Ad Widget .

ಮೆಸ್ಕಾಂ ಗ್ರಾಹಕರಿಗೆ ದರ ಏರಿಕೆ ಶಾಕ್| ಯೂನಿಟ್ ಗೆ 1.38 ರೂ ಹೆಚ್ಚಳಕ್ಕೆ ಪ್ರಸ್ತಾವನೆ

ಸಮಗ್ರ ನ್ಯೂಸ್: ಹೊಸ ವರ್ಷದ ಆರಂಭದಲ್ಲೇ ಮೆಸ್ಕಾಂ ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆಯ ಶಾಕ್‌ ನೀಡಿದೆ. ಪ್ರತಿ ಯೂನಿಟ್ ಗೆ 1.38 ರೂ. ಗಳಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಮೆಸ್ಕಾಂ ಈಗಾಗಲೇ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ ನೀಡಿದೆ.

Ad Widget . Ad Widget .

ಮೆಸ್ಕಾಂ ತನ್ನ ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆಯ ಶಾಕ್‌ ನೀಡುತ್ತಿದ್ದು, 2023-24ನೇ ಸಾಲಿಗೆ ಘಟಕದ ಬೆಲೆಯನ್ನು 1.38 ರೂ.ಗಳಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಮುಂದಿಟ್ಟಿದೆ. ಮೆಸ್ಕಾಂ ಪ್ರಕಾರ ಪ್ರತಿ ಘಟಕಕ್ಕೆ 9.93 ರೂ. ದರವಿದ್ದು, ಸದ್ಯ ಪ್ರತಿ ಯೂನಿಟ್‌ಗೆ 7.95 ರೂ.ಗಳನ್ನು ಗ್ರಾಹಕರಿಗೆ ವಿಧಿಸುತ್ತಿದೆ. ಅಂದರೆ ಮೆಸ್ಕಾಂ ಗೆ ಪ್ರತಿ ಯೂನಿಟ್‌ ಗೆ 1.38 ರೂ.ಗಳ ಕೊರತೆಯಿದೆ. ಹಾಗಾಗಿ ಮೆಸ್ಕಾಂ ಪ್ರಕಾರ ವಿದ್ಯುತ್‌ ಬೆಲೆ ಏರಿಕೆ ಅನಿವಾರ್ಯವಾಗಿದೆ.

Ad Widget . Ad Widget .

ನಗರ ಪ್ರದೇಶಗಳಲ್ಲಿ ಎಲ್‌ ಟಿ- 2 ಸಂಪರ್ಕಕ್ಕೆ ಪ್ರಸ್ತುತ ಪ್ರತಿ ಕಿಲೋ ವ್ಯಾಟ್ ಗೆ 100 ರೂ. ಇದ್ದು, ಇದನ್ನು 150 ರೂ.ಗೆ ಹೆಚ್ಚಿಸಲು ಮೆಸ್ಕಾಂ ಮುಂದಾಗಿದೆ. ಹೆಚ್ಚುವರಿ ಕಿಲೋವ್ಯಾಟ್‌ಗೆ 100 ರೂ. ಇಂದ 110 ರೂ. ಗೆ ಮತ್ತು 50 ಕಿಲೋವ್ಯಾಟ್‌ಗೆ ಪ್ರಸ್ತುತ ಶುಲ್ಕ 160 ರೂ. ಇಂದ ಹೆಚ್ಚುವರಿ ಶುಲ್ಕ 175 ರೂ. ಗೆ ಹೆಚ್ಚಿಸಲು ಮುಂದಾಗಿದೆ.

Leave a Comment

Your email address will not be published. Required fields are marked *