ಸಮಗ್ರ ನ್ಯೂಸ್: ಮೀಸೆ ಚಿಗುರುವ ಹೊತ್ತಿನಲ್ಲಿ ಕಾಮ ತೀರಿಸಿಕೊಳ್ಳಲು ಅಮಾಯಕ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದ ಕಾಮುಕ ಯುವಕನೋರ್ವನ ವಿರುದ್ಧ ಪುತ್ತೂರಿನ ಸಂಪ್ಯ ಹೊರಠಾಣೆ ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ಪುತ್ತೂರಿನಲ್ಲಿ ಖಾಸಗಿ ಕೆಲಸ ಮಾಡುತ್ತಿರುವ ನಿತೇಶ್ ರೈ ಎಂದು ಆರೋಪಿಯನ್ನು ಗುರುತಿಸಲಾಗಿದ್ದು ಈತನ ಕಾಮದ ವಿಚಾರ ಎರಡು ಮೂರು ತಿಂಗಳ ಹಿಂದೆ ಬಯಲಾಗಿತ್ತು. ಈತ ನೀಡಿದ ಕಿರುಕುಳದ ಬಗ್ಗೆ ಹಲವು ಹೆಣ್ಣು ಮಕ್ಕಳು ಆರೋಪವನ್ನು ಮಾಡಿದ್ದರು.
ಈತ ತನ್ನ ಕೆಲಸದ ಸಂದರ್ಭಗಳಲ್ಲಿ ಹಲವು ಊರುಗಳಿಗೆ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಅಲ್ಲಿನ ಹೆಣ್ಣು ಮಕ್ಕಳ ನಂಬರ್ ಪಡೆದುಕೊಂಡು ಅವರೊಂದಿಗೆ ಸಲುಗೆ ಬೆಳೆಸಿಕೊಂಡು ಬಳಿಕ ಪ್ರೀತಿಸುತ್ತೇನೆ ಎಂದು ನಾಟಕವಾಡಿ ಅವರನ್ನ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಸಿಕ್ಕಸಿಕ್ಕಲ್ಲಿ ಅಮಾಯಕ ಹೆಣ್ಣು ಮಕ್ಕಳ ನಂಬರ್ ಪಡೆದುಕೊಂಡು ಅವರನ್ನ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಎಂದು ಈತನ ವಿರುದ್ದ ಆರೋಪಿಸಲಾಗಿದೆ.
ಅಪ್ರಾಪ್ತ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು, ಅಕೆಯ ಬಳಿ ಪ್ರೀತಿಸುತ್ತಿದ್ದೇನೆ ಎಂದು ನಾಟಕವಾಡಿ ದೌರ್ಜನ್ಯ ಎಸಗಿ, ನಂತರ ನಿರಂತರವಾಗಿ ಅಕೆಯ ಫೋಟೋಗಳನ್ನು ಸೆರೆಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ. ಅಲ್ಲದೆ ಈತನ ಸ್ನೇಹಿತರಿಗೂ ಆಕೆಯ ನಂಬರ್ ನೀಡಿ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಕಿರುಕುಳ ನೀಡುತ್ತಿದ್ದ. ಇದನ್ನು ತಿಳಿದ ಹುಡುಗಿಯ ಪೋಷಕರು ಹಾಗೂ ಸ್ಥಳೀಯರು ಸೇರಿ ಈತನನ್ನ ಹೆಡೆಮುರಿಕಟ್ಟಿ ಧರ್ಮದೇಟು ನೀಡಿದ್ದರು.
ಇದೀಗ ನಿತೇಶ್ ರೈ ವಿರುದ್ಧ ಸಂಪ್ಯ ಠಾಣೆಯಲ್ಲಿ ಇಬ್ಬರು ಯುವತಿಯರು ದೂರನ್ನು ನೀಡಿದ್ದು, ಫೋಕ್ಸೋ, ಹಾಗೂ ದೌರ್ಜನ್ಯ ಎಸಗಿದ ಆರೋಪದಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಸದ್ಯ ಈತನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.