Ad Widget .

ಪಿರಿಯಾಪಟ್ಟಣ ಚರ್ಚ್ ದಾಳಿಗೆ ಬಿಗ್ ಟ್ವಿಸ್ಟ್| ಬಂಧಿತ ಬಾಯ್ಬಿಟ್ಟ ಅಸಲಿ ಸತ್ಯ ಏನು?

ಸಮಗ್ರ ನ್ಯೂಸ್: ಕ್ರಿಸ್ ಮಸ್ ನ ಮರುದಿನ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಬಾಲಯೇಸು ಪ್ರತಿಮೆ ಧ್ವಂಸಗೈದ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ವರದಿಯಾಗಿತ್ತು. ಪ್ರಕರಣ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಸಂಬಳ ನೀಡದಿದ್ದಕ್ಕೆ ಕಳ್ಳತನ ಮಾಡಲಾಗಿದೆ ಎಂದು ಬಾಯ್ಬಿಟ್ಟಿದ್ದಾನೆ.

Ad Widget . Ad Widget .

ಈ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಹೇಳಿಕೆ ನೀಡಿದ್ದು, ವಿಶ್ವ ಎಂಬ ಪೌರ ಕಾರ್ಮಿಕನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಎರಡು ತಿಂಗಳಿನಿಂದ ಚರ್ಚ್ನಲ್ಲಿ ಸಂಬಳ ಕೊಟ್ಟಿರಲಿಲ್ಲ. ಕ್ರಿಸ್ ಮಸ್ ಹಬ್ಬದ ವೇಳೆ ಫಾದರ್ ಜೊತೆ ಮಾತನಾಡಲು ಚರ್ಚ್ ಗೆ ಬಂದಿದ್ದ. ಈ ವೇಳೆ ಫಾದರ್ ಭೇಟಿಯ ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ಹುಂಡಿ ಕಳ್ಳತನ ಮಾಡಲು ನಿರ್ಧಾರ ಮಾಡಿದ್ದನು, ಅಂದಾಜು 2 ರಿಂದ 3 ಸಾವಿರ ಹಣ ಕಳ್ಳತನ ಮಾಡಿದ್ದಾನೆ ಎಂದು ಹೇಳಿದ್ದಾರೆ.

Ad Widget . Ad Widget .

ಕಾಣಿಕೆ ಹುಂಡಿ ಕಳ್ಳತನ ಮಾಡಿ ಬಾಲ ಏಸುವಿನ ಮೂರ್ತಿ, ತೊಟ್ಟಿಲು ಧ್ವಂಸ ಮಾಡಲಾಗಿತ್ತು. ಚರ್ಚ್ ಹೊರಗಿದ್ದ ಹುಂಡಿಯನ್ನು ಖದೀಮರು ಕದ್ದೊಯ್ಯಲಾಗಿತ್ತು. ಘಟನೆ ನಡೆದ ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದರು.

Leave a Comment

Your email address will not be published. Required fields are marked *