December 2022

ಹಾರುತ್ತಿರುವ ವಿಮಾನದಲ್ಲೇ ಹೊಡೆದಾಡಿಕೊಂಡ ಪ್ರಯಾಣಿಕರು| ವಿಡಿಯೋ ವೈರಲ್

ಸಮಗ್ರ ನ್ಯೂಸ್: ಆಗಸದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರಿಬ್ಬರು ಹೊಡೆದಾಡಿಕೊಂಡಿರುವ ಘಟನೆ ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ನಡೆದಿದೆ. ಕೆಲವರು ಈ ಗಲಾಟೆ ವಿಡಿಯೊವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಮಾನದ ಸಿಬ್ಬಂದಿ ಅವರನ್ನು ಸಮಾಧಾನಪಡಿಸಲು ಯತ್ನಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಸಮಾಧಾನವಾಗಿ ಮಾತಾಡಿ ಎಂದು ಒಬ್ಬ ವ್ಯಕ್ತಿ ಹೇಳಿದರೆ, ಮತ್ತೊಬ್ಬ ವ್ಯಕ್ತಿ ನಿಮ್ಮ ಕೈ ಕೆಳಗಿಳಿಸಿ ಎಂದು ಕೂಗುತ್ತಾನೆ. ಹೀಗೆ ಮಾತಿಗೆ ಮಾತು ಸೇರಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತದೆ. ಒಬ್ಬ ವ್ಯಕ್ತಿ ಕೋಪದಿಂದ ಮತ್ತೊಬ್ಬನ […]

ಹಾರುತ್ತಿರುವ ವಿಮಾನದಲ್ಲೇ ಹೊಡೆದಾಡಿಕೊಂಡ ಪ್ರಯಾಣಿಕರು| ವಿಡಿಯೋ ವೈರಲ್ Read More »

ವಾಟ್ಸಪ್ ನಲ್ಲಿ ಒಂದು ‘ಹಾಯ್’ ಕಳಿಸಿ 6 ಲಕ್ಷ ಸ್ಕಾಲರ್ ಶಿಪ್ ಪಡೆಯಿರಿ| ರಿಲಯನ್ಸ್ ನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡುಗೆ!!

ಸಮಗ್ರ ನ್ಯೂಸ್: ರಿಲಯನ್ಸ್ ಸಂಸ್ಥಾಪಕ ಅಧ್ಯಕ್ಷ ಧೀರೂಭಾಯಿ ಅಂಬಾನಿ ಅವರು 25 ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಿಲಯನ್ಸ್ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದಾರೆ. ಈ ವಿದ್ಯಾರ್ಥಿ ವೇತನ ಭಾರತದಾದ್ಯಂತ 13,000 ಯುವಕರ ಜೀವನಕ್ಕೆ ಸಹಾಯ ಮಾಡಿದೆ. 1996 ರಲ್ಲಿ ಈ ಯೋಜನೆಯನ್ನು ಇವರು ಆರಂಭಿಸಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣವನ್ನು ಪಡೆಯಲು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ. ಐಐಟಿಗಳು, ಐಐಎಂಗಳು ಸೇರಿದಂತೆ ಪ್ರಮುಖ ಸಂಸ್ಥೆಗಳಿಂದ ಹೆಚ್ಚಿನ ಉನ್ನತ ಶಿಕ್ಷಣವನ್ನು ಪೂರೈಸಲು ಇದು ವಿದ್ಯಾರ್ಥಿಗಳಿಗೆ ಸಹಾಯವಾಗಿದೆ. ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಉನ್ನತ

ವಾಟ್ಸಪ್ ನಲ್ಲಿ ಒಂದು ‘ಹಾಯ್’ ಕಳಿಸಿ 6 ಲಕ್ಷ ಸ್ಕಾಲರ್ ಶಿಪ್ ಪಡೆಯಿರಿ| ರಿಲಯನ್ಸ್ ನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡುಗೆ!! Read More »

ಆಂಧ್ರ ಮಾಜಿ ಸಿಎಂ ಚಂದ್ರಬಾಬು‌ ನಾಯ್ಡು ರೋಡ್ ಶೋ ವೇಳೆ ಕಾಲ್ತುಳಿತ| ಕನಿಷ್ಠ ಎಂಟು ಮಂದಿ ಮೃತಪಟ್ಟಿರುವ ಶಂಕೆ

ಸಮಗ್ರ ನ್ಯೂಸ್: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಭಾರೀ ಕಾಲ್ತುಳಿತದ ದುರ್ಘಟನೆಯೊಂದು ವರದಿಯಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ರೋಡ್‌ಶೋನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿರುವ ಸಾಧ್ಯತೆಯಿದೆ. ರಾಜ್ಯದ ನೆಲ್ಲೂರು ಜಿಲ್ಲೆಯಲ್ಲಿ ನಡೆಸಿದ ರೋಡ್ ಶೋ ಸಂದರ್ಭದಲ್ಲಿ ಜನರ ನಡುವೆ ನೂಕುನುಗ್ಗಲು ಸೃಷ್ಟಿಯಾಗಿತ್ತು. ಚಂದ್ರಬಾಬು ನಾಯ್ಡು ಅವರ ಬೆಂಗಾವಲು ಪಡೆ ಈ ಪ್ರದೇಶವನ್ನು ಹಾದುಹೋಗುತ್ತಿದ್ದಂತೆ ನೂಕುನುಗ್ಗಲು ವಿಪರೀತವಾಯಿತು. ರೋಡ್ ಶೋನಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರಲ್ಲಿ ನೂಕು ನುಗ್ಗಲಿನಿಂದಾಗಿ ಕೆಲವರು ನೆಲಕ್ಕೆ ಬಿದ್ದಿದ್ದಾರೆ. ಈ

ಆಂಧ್ರ ಮಾಜಿ ಸಿಎಂ ಚಂದ್ರಬಾಬು‌ ನಾಯ್ಡು ರೋಡ್ ಶೋ ವೇಳೆ ಕಾಲ್ತುಳಿತ| ಕನಿಷ್ಠ ಎಂಟು ಮಂದಿ ಮೃತಪಟ್ಟಿರುವ ಶಂಕೆ Read More »

ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ಅಡಿಕೆ ಬೆಳೆ ಮಾರಕ‌| ಆತಂಕ ವ್ಯಕ್ತಪಡಿಸಿದ ಗೃಹ ಸಚಿವ ಆರಗ

ಸಮಗ್ರ ನ್ಯೂಸ್: ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ಅವ್ಯಾಹತವಾಗಿ ವಿಸ್ತಾರವಾಗುತ್ತಿರುವ ಅಡಕೆ ಬೆಳೆಗೆ ಅಂಕುಶ ಬೇಕು. ಅನಿರ್ಬಂಧಿತವಾಗಿ ಅಡಿಕೆ ಬೆಳೆಯುವ ಪ್ರದೇಶ ವಿಸ್ತಾರವಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಅಡಕೆ ಕೃಷಿ ಮಾಡುತ್ತಿರುವ ರೈತರು ಸಂಕಷ್ಟದ ದಿನಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ. ವಿಧಾನ ಸಭೆಯಲ್ಲಿ ರೈತರು, ಅತಿವೃಷ್ಠಿ ಹಾಗೂ ಅನಾವೃಷ್ಟಿ ಕಾರಣದಿಂದಾಗಿ, ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ನಡೆದ ಚರ್ಚೆಯ ಮಧ್ಯದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಪ್ರತಿ ವರ್ಷ ಲಕ್ಷಾಂತರ

ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ಅಡಿಕೆ ಬೆಳೆ ಮಾರಕ‌| ಆತಂಕ ವ್ಯಕ್ತಪಡಿಸಿದ ಗೃಹ ಸಚಿವ ಆರಗ Read More »

ಹೊಸ ಹ್ಯುಂಡೈ ಕಾರು ಅನಾವರಣ| ಭಾರತದಲ್ಲಿ ಆರಂಭವಾಗಿದೆ ಬುಕ್ಕಿಂಗ್

ಸಮಗ್ರ ನ್ಯೂಸ್: ಜನಪ್ರಿಯ ಮತ್ತು ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಐಯಾನಿಕ್ 5 ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಹ್ಯುಂಡೈ ಕಂಪನಿಯು ಈ ಹೊಸ ಐಯಾನಿಕ್ 5 ಎಲೆಕ್ಟ್ರಿಕ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಆಯ್ದ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಬುಕ್ಕಿಂಗ್ ಟೋಕನ್ ಮೊತ್ತ ರೂ.1 ಲಕ್ಷವಾಗಿದೆ. ಈ ಹೊಸ

ಹೊಸ ಹ್ಯುಂಡೈ ಕಾರು ಅನಾವರಣ| ಭಾರತದಲ್ಲಿ ಆರಂಭವಾಗಿದೆ ಬುಕ್ಕಿಂಗ್ Read More »

ಚಳಿಯಾದಾಗ ದೇಹ ನಡುಗುವುದೇಕೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮಳೆ ಹೋಗಿ ಇದೀಗ ಚಳಿಗಾಲ ಆರಂಭವಾಗಿದೆ. ಎಲ್ಲೆಡೆ ಮೈಕೊರೆಯುವ ಚಳಿ ಆರಂಭವಾಗಿದ್ದು, ಜನ ನಡುಗುತ್ತಿದ್ದಾರೆ. ಚಳಿಯ ತೀವ್ರತೆ ಎಲ್ಲರ ದೇಹದ ಮೇಲೆ ಒಂದೇ ತೆರನಾದ ಪರಿಣಾಮ ಬೀರುವುದಿಲ್ಲ. ಕೆಲವರಿಗೆ ಜಾಸ್ತಿ ಚಳಿಯಾದ್ರೆ ಇನ್ನು ಕೆಲವರಿಗೆ ಚಳಿ ಕಡಿಮೆ. ಇದಕ್ಕೆ ವೈಜ್ಞಾನಿಕ ಕಾರಣಗಳೇನು ಗೊತ್ತಾ? ನಮ್ಮ ದೇಹದಲ್ಲಿ ಚರ್ಮದ ಅಡಿಯಲ್ಲಿ ಥರ್ಮೋ-ರಿಸೆಪ್ಟರ್ ನರಗಳು ಇವೆ. ಇದು ಮೆದುಳಿಗೆ ಶೀತದ ಸಂದೇಶವನ್ನು ಕಳುಹಿಸುತ್ತದೆ. ನಂತರ ಮೆದುಳಿನಲ್ಲಿರುವ ಹೈಪೋಥಾಲಮಸ್ ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿ

ಚಳಿಯಾದಾಗ ದೇಹ ನಡುಗುವುದೇಕೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಬಂಗಾಳ ಕೊಲ್ಲಿಯಲ್ಲಿ ಪ್ರಬಲ‌ ವಾಯುಭಾರ ಕುಸಿತ| ರಾಜ್ಯದ ದಕ್ಷಿಣ ಒಳನಾಡಿನ ಹಲವೆಡೆ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಇಂದೂ ಕೂಡ ಮಳೆ ಮುಂದುವರೆಯುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಡಗು, ಹಾಸನ, ಮೈಸೂರು ಮತ್ತು ರಾಮನಗರದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರ್ನಾಟಕದ ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಒಣಹವೆ ಮುಂದುವರಿಯಲಿದೆ. ನೈಋತ್ಯ ಬಂಗಾಳಕೊಲ್ಲಿಯಲ್ಲಿ ಮತ್ತೆ ಪ್ರಬಲ ವಾಯುಭಾರ ಕುಸಿತವಾಗಿರುವುದರಿಂದ ಇಂದು ಕೂಡ ಬೆಂಗಳೂರು

ಬಂಗಾಳ ಕೊಲ್ಲಿಯಲ್ಲಿ ಪ್ರಬಲ‌ ವಾಯುಭಾರ ಕುಸಿತ| ರಾಜ್ಯದ ದಕ್ಷಿಣ ಒಳನಾಡಿನ ಹಲವೆಡೆ ಮಳೆ ಸಾಧ್ಯತೆ Read More »

ರಾಜ್ಯಕ್ಕೆ ಇಂದು ಅಮಿತ್ ಶಾ ಭೇಟಿ| ವಿಧಾನಮಂಡಲ ಅಧಿವೇಶನ ಒಂದು ದಿನ ಮೊದಲೇ ಮುಕ್ತಾಯ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಅವರು ಭೇಟಿ ನೀಡುತ್ತಿದ್ದು, ಈ ನಡುವೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನವು ರಾಜ್ಯದ ವಿವಿಧ ಭಾಗಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳ ಬಗ್ಗೆ ಪರಿಣಾಮಕಾರಿಯಾಗಿ ಚರ್ಚೆಯಾಗುವ ಮುನ್ನವೇ ತರಾತುರಿಯಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡವಿದ್ದರೂ ಅಧಿವೇಶನ ಇಂದು ಮೊಟಕುಗೊಳ್ಳಳಿದೆ ಎಂದು ಹೇಳಲಾಗುತ್ತಿದೆ. ಈ ಬಾರಿಯ ಅಧಿವೇಶನದಲ್ಲಿ ಉತ್ತರ

ರಾಜ್ಯಕ್ಕೆ ಇಂದು ಅಮಿತ್ ಶಾ ಭೇಟಿ| ವಿಧಾನಮಂಡಲ ಅಧಿವೇಶನ ಒಂದು ದಿನ ಮೊದಲೇ ಮುಕ್ತಾಯ ಸಾಧ್ಯತೆ Read More »

ಉಡುಪಿ: ಕಂಠಪೂರ್ತಿ ಕುಡಿದು ಶಾಲಾ ಜಗಲಿಯಲ್ಲಿ ಮಲಗಿದ ಶಿಕ್ಷಕ

ಸಮಗ್ರ ನ್ಯೂಸ್: ಶಾಲೆಯ ಶಿಕ್ಷಕರೊಬ್ಬರು ಕಂಠಪೂರ್ತಿ ಕುಡಿದು ಶಾಲೆಯ ಜಗಲಿಯಲ್ಲಿಯೇ ಮಲಗಿದ ಪ್ರಕರಣವೊಂದು ಉಡುಪಿಯ ಪೆರ್ಡೂರು ಗ್ರಾಮದ ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವರದಿಯಾಗಿದೆ. ಕೃಷ್ಣಮೂರ್ತಿ ಎಂಬವರೇ ಕಂಠಪೂರ್ತಿ ಕುಡಿದು ಜಗುಲಿಯಲ್ಲಿ ಮಲಗಿದ ಶಿಕ್ಷಕ. ಶಾಲೆಯ ಕೊಠಡಿಯಲ್ಲಿ ಮಕ್ಕಳು ಅವರ ಪಾಡಿಗೆ ಇದ್ದರೆ, ಈ ಶಿಕ್ಷಕ ಮಾತ್ರ ಮದ್ಯದ ಅಮಲಿನಲ್ಲಿ ತೇಲಾಡುತ್ತಾ ಶಾಲೆ ಆವರಣದ ಜಗುಲಿಯಲ್ಲಿಯೇ ಹೊರಳಾಡುತ್ತಾ ಮಲಗಿದ್ದರು. ಮದ್ಯ ಕುಡಿದು ಮಲಗಿರುವ ದೃಶ್ಯವನ್ನು ಸ್ಥಳೀಯರೊಬ್ಬರು ಚಿತ್ರೀಕರಿಸಿಕೊಂಡಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯೂ ಹರಿಬಿಟ್ಟಿದ್ದಾರೆ. ಈ ವಿಡಿಯೊ ಈಗ

ಉಡುಪಿ: ಕಂಠಪೂರ್ತಿ ಕುಡಿದು ಶಾಲಾ ಜಗಲಿಯಲ್ಲಿ ಮಲಗಿದ ಶಿಕ್ಷಕ Read More »

ಅಥಣಿ: ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಟ್ಟಣದಲ್ಲಿರುವ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಸುಮಾರು 35 ರಿಂದ 40ರ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಶವವನ್ನು ನೋಡಿದ ಸ್ಥಳೀಯರು ಅಥಣಿ ಪೋಲಿಸರಿಗೆ ಮಾಹಿತಿ ನೀಡಿದ್ದು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಥಣಿ: ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ Read More »