Ad Widget .

ದಾರಿಬಿಡಿ ಎಂದು‌ ಗದರಿದ್ದಕ್ಕೆ ಯುವಕನಿಗೆ ಸಾವಿನ ದಾರಿ‌ ತೋರಿದ ಅಪ್ರಾಪ್ತ ಬಾಲಕರು|

ಸಮಗ್ರ ನ್ಯೂಸ್: ಆರು ಮಂದಿ ಅಪ್ರಾಪ್ತ ಬಾಲಕರು 22 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಮುಖ್ಯ ರಸ್ತೆಯಲ್ಲಿ ಜನಸಂದಣಿಯಲ್ಲಿ ಜಗಳವಾಡಿ ಚಾಕುವಿನಿಂದ ಇರಿದಿದ್ದಾರೆ. ಚಿಕಿತ್ಸೆ ವೇಳೆ ಯುವಕ ಸಾವನ್ನಪ್ಪಿದ್ದು, ಎಲ್ಲಾ ಅಪ್ರಾಪ್ತರು ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ ಇಬ್ಬರು ಒಂಬತ್ತನೇ ತರಗತಿ ವಿದ್ಯಾರ್ಥಿಗಳೆಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

Ad Widget . Ad Widget .

ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯು ನಗರದ ಭನ್ವಾರ್ಕುವಾನ್ ಪ್ರದೇಶದಲ್ಲಿ ಸಂಭವಿಸಿದೆ. ಆಯುಷ್ ಎಂಬ ಯುವಕ ಬೈಕ್​ನಲ್ಲಿ ಹೋಗುತ್ತಿದ್ದ. ಬಾಲಕರ ಗುಂಪು ರಸ್ತೆಯ ಮೇಲೆ ಇದ್ದುದರಿಂದ ಆಯುಷ್​ ಹಾರ್ನ್ ಮಾಡಿ ಹುಡುಗರನ್ನು ಸರಿಯುವಂತೆ ಹೇಳಿದ್ದಾನೆ. ಗುಂಪನ್ನು ಬಿಟ್ಟು ದಾರಿ ತೆರವುಗೊಳಿಸುವಂತೆ ಸೂಚಿಸಿದ್ದಾನೆ.

Ad Widget . Ad Widget .

ಇದು ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ನಂತರ ಅಪ್ರಾಪ್ತರಲ್ಲಿ ಒಬ್ಬ ದ್ವಿಚಕ್ರ ವಾಹನದ ಹಿಂದೆ ಓಡಿ ಬಂದು ಆಯುಷ್‌ಗೆ ಇರಿದಿದ್ದಾನೆ. ಇದರ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೂಡಲೇ ಆಯುಷ್‌ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಎಲ್ಲಾ ಆರು ಅಪ್ರಾಪ್ತರನ್ನು ಬಂಧಿಸಲಾಗಿದೆ ಮತ್ತು ಕೊಲೆ ಆರೋಪ ಹೊರಿಸಲಾಗಿದೆ.

Leave a Comment

Your email address will not be published. Required fields are marked *