December 2022

ಹಾಲು ಮತ್ತು ನೀರು ಈ ರೀತಿ ಕುಡಿದರೆ ಉತ್ತಮ

ಸಮಗ್ರ ನ್ಯೂಸ್: ಭಾರತೀಯ ಪದ್ದತಿಯಲ್ಲಿ ತಿನ್ನುವ ಮತ್ತು ಕುಡಿಯುವ ಬಗ್ಗೆ ಅನೇಕ ರೀತಿಯ ಸಲಹೆಗಳನ್ನು ನೀಡಲಾಗಿದೆ. ಇವುಗಳನ್ನು ಅನುಸರಿಸುವುದರಿಂದ ನೀವು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಲಿದ್ದೀರಿ. ಕೆಲವರಿಗೆ ಹಾಲು ಕುಡಿದ ನಂತರ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವುದನ್ನು ನೀವು ನೋಡಿರಬಹುದು ಅಥವಾ ಅನುಭವಿಸಿರಬಹುದು. ಇದು ಕೆಲವರಿಗೆ ಹೊಟ್ಟೆನೋವು ಆಗಿ ಪರಿಣಮಿಸುತ್ತದೆ. ಇದಕ್ಕೆ ನಿಜವಾದ ಕಾರಣ ನಿಮ್ಮ ಆಹಾರವನ್ನು ಸೇವಿಸುವ ತಪ್ಪು ವಿಧಾನವಾಗಿರಬಹುದು. ಈ ಕಾರಣದಿಂದಾಗಿ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಲನ್ನು ನಿಂತು ಕುಡಿಯಬೇಕು, ಕುಳಿತಲ್ಲೇ ನೀರು ಕುಡಿಯಬೇಕು ಎಂದು […]

ಹಾಲು ಮತ್ತು ನೀರು ಈ ರೀತಿ ಕುಡಿದರೆ ಉತ್ತಮ Read More »

ಸುಳ್ಯ: ಸರಣಿ ಅಪಘಾತ – ಬೈಕ್ ಸವಾರನಿಗೆ ಗಂಭೀರ

ಸಮಗ್ರ ನ್ಯೂಸ್: ಸರಣಿ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮಾಣಿ ಮೈಸೂರು ಹೆದ್ದಾರಿಯ ಸುಳ್ಯದ ಪಾಲಡ್ಕ ಬಳಿ ಸಂಭವಿಸಿದೆ. ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿ,ಕಾರು,ಬೈಕ್ ನಡುವೆ ಸರಣಿ ಅಪಘಾತ ನಡೆದಿದೆ. ಈ ವೆಳೆ ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿದ್ದು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ: ಸರಣಿ ಅಪಘಾತ – ಬೈಕ್ ಸವಾರನಿಗೆ ಗಂಭೀರ Read More »

ಪ್ರವಾಸಕ್ಕೆ ಬಂದಿದ್ದ ಬಸ್ ಪಲ್ಟಿ|18 ವಿದ್ಯಾರ್ಥಿಗಳಿಗೆ ಗಾಯ

ಸಮಗ್ರ ನ್ಯೂಸ್: ಶಾಲಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತುಮರಿ ಬಳಿ ನಡೆದಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಧರ್ಮಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಘಟನೆಯಲ್ಲಿ ಬಸ್‍ನಲ್ಲಿದ್ದ 18 ಮಕ್ಕಳಿಗೆ ಗಾಯವಾಗಿದ್ದು, 5 ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳು ವಿದ್ಯಾರ್ಥಿಗಳನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಕುರಿತು

ಪ್ರವಾಸಕ್ಕೆ ಬಂದಿದ್ದ ಬಸ್ ಪಲ್ಟಿ|18 ವಿದ್ಯಾರ್ಥಿಗಳಿಗೆ ಗಾಯ Read More »

ಟ್ರಕ್ಕಿಂಗ್ ಪ್ರಿಯರಿಗೆ ಹಾಟ್ ಫೆವರೇಟ್ ಸ್ಪಾಟ್ ಸುಂದರ ರಮಣೀಯ ತಾಣವೇ ಬಲ್ಲಾಳರಾಯನ ದುರ್ಗದ ಕೋಟೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಲ್ಲಾಳರಾಯನ ದುರ್ಗದ ಕೋಟೆ ಹಚ್ಚ ಹಸಿರಿನ ಪ್ರಕೃತಿಯ ನಡುವಿನ ಸುಂದರ ಹಾಗೂ ಚಾರಿತ್ರಿಕರಮ್ಯ ತಾಣ. ಪ್ರತಿ ಪ್ರವಾಸಿಗರಿಗು ಸವಾಲೆಸೆಯೋ ದುರ್ಗಮ ತಾಣ. ಇಲ್ಲಿನ ಪ್ರಾಚೀನ ಗತವೈಭವ ವಿಶೇಷತೆ ಕಳೆದುಕೊಂಡಿದ್ರೂ ನಿಸರ್ಗದ ಚೆಲುವು ಮಾತ್ರ ಮಾಸಿಲ್ಲ. ಪ್ರಕೃತಿ ಹಾಗೂ ಟ್ರಕ್ಕಿಂಗ್ ಪ್ರಿಯರನ್ನ ಬಾ ಎಂದು ಕೈಬೀಸಿ ಕರೆಯುತ್ತಿರೋ ಇಲ್ಲಿನ ಸೌಂದರ್ಯ ಪ್ರವಾಸಿಗರು, ಟ್ರಕ್ಕಿಂಗ್ ಪ್ರಿಯರಿಗೆ ಹಾಟ್ ಫೆವರೇಟ್ ಸ್ಪಾಟ್. ಆ ಸುಂದರ ರಮಣೀಯ ತಾಣವೇ ಬಲ್ಲಾಳರಾಯನ ದುರ್ಗದ ಕೋಟೆ. ಪ್ರವಾಸಿಗರಿಗೆ ಸವಾಲೆಸೆಯೋ ನಿಸರ್ಗದ

ಟ್ರಕ್ಕಿಂಗ್ ಪ್ರಿಯರಿಗೆ ಹಾಟ್ ಫೆವರೇಟ್ ಸ್ಪಾಟ್ ಸುಂದರ ರಮಣೀಯ ತಾಣವೇ ಬಲ್ಲಾಳರಾಯನ ದುರ್ಗದ ಕೋಟೆ Read More »

ಕರಾವಳಿಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ|ಬಸ್ ಕಂಡೆಕ್ಟರ್, ಸಂಘಪರಿವಾರದ ಕಾರ್ಯಕರ್ತರಿಂದ ಮುಸ್ಲಿಮ್ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಸಮಗ್ರ ನ್ಯೂಸ್: ಮುಸ್ಲಿಮ್ ವ್ಯಕ್ತಿಯೊಬ್ಬರಿಗೆ ಬಸ್ ಕಂಡೆಕ್ಟರ್ ಸೇರಿದಂತೆ ಸಂಘಪರಿವಾರದ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಮುಲ್ಲರಪಟ್ನ ನಿವಾಸಿ ಇಸಾಕ್ (45) ಎಂದು ಗುರುತಿಸಲಾಗಿದೆ. ಇವರು ಮೇಸ್ತ್ರಿ ಕೆಲಸ ಮಾಡುತ್ತಿದ್ದು ಬುಧವಾರ ಬೆಳಗ್ಗೆ ಬಿ.ಸಿ.ರೋಡ್’ನಿಂದ ಮೂಡಬಿದ್ರೆಗೆ ಹೋಗಲು ‘ಮಹಾ ಗಣೇಶ’ ಎಂಬ ಖಾಸಗಿ ಬಸ್ ಹತ್ತಿದ್ದಾರೆ. ಸ್ವಲ್ಪ ದೂರ ಹೋದ ಬಳಿಕ ವಿದ್ಯಾರ್ಥಿಗಳು, ಇತರ ಪ್ರಯಾಣಿಕರು ಬಸ್ ಹತ್ತಿದ್ದರಿಂದ ವಿಪರೀತ ಪ್ರಯಾಣಿಕ ದಟ್ಟಣೆ ಉಂಟಾಗಿದೆ. ಇಸಾಕ್

ಕರಾವಳಿಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ|ಬಸ್ ಕಂಡೆಕ್ಟರ್, ಸಂಘಪರಿವಾರದ ಕಾರ್ಯಕರ್ತರಿಂದ ಮುಸ್ಲಿಮ್ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ Read More »

ಗದಗ: ಶಿರಹಟ್ಟಿಯ ಮಾಜಿ ಶಾಸಕ ಎಸ್.ಎನ್ ಪಾಟೀಲ ನಿಧನ

ಸಮಗ್ರ ನ್ಯೂಸ್: ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ಎಸ್.ಎನ್‌ ಪಾಟೀಲ ನಿಧನ ಹೊಂದಿದ್ದಾರೆ. ಎಸ್‌.ಎನ್.ಪಾಟೀಲ ಅವರಿಗೆ 81 ವಯಸ್ಸಾಗಿತ್ತು. ಅನಾರೋಗ್ಯ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಸಂಜೆ 4 ಗಂಟೆಗೆ ಸ್ವಗ್ರಾಮ ಪುಟಗಾಂವ್ ಬಡ್ನಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.ಎಸ್. ಎನ್‌ ಪಾಟೀಲ ಸರಳ, ಸಜ್ಜನಿಕೆ, ನೇರ – ನಿಷ್ಠುರ ವ್ಯಕ್ತಿತ್ವ ಹೊಂದಿದ್ದಾರೆ. 1989-1994 ರ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಪಾಟೀಲ ಅವರು ಶಾಸಕರಾಗಿದ್ದರು.

ಗದಗ: ಶಿರಹಟ್ಟಿಯ ಮಾಜಿ ಶಾಸಕ ಎಸ್.ಎನ್ ಪಾಟೀಲ ನಿಧನ Read More »

ಬೆಳ್ತಂಗಡಿ: ಬಂದಾರು‌ ಗ್ರಾ.ಪಂ ಸಿಬ್ಬಂದಿ ನಿಧನ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮ ಪಂಚಾಯತ್ ಜನಸ್ನೇಹಿ ಉದ್ಯೋಗ ಖಾತ್ರಿ ಡಾಟಾ ಎಂಟ್ರಿ ಸಿಬ್ಬಂದಿ ಮೊಗ್ರು ಗ್ರಾಮದ ನಾಯಿಮಾರು ಲಲಿತ (38 ಪ್ರಾ) ಇವರು ಅನಾರೋಗ್ಯದಿಂದ ಸ್ವಗೃಹದಲ್ಲಿ ವಿಧಿವಿಶರಾದರು. ಮೃತರು ಪತಿ ಲವ, ಮಕ್ಕಳಾದ ಸ್ವಸ್ಥಿಕ್ ,ಸಾಕ್ಷಿತ್ ಇವರನ್ನು ಅಗಲಿದ್ದಾರೆ. ಬಂದಾರು ಗ್ರಾಮ ಪಂಚಾಯತ್ ನಲ್ಲಿ 14 ವರ್ಷ ಸೇವೆ ಸಲ್ಲಿಸಿರುತ್ತಾರೆ. ಜನರ ಜೊತೆ ನಗುಮೊಗದ ಜನಸ್ನೇಹಿ ಕೆಲಸ ಕಾರ್ಯದಲ್ಲಿ ನಿರತರಾಗಿ,ಅಪಾರ ಜನರ ಪ್ರೀತಿ ಪಾತ್ರರಾಗಿದ್ದರು. ಬಂದಾರು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಗೌಡ, ಉಪಾಧ್ಯಕ್ಷ

ಬೆಳ್ತಂಗಡಿ: ಬಂದಾರು‌ ಗ್ರಾ.ಪಂ ಸಿಬ್ಬಂದಿ ನಿಧನ Read More »

25 ಮಂದಿಗೆ ವಾರ್ಷಿಕ 1 ಕೋಟಿ‌ಗೂ ಹೆಚ್ಚು ವೇತನದ ಆಫರ್| ಕಾಲೇಜು ಮುಗಿಯುತ್ತಿದ್ದಂತೆ ಡೈರೆಕ್ಟ್ ಸೆಲೆಕ್ಷನ್ ಮಾಡಿಕೊಂಡ ಕಂಪನಿಗಳು

ಸಮಗ್ರ ನ್ಯೂಸ್: ಬಾಂಬೆ ಐಐಟಿಯ ಅಂತಿಮ ವರ್ಷದ 1500 ವಿದ್ಯಾರ್ಥಿಗಳ ಪೈಕಿ 25 ಮಂದಿಗೆ ವಾರ್ಷಿಕ 1 ಕೋಟಿ ರೂಪಾಯಿಗೂ ಹೆಚ್ಚು ವೇತನದ ಉದ್ಯೋಗದ ಆಫರ್ ದೊರೆತಿದೆ. ಐಐಟಿಯಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ರಿಲಯನ್ಸ್, ಅದಾನಿ ಗ್ರೂಪ್, ಟಾಟಾ ಗ್ರೂಪ್ ಸೇರಿದಂತೆ ಅನೇಕ ಕಂಪನಿಗಳು ಅಭ್ಯರ್ಥಿಗಳ ಹುಡುಕಾಟದಲ್ಲಿವೆ. 9 ದಿನಗಳ ಬಳಿಕ ಒಟ್ಟು 1,500 ಉದ್ಯೋಗದ ಆಫರ್ ದೊರೆತಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳೂ ಸೇರಿದಂತೆ 44 ಕಂಪನಿಗಳು ಉದ್ಯೋಗ ಮೇಳದಲ್ಲಿ ನೋಂದಣಿ

25 ಮಂದಿಗೆ ವಾರ್ಷಿಕ 1 ಕೋಟಿ‌ಗೂ ಹೆಚ್ಚು ವೇತನದ ಆಫರ್| ಕಾಲೇಜು ಮುಗಿಯುತ್ತಿದ್ದಂತೆ ಡೈರೆಕ್ಟ್ ಸೆಲೆಕ್ಷನ್ ಮಾಡಿಕೊಂಡ ಕಂಪನಿಗಳು Read More »

‘ಪಠಾಣ್’ ಚಿತ್ರದಲ್ಲಿ ಕೇಸರಿಗೆ ಅವಮಾನ| ದೀಪಿಕಾಳ ಸಾಪ್ಟ್ ಪೋರ್ನ್ ಗೆ ನೆಟ್ಟಿಗರು ಗರಂ

ಸಮಗ್ರ ನ್ಯೂಸ್: ಬಾಲಿವುಡ್‌ ನಟ ಶಾರುಖ್‌ ಖಾನ್‌ ಪ್ರಮುಖ ಪಾತ್ರದಲ್ಲಿ ಇರುವ ‘ಪಠಾಣ್‌’ ಚಿತ್ರಕ್ಕೆ ಬಿಡುಗಡೆಯ ಮುನ್ನವೇ ವಿರೋಧ ಕೇಳಿ ಬಂದಿದೆ. ಶಾರುಕ್ ಖಾನ್ ಬಹುನಿರೀಕ್ಷಿತ ಪಠಾಣ್ ಸಿನಿಮಾದ ‘ಬೇಷರಮ್ ರಂಗ್’ ವಿಡಿಯೊ ಹಾಡು ಕಳೆದ ಸೋಮವಾರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ದೀಪಿಕಾ ಪಡುಕೋಣೆ ಅವರು ಹಾಟ್ ಆಗಿ ಕಾಣಿಸಿಕೊಂಡಿದ್ದು, ಶಾರುಕ್ ಜೊತೆ ಸೊಂಟ ಬಳಸುತ್ತಾ ಹೆಜ್ಜೆ ಹಾಕಿದ್ದಾರೆ. ಹಾಡಿನಲ್ಲಿ ಸಾಪ್ಟ್ ಪೋರ್ನ್ ಗೆ ಸ್ಥಾನ ಕಲ್ಪಿಸಲಾಗಿದೆ ಎಂಬ ಆರೋಪ‌ ಕೇಳಿಬಂದಿದೆ. ಶಾರುಖ್ ಖಾನ್ ಮತ್ತು ದೀಪಿಕಾ

‘ಪಠಾಣ್’ ಚಿತ್ರದಲ್ಲಿ ಕೇಸರಿಗೆ ಅವಮಾನ| ದೀಪಿಕಾಳ ಸಾಪ್ಟ್ ಪೋರ್ನ್ ಗೆ ನೆಟ್ಟಿಗರು ಗರಂ Read More »

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಸಾಧ್ಯತೆ| ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಸಮಗ್ರ ನ್ಯೂಸ್: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು ಈ ಹಿನ್ನೆಲೆಯಲ್ಲಿ ಮೀನುಗಾರರು ಎಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆ ತಿಳಿಸಿದೆ. ಡಿಸೆಂಬರ್ 14ರಿಂದ 17ರವರೆಗೆ ಕಡಲು ಪ್ರಕ್ಷುಬ್ದವಾಗಲಿದ್ದು ಈ ಅವಧಿಯಲ್ಲಿ ಗಾಳಿಯ ವೇಗ ಹೆಚ್ಚರಲಿದೆ ಆದುದರಿಂದ ಮೀನುಗಾರರು ಮೀನುಗಾರಿಕೆಗೆ ಇಳಿಯದೇ ಇರುವುದು ಉತ್ತಮ ಅದರಲ್ಲೂ ಡಿಸೆಂಬರ್ 16ರಂದು ಗಾಳಿಯ ವೇಗ ಅತಿ ಹೆಚ್ಚು ಇರುವ ಸಾಧ್ಯತೆ ಇದೆ. ಈ ವೇಳೆ ಸಂಭವಿಸಬಹುದಾದ ಅನಾಹುತವನ್ನು ತಡೆಗಟ್ಟುವ ಉದ್ದೇಶದಿಂದ ಯಾವುದೇ ದೋಣಿ ಮೀನುಗಾರಿಕೆಗೆ ತೆರಳದಂತೆ ಹಾಗೂ ಈಗಾಗಲೇ ತೆರಳಿಯಲ್ಲಿರುವ ಎಲ್ಲಾ

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಸಾಧ್ಯತೆ| ಹವಾಮಾನ ಇಲಾಖೆಯಿಂದ ಎಚ್ಚರಿಕೆ Read More »