ಸಮಗ್ರ ನ್ಯೂಸ್: ನಡೆದಾಡುವ ಸಂತ, ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ವಿಜಯಪುರದ ಜ್ಞಾನಯೋಗ ಆಶ್ರಮದ ಆವರಣದಲ್ಲಿ ನಡೆದಿದೆ. ಶ್ರೀಗಳು ವಿಲ್‌ನಲ್ಲಿ ಬರೆದಿರುವಂತೆ ಮಣ್ಣು ಮಾಡುವ ಬದಲು, ಅವರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಗಿದೆ. ಈ ಮೂಲಕ ಶ್ರೀಗಳ ಇಹಲೋಕದ ಯಾತ್ರೆ ಮುಗಿದಿದ್ದು, ಪಂಚಭೂತಗಳಲ್ಲಿ ಸ್ವಾಮೀಜಿ ಲೀನರಾಗಿದ್ದಾರೆ.
ವಿಜಯಪುರದ ಜ್ಞಾನ ಯೋಗಾಶ್ರಮದ ಆವರಣದಲ್ಲಿಯೇ ಸಿದ್ದೇಶ್ವರ ಸ್ವಾಮೀಜಿ ಅಂತ್ಯಸಂಸ್ಕಾರ ನಡೆಯಿತು. ಇಂದು(ಡಿ.3) ಬೆಳಗ್ಗೆಯಿಂದ ವಿಜಯಪುರ ಸೈನಿಕ ಶಾಲೆ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಕಳೆದ 8 ವರ್ಷಗಳ ಹಿಂದೆ, ಅಂದರೆ 2014ರಲ್ಲಿಯೇ ತಮ್ಮ ಅಂತ್ಯಸಂಸ್ಕಾರದ ಕುರಿತಂತೆ ಸಿದ್ದೇಶ್ವರರು ವಿಲ್‌ನಲ್ಲಿ ಬರೆದಿದ್ದರು.
“ನನ್ನನ್ನು ಮಣ್ಣು ಮಾಡುವಂತಿಲ್ಲ, ಅಗ್ನಿಸ್ಪರ್ಶ ಮಾಡಬೇಕು, ಚಿತಾಭಸ್ಮವನ್ನು ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಿ, ಶ್ರಾದ್ಧೀಯ ಕರ್ಮಗಳನ್ನು ಮಾಡುವಂತಿಲ್ಲ” ಅಂತ ಬರೆದಿದ್ದರು. ಅದರ ಪ್ರಕಾರವೇ ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.