Ad Widget .

ಕರ್ನಾಟಕದಲ್ಲಿ ಕಾಣಿಸಿಕೊಂಡ ಓಮಿಕ್ರಾನ್ XBB 1.5 ಉಪತಳಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕೊರೊನಾ ಸೋಂಕಿನ ಹೆಚ್ಚಳದ ಆತಂಕದ ನಡುವೆಯೇ ಜನತೆಗೆ ಬಿಗ್ ಶಾಕ್ ಎದುರಾಗಿದ್ದು, ಅಮೆರಿಕದ ಜನರನ್ನು ಕಾಡಿದ್ದ ಕೋವಿಡ್ ಒಮಿಕ್ರಾನ್ ನ ಎಕ್ಸ್ ಬಿಬಿ 1.5 ಉಪತಳಿ ಕರ್ನಾಟಕದಲ್ಲೂ ಪತ್ತೆಯಾಗಿದೆ.

Ad Widget . Ad Widget .

ಜಿನೋಮಿಕ್ ಸೀಕ್ವೇನ್ಸ್ ಪರೀಕ್ಷೆಯಲ್ಲಿ ಉಪತಳಿ ಎಕ್ಸ್ ಬಿಬಿ 1.5 ಸೋಂಕು ಪತ್ತೆಯಾಗಿದ್ದು, ದೇಶದಲ್ಲಿ ಎಚ್ ಬಿಬಿ 1.5 ತಳಿಯ ಸೋಂಕು ಪ್ರಕರಣಗಳ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ. ರಾಜಸ್ಥಾನದಲ್ಲಿ ಒಂದು, ಗುಜರಾತ್ ನಲ್ಲಿ ಮೂವರಲ್ಲಿ ಹಾಗೂ ಕರ್ನಾಟಕದ ಒಬ್ಬರಲ್ಲಿ ಎಕ್ಸ್ ಬಿಬಿ 1.5 ಸೋಂಕು ಪತ್ತೆಯಾಗಿದೆ.

Ad Widget . Ad Widget .

ಇನ್ನು ಕೊರೊನಾ ರೂಪಾಂತರಿ ಓಮಿಕ್ರಾನ್ ಉಪತಳಿ ಬಿಎಫ್. 7 ದೇಶಕ್ಕೆ ಕಾಲಿಟ್ಟ ಬಳಿಕ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಕಳೆದ ವಾರ ಕೊರೊನಾ ಸೋಂಕಿತರ ಸಂಖ್ಯೆ 116 ರಷ್ಟಿದ್ದು, ಈವಾರ 276ಕ್ಕೆ ಏರಿಕೆಯಾಗಿದೆ.

Leave a Comment

Your email address will not be published. Required fields are marked *