳಗಾವಿ ನಮ್ಮ ನಿಜವಾದ ಆಶಯ ಎಂದು ಸಾಹಿತಿ, ಹಾಗೂ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ದೊಡ್ಡರಂಗೇಗೌಡ ಹೇಳಿದರು.

Ad Widget . Ad Widget .

‘ನೀವೂ ಬೇಕಾದರೆ ಮನೆಗೆ ಹೋಗಿ ಮಹಾಜನ ವರದಿ ಓದಿರಿ. ಎಲ್ಲ ಪ್ರಕಾರಗಳಿಂದಲೂ ಬೆಳಗಾವಿ ನಮ್ಮದು. ಅದಕ್ಕೆ ಸಂಬಂಧಿಸಿದ ದಾಖಲೆಗಳು ಸಾಗರದಷ್ಟಿವೆ. ಗಡಿ ಬಿಕ್ಕಟ್ಟು ಏನಾದರೂ ಇದ್ದರೆ ಅದನ್ನು ಕಾನೂನಾತ್ಮಕವಾಗಿ, ಸಮಾಧಾನಚಿತ್ತದಿಂದ ಬಗೆಹರಿಸಿಕೊಳ್ಳಬೇಕೇ ವಿನಃ ಗಡಿ ಕ್ಯಾತೆ ಪದೇ ಪದೆ ಮಾಡುವುದು ಸಮಂಜಸವಲ್ಲ ಎಂದವರು ಗುಡುಗಿದರು.

Ad Widget . Ad Widget .

ಕನ್ನಡಕ್ಕೆ ಕಿಮ್ಮತ್ತು ಇಲ್ಲವೆನ್ನುವವರಿಗೆ ನೀವು ಮನಸ್ಸು ಮಾಡಿದರೆ, ಕನ್ನಡದ ಮಹತ್ವ ಗೊತ್ತಾಗುತ್ತದೆ. ಕನ್ನಡಕ್ಕೆ ನಿಜವಾದ ಪ್ರಬಲ ಶಕ್ತಿ ಇದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾಷೆ ನಮ್ಮದು. ಅವರನ್ನೀಗ ಸಾಂಸ್ಕೃತಿಕ ರಾಯಭಾರಿ ಎಂದು ಕರೆಯಬೇಕಾದ ಸಂದರ್ಭ ಬಂದಿದೆ. ಕನ್ನಡದ ಬಗೆಗಿನ ಈ ವರೆಗಿನ ಘೋಷಣೆಗಳ ಜತೆಗೆ ಕನ್ನಡ ಈಗ ವಿಶ್ವಮುಖಿ ಎಂಬ ಘೋಷಣೆ ಮಾಡುತ್ತೇನೆ ಎಂದು ತಮ್ಮದೇ ಘೋಷಣೆ ಸೇರಿಸಿದರು.

Leave a Comment

Your email address will not be published. Required fields are marked *