ಜೈಲಿನ ಮೇಲೆ ಬಂದೂಕು ದಾಳಿ| 10 ಭದ್ರತಾ ಸಿಬ್ಬಂದಿ ‌4 ಮಂದಿ ಕೈದಿಗಳು ಸಾವು

ಸಮಗ್ರ ನ್ಯೂಸ್: ಕಾರಾಗೃಹದ ಮೇಲೆ ಬಂದೂಕುಧಾರಿಗಳಿಂದ ಭೀಕರ ದಾಳಿ ನಡೆದ ಪರಿಣಾಮ 10 ಭದ್ರತಾ ಸಿಬ್ಬಂದಿ ಮತ್ತು ನಾಲ್ವರು ಕೈದಿಗಳು ದುರ್ಮರಣಕ್ಕೀಡಾದ ಘಟನೆ ಅಮೆರಿಕಾದ ಮೆಕ್ಸಿಕೊದಲ್ಲಿ ನಡೆದಿದೆ.

Ad Widget ... ..

ಟಕ್ಸಾಸ್‍ನ ಎಲ್‍ಪಾಸೋ ಪ್ರಾಂತ್ಯದ ಗಡಿಯಾಚೆಗಿನ ಸಿಯುಡಾಡ್, ಜುರೇಜ್ ಎಂಬಲಿರುವ ಮೆಕ್ಸಿಕೋದ ಕಾರಾಗೃಹದ ಮೇಲೆ ಬಂದೂಕುಧಾರಿಗಳು ಏಕಾಏಕಿ ದಾಳಿ ಮಾಡಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

Ad Widget

ಹಲವು ಶಸ್ತ್ರಸಜ್ಜಿತ ವಾಹನಗಳೊಂದಿಗೆ ಬಂದ ಬಂದೂಕುಧಾರಿಗಳು ಕಾವಲುಗಾರರ ಮೇಲೆ ಗುಂಡಿನ ಮಳೆಗೆರೆದರು ಎಂದು ಚಿವಾಹೊ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

ಈ ಘಟನೆಯಲ್ಲಿ 13 ಜನ ಗಾಯಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ 24 ಕೈದಿಗಳು ಪರಾರಿಯಾಗಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿ ಮೆಕ್ಸಿಕನ್ ಪೆಪೊಲೀಸರು ಮತ್ತು ಸೈನಿಕರು ಜೈಲನ್ನು ನಿಯಂತ್ರಣಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment

Your email address will not be published. Required fields are marked *