Ad Widget .

ದಲೈಲಾಮಾರತ್ತ ತಿರುಗಿ ನೋಡಿದ ಜಗತ್ತು| ಅಷ್ಟಕ್ಕೂ ಭಾರತ- ಚೀನಾ ಬಗ್ಗೆ ಅವ್ರು ಹೇಳಿದ್ದೇನು?

ಸಮಗ್ರ ನ್ಯೂಸ್: ಟಿಬೆಟಿಯನ್ ಧಾರ್ಮಿಕ ಮುಖಂಡ ದಲೈ ಲಾಮಾ ಅವರು ಭಾರತ ಮತ್ತು ಚೀನಾ ಒಟ್ಟಿಗೆ ಕೆಲಸ ಮಾಡಲು ಕೇಳಿಕೊಂಡಿದ್ದಾರೆ. ಭಾರತ ಮತ್ತು ಚೀನಾದ ಜನರು ಅಹಿಂಸೆ ಮತ್ತು ಸಹಾನುಭೂತಿಯ ಮಾರ್ಗವನ್ನ ಅನುಸರಿಸುವ ಮೂಲಕ ಆಂತರಿಕ ಶಾಂತಿಗಾಗಿ ಶ್ರಮಿಸಿದ್ರೆ, ಇಡೀ ಜಗತ್ತಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಯೋಜನವಾಗುತ್ತದೆ ಎಂದು ದಲೈಲಾಮಾ ಹೇಳಿದರು.

Ad Widget . Ad Widget .

ದಲೈಲಾಮಾರ ಈ ಹೇಳಿಕೆ ಜಗತ್ತಿನಾದ್ಯಂತ ಭಾರೀ ಮಹತ್ವ ಪಡೆದುಕೊಂಡಿದೆ. ಬಾಹ್ಯ ನಿಶ್ಯಸ್ತ್ರೀಕರಣ ಅಗತ್ಯ. ಆದ್ರೆ, ಆಂತರಿಕ ನಿರಸ್ತ್ರೀಕರಣವೂ ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿಲ್ಲ ಎಂದಿರುವುದು ಆರ್ಥಿಕ ಶಕ್ತಿಗಳಿಗೆ ಆಶ್ಚರ್ಯ ತಂದಿದೆ.

Ad Widget . Ad Widget .

ಕರುಣೆಯ ಸಂಪತ್ತಿನಲ್ಲಿ ಅಡಗಿರುವ ಅಹಿಂಸೆ ಮತ್ತು ಶಾಂತಿಯುತ ತಿಳುವಳಿಕೆಯ ಮಹಾನ್ ಸಂಪ್ರದಾಯದಿಂದಾಗಿ ಭಾರತವು ಪ್ರಮುಖ ಪಾತ್ರವನ್ನ ವಹಿಸುತ್ತದೆ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ’ ಎಂದು 87 ವರ್ಷದ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ಮನೋರಮಾಗೆ ಬರೆದ ಲೇಖನದಲ್ಲಿ ಬರೆದಿದ್ದಾರೆ. ‘ಅಂತಹ ಜ್ಞಾನವು ಯಾವುದೇ ಒಂದು ಧರ್ಮವನ್ನ ಮೀರಿದೆ ಮತ್ತು ಸಮಕಾಲೀನ ಸಮಾಜದಲ್ಲಿ ಹೆಚ್ಚು ಸಮಗ್ರ ಮತ್ತು ನೈತಿಕ ಆಧಾರಿತ ಜೀವನ ವಿಧಾನವನ್ನ ಉತ್ತೇಜಿಸುವ ಸಾಮರ್ಥ್ಯವನ್ನ ಹೊಂದಿದೆ’ ಎಂದು ಅವರು ಹೇಳಿದರು.

ಅದಕ್ಕಾಗಿಯೇ ನಾನು ಸಹಾನುಭೂತಿ ಮತ್ತು ಅಹಿಂಸೆಗಾಗಿ ಪ್ರತಿಯೊಬ್ಬರನ್ನ ಪ್ರೋತ್ಸಾಹಿಸುತ್ತೇನೆ. ವಿಶ್ವ ಶಾಂತಿಗಾಗಿ, ಜನರು ತಮ್ಮ ಮನಸ್ಸನ್ನ ಶಾಂತಗೊಳಿಸಬೇಕಾಗಿದೆ ಮತ್ತು ಭೌತಿಕ ಅಭಿವೃದ್ಧಿ ಮತ್ತು ಸಂತೋಷಕ್ಕಿಂತ ಇದು ಮುಖ್ಯವಾಗಿದೆ ಎಂದು ಹೇಳಿದರು.

Leave a Comment

Your email address will not be published. Required fields are marked *