ಶಬರಿಮಲೆಯಲ್ಲಿ ಹಾರಿಬಿಟ್ಟ ಪಾರಿವಾಳ ಮರಳಿ ಗೂಡು ತಲುಪಿತು| ಇದು ಅಯ್ಯಪ್ಪನ ಪವಾಡವೇ?

ಸಮಗ್ರ ನ್ಯೂಸ್: ಚಿತ್ರದುರ್ಗದಲ್ಲಿ ಆಶ್ಚರ್ಯಕರ ಸಂಗತಿಯೊಂದು ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾ. ಮೇಗಳಹಟ್ಟಿ ಗ್ರಾಮದಲ್ಲಿ ಪಾರಿವಾಳ ಪವಾಡ ಮಾಡಿದೆ. ಶಬರಿಮಲೆ ಯಾತ್ರೆಯಲ್ಲಿ ಬಿಟ್ಟ ಪಾರಿವಾಳ ಮರಳಿ ತನ್ನ ಗೂಡಿಗೆ ಸೇರಿದೆ. ಕೇರಳದಲ್ಲಿ ಬಿಟ್ಟ ಮಾಲಾಧಾರಿಯ ಪಾರಿವಾಳ ಮರಳಿ ಗೂಡಿಗೆ ಬಂದಿದೆ.

Ad Widget ... ..

ಮೇಗಳಹಟ್ಟಿ ಗ್ರಾಮದ ವೆಂಕಟೇಶ್ ಅವರ ಪಾರಿವಾಳ ಡಿ.30 ರಂದು ಶಬರಿಮಲೆಯಲ್ಲಿ ಹಾರಿ ಬಿಟ್ಟಿದ್ದರು. ನಾಲ್ಕು ದಿನಗಳ ಬಳಿಕ ಆ ಪಾರಿವಾಳ ಮೇಗಳಹಟ್ಟಿ ಗ್ರಾಮಕ್ಕೆ ಆಗಮಿಸಿದೆ. ಪಾರಿವಾಳ ಆಗಮಿಸಿದ್ದನ್ನು ಕಂಡು ಗ್ರಾಮಸ್ಥರಲ್ಲಿ ಅಚ್ಚರಿ ಹುಟ್ಟುಹಾಕಿದೆ.

Ad Widget

ಕೇರಳ ರಾಜ್ಯದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವು ವಿಶ್ವ ವಿಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿದೆ. ಈ ದೇವಸ್ಥಾನದ ಐತಿಹ್ಯಗಳೇ ಸಾಕು ನಮ್ಮನ್ನು ವಿಸ್ಮಯಗೊಳಿಸಲು. ಹೀಗಿರುವಾಗ ಪಾರಿವಾಳ ಅಯ್ಯಪ್ಪನ ಆಶೀರ್ವಾದ ಪಡೆದು ಪುನ: ಆಗಮಿಸಿದೆ ಎಂದು ಹೇಳಲಾಗುತ್ತದೆ.

Leave a Comment

Your email address will not be published. Required fields are marked *