Ad Widget .

ಇಂಡೋ – ಶ್ರೀಲಂಕಾ ಟಿ.20 ಸರಣಿ| ಶುಭಾರಂಭ ಮಾಡಿದ ಟೀಂ ಇಂಡಿಯಾ

ಸಮಗ್ರ ನ್ಯೂಸ್: ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಂ ಇಂಡಿಯಾ ತಂಡ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ T20 ಸರಣಿಯನ್ನು ಆರಂಭಿಸಿದೆ. ಸರಣಿಯ ಮೊದಲ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದು, ಎರಡು ರನ್ ಗಳ ರೋಚಕ ಜಯ ಗಳಿಸಿದೆ.

Ad Widget . Ad Widget .

ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಡಿದ ಭಾರತ ತಂಡವು ಲಂಕಾಗೆ 163 ರನ್​ಗಳ ಟಾರ್ಗೆಟ್​ ನೀಡಿತು. ಈ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ತಂಡವು ನಿಗದಿತ 20 ಓವರ್​ಗಳಲ್ಲಿ 10 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಈ ಮೂಲಕ ಭಾರತ ತಂಡಕ್ಕೆ 2 ರನ್ ಗಳ ರೋಚಕ ಜಯ ದೊರಕಿತು. ಈ ಮೂಲಕ ಟೀಂ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Ad Widget . Ad Widget .

ಶ್ರೀಲಂಕಾ ವಿರುದ್ಧದ ಮೊದಲು ಟಿ20 ಪಂದ್ಯದ ಮೂಲಕ ಬೌಲರ್​ ಶಿವಂ ಮಾವಿ ಮತ್ತು ಶುಭ್​ಮನ್ ಗಿಲ್​ ಟಿ20 ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಆದರೆ ಶಿವಂ ಮಾವಿ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಮಿಂಚುವ ಮೂಲಕ ಎಲ್ಲರ ಗಮನ ಸೆಳೆದರು. ಅವರು 4 ಒವರ್​ ಬೌಲ್ ಮಾಡಿ 22 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದರು. ಉಳಿದಂತೆ ಉಮ್ರಾನ್ ಮಲ್ಲಿಕ್ ಮತ್ತು ಹರ್ಷಲ್ ಪಟೇಲ್ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

Leave a Comment

Your email address will not be published. Required fields are marked *