December 2022

ನಟ ದರ್ಶನ್ ಗೆ ‘ಪವರ್’ ತೋರಿಸಿದ ಪುನೀತ್ ಅಭಿಮಾನಿಗಳು| ಶೂ ಎಸೆದು ‘ದಾಸ’ನಿಗೆ ಅವಮಾನ!!

ಸಮಗ್ರ ನ್ಯೂಸ್: ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ದರ್ಶನ್ ಅವರು ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್‌ ವಿರುದ್ಧ ಮಾತನಾಡಿ, ಆರೋಪ ಹಿನ್ನೆಲೆ ನಿನ್ನೆ ತಡರಾತ್ರಿ ವಿಜಯನಗರ ಹೊಸಪೇಟೆಯ ವಾಲ್ಮೀಕಿ ವೃತ್ತದಲ್ಲಿ ನಟ ದರ್ಶನ್ ಮೇಲೆ ಶೂ ಎಸೆದು ಅಪಮಾನ ಮಾಡಿದ್ದಾರೆ. ‘ಕ್ರಾಂತಿ’ ಸಿನಿಮಾದ ಹಾಡು ಬಿಡುಗಡೆ ಸಮಾರಂಭದಲ್ಲಿ ನಟಿ ರಚಿತಾ ರಾಮ್ ಮಾತನಾಡುವಾಗ ಅವರ ಬಳಿ ನಿಂತಿದ್ದ‌ ನಟ ದರ್ಶನ್ ಮೇಲೆ ಜನರ ಗುಂಪಿನಿಂದ ವ್ಯಕ್ತಿಯೊಬ್ಬರು ಅವರ ಮೇಲೆ ಶೂ ಎಸೆದು, ಪೋಸ್ಟರ್ ಹರಿದು ಹಾಕುವ ಮೂಲಕ […]

ನಟ ದರ್ಶನ್ ಗೆ ‘ಪವರ್’ ತೋರಿಸಿದ ಪುನೀತ್ ಅಭಿಮಾನಿಗಳು| ಶೂ ಎಸೆದು ‘ದಾಸ’ನಿಗೆ ಅವಮಾನ!! Read More »

ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ| ರೈತರಿಂದ ಇಂದು ಮಂಡ್ಯ ಬಂದ್

ಸಮಗ್ರ ನ್ಯೂಸ್: ಕಬ್ಬಿನ ದರ ನಿಗದಿ, ಹಾಲಿನ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ವನ್ನು ಖಂಡಿಸಿ ನ.19 ರಂದು ರಾಜ್ಯ ರೈತ ಸಂಘ ಮಂಡ್ಯ ನಗರ ಬಂದ್‌ಗೆ ಕರೆ ನೀಡಿದೆ. ಮಂಡ್ಯ ಬಂದ್‌ಗೆ ಕೆಲ ದಲಿತ ಸಂಘಟನೆಗಳು, ರೈತ ಪರ ಮತ್ತು ಪ್ರಗತಿಪರ ಸಂಘಟನೆಗಳು, ಕನ್ನಡ ಸಂಘಟನೆಗಳು ಸೇರಿದಂತೆ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಬಂದ್‌ಗೆ ನಗರದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಲು ವರ್ತಕರು ಒಪ್ಪಿದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ

ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ| ರೈತರಿಂದ ಇಂದು ಮಂಡ್ಯ ಬಂದ್ Read More »

ಸುಳ್ಯ:ಮತ್ತೆ ಅಕ್ರಮ ಮರಳು ಅಡ್ಡೆಗಳ ಮೇಲೆ ದಿಢೀರ್ ದಾಳಿ| ಸುಮಾರು ನೂರಕ್ಕೂ ಹೆಚ್ಚು ಅನಾಥ ಮರಳು ಲೋಡ್ ಗಳ ವಶ !

ಸಮಗ್ರ ನ್ಯೂಸ್ : ಚುನಾವಣೆ ಸಮೀಪಿಸುತ್ತಿದ್ದಂತೆ ಒಂದಿಲ್ಲಾ ಒಂದು ವಿಚಾರಗಳು ಸುಳ್ಯ ತಾಲೂಕಿನಲ್ಲಿ ಬಹಳ ಸದ್ದು ಮಾಡುತ್ತಿದ್ದು ಇದೀಗ ಒಂದು ವಾರಗಳಿಂದ ನಿರಂತರವಾಗಿ ಅಕ್ರಮಗಳ ವಿರುದ್ದ ಸಮರ ಸಾರಿರುವ ಅಧಿಕಾರಿಗಳು ನಿನ್ನೆ ಧೀಡೀರ್ ಆಗಿ ಮತ್ತೆ ಅಕ್ರಮವಾಗಿ ನೂರು ಲೋಡ್ ಮರಳುಗಳನ್ನು ವಶಪಡಿಸಿಕೊಂಡ ಬಗ್ಗೆ ವರದಿಯಾಗಿದೆ. ಕೆಲ ದಿನಗಳ ಹಿಂದೆ ಒಬ್ಬ ರಾಜಕೀಯ ನಾಯಕರ ಲಾರಿ ಮತ್ತು ಗಣಿಗಾರಿಕೆ ಪ್ರದೇಶಗಳಿಗೆ ದಾಳಿ ನಡೆಸಿ ಸುಮಾರು ಎರಡು ಲಕ್ಷಗಳಷ್ಟು ಬೃಹತ್ ಮೊತ್ತವನ್ನು ಗಣಿ ಇಲಾಖೆ ಪಾವತಿಸಲು ಆದೇಶ ನೀಡಿ

ಸುಳ್ಯ:ಮತ್ತೆ ಅಕ್ರಮ ಮರಳು ಅಡ್ಡೆಗಳ ಮೇಲೆ ದಿಢೀರ್ ದಾಳಿ| ಸುಮಾರು ನೂರಕ್ಕೂ ಹೆಚ್ಚು ಅನಾಥ ಮರಳು ಲೋಡ್ ಗಳ ವಶ ! Read More »

“ಪುಟ್ಬಾಲ್ ಬಿಟ್ಟೋಗಲಾರೆ” – ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಮೆಸ್ಸಿ

ಸಮಗ್ರ ನ್ಯೂಸ್: ಅರಬ್ಬರ ನಾಡಿನಲ್ಲಿ ಫ್ರಾನ್ಸ್ ಸೋಲಿಸಿ ಅರ್ಜೆಂಟೀನಾ ಫಿಫಾ ವಿಶ್ವಕಪ್​ ಕಪ್​ ಕಿರೀಟ ಮುಡಿಗೇರಿಸಿಕೊಂಡಿದೆ. ಈ ವೇಳೆ ಗೋಲ್ಡನ್‌ ಬಾಲ್‌ ಪ್ರಶಸ್ತಿ ಪಡೆದ ಅರ್ಜೆಂಟೀನಾ​ ನಾಯಕ ಲಯೊನೆಲ್‌ ಮೆಸ್ಸಿ, ತಾವು ರಾಷ್ಟ್ರೀಯ ತಂಡದಿಂದ ಸದ್ಯ ನಿವೃತ್ತಿ ಹೊಂದುವುದಿಲ್ಲ ಎಂದು ಹೇಳಿದ್ದಾರೆ. 35 ವರ್ಷದ ಮೆಸ್ಸಿಗೆ ಇದೇ ಕೊನೆಯ ವಿಶ್ವಕಪ್​ ಎಂದು ಹೇಳಲಾಗಿತ್ತು. ಈ ವಿಶ್ವಕಪ್​ ನಂತರ ಅರ್ಜೆಂಟೀನಾ ರಾಷ್ಟ್ರೀಯ ತಂಡದಿಂದ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. 2026ರಲ್ಲಿ ನಾಲ್ಕು ದೇಶಗಳಲ್ಲಿ ಆಯೋಜನೆಗೊಳ್ಳಲಿರುವ ಕಾಲ್ಚೆಂಡಿನ ಆಟಕ್ಕೆ

“ಪುಟ್ಬಾಲ್ ಬಿಟ್ಟೋಗಲಾರೆ” – ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಮೆಸ್ಸಿ Read More »

ಉದ್ಘಾಟನೆಗೆ ಮೊದಲೇ ಕುಸಿಯಿತು ಸೇತುವೆ| 13 ಕೋಟಿ ನೀರುಪಾಲು

ಸಮಗ್ರ ನ್ಯೂಸ್: ಗುಜರಾತ್‌ನ ಮೊರ್ಬಿಯಲ್ಲಿ ಉದ್ಘಾಟನೆಯಾದ ಒಂದೇ ವಾರದಲ್ಲಿ ಸೇತುವೆ ಕುಸಿದು 141 ಜನ ಮೃತಪಟ್ಟ ಪ್ರಕರಣ ಜನರ ಮನಸ್ಸಿಂದ ಮರೆಮಾಚುವ ಮುನ್ನವೇ ಬಿಹಾರದಲ್ಲಿ ಉದ್ಘಾಟನೆಗೆ ಮೊದಲೇ ಸೇತುವೆಯೊಂದು ಕುಸಿದಿದೆ. ಬೆಗುಸರಾಯ್‌ನ ಗಂಡಕ್‌ ನದಿಗೆ ಅಡ್ಡಲಾಗಿ 206 ಮೀಟರ್‌ ಉದ್ದದ ಸೇತುವೆಯನ್ನು ಮುಖ್ಯಮಂತ್ರಿ ನಬಾರ್ಡ್‌ ಯೋಜನೆ ಅಡಿಯಲ್ಲಿ 13 ಕೋಟಿ ರೂ. ವ್ಯಯಿಸಿ ನಿರ್ಮಿಸಲಾಗಿತ್ತು. 2016ರಲ್ಲಿ ಆರಂಭವಾದ ಸೇತುವೆ ನಿರ್ಮಾಣ ಕಾಮಗಾರಿಯು 2017ರಲ್ಲಿ ಮುಕ್ತಾಯಗೊಂಡಿತ್ತು. ಆದರೆ, ಇದನ್ನು ಲೋಕಾರ್ಪಣೆ ಮಾಡಿರಲಿಲ್ಲ. ಡಿಸೆಂಬರ್‌ 15ರಂದೇ ಸೇತುವೆಯ ಮುಂಭಾಗದಲ್ಲಿ ಬಿರುಕು

ಉದ್ಘಾಟನೆಗೆ ಮೊದಲೇ ಕುಸಿಯಿತು ಸೇತುವೆ| 13 ಕೋಟಿ ನೀರುಪಾಲು Read More »

ಇಂದಿನಿಂದ ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ| ಸುವರ್ಣ ಸೌಧದಲ್ಲಿ ನಡೆಯಲಿದೆ ಕಾರ್ಯಕಲಾಪ

ಸಮಗ್ರ ನ್ಯೂಸ್: ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವು ಕುಂದಾನಗರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ(ಡಿ.19)ದಿಂದ ಆರಂಭಗೊಳ್ಳುತ್ತಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ವಿವಾದದ ಹಿನ್ನೆಲೆಯಲ್ಲಿ ಈ ಬಾರಿ ಕಲಾಪದಲ್ಲಿ ಕಾವೇರಿದ ಚರ್ಚೆಗಳು ನಡೆಯಲಿದೆ. ಮಹಾದಾಯಿ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಕಬ್ಬು ಬೆಳೆಗಾರರ ಬಾಕಿ, ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದ, ವಿವಿಧ ಸಮುದಾಯಗಳ ಮೀಸಲಾತಿ ವಿಚಾರ, ಪಿಎಸ್ಸೈ ನೇಮಕಾತಿಯಲ್ಲಿನ ಅಕ್ರಮ, ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ, ಸರಕಾರದ ವಿರುದ್ಧದ 40 ಪರ್ಸೆಂಟ್ ಕಮಿಷನ್

ಇಂದಿನಿಂದ ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ| ಸುವರ್ಣ ಸೌಧದಲ್ಲಿ ನಡೆಯಲಿದೆ ಕಾರ್ಯಕಲಾಪ Read More »

ಕೋಳಿ ಕೂಗಿದ್ರೆ ಬೆಳಗಾಗೋದು ಮಾತ್ರವಲ್ಲ, ಪೊಲೀಸ್ ಠಾಣೆಗೂ ಹೋಗ್ಬೇಕಾಗುತ್ತೆ!! ಬೆಂಗಳೂರಿನಲ್ಲೊಂದು ‘ಕೋಳಿಜಗಳ’

ಸಮಗ್ರ ನ್ಯೂಸ್: ಮುಂಜಾನೆ ಕೋಳಿ ಕೂಗಿದ್ರೆ ಮಾತ್ರ ಬೆಳಕಾಯ್ತು ಅಂತ ಎದ್ದೇಳ್ತಿದ್ರು. ಆದರೆ ಈಗ ಕಾಲ ಬದಲಾಗಿದೇ ಕೋಳಿಗಳು ಮುಂಜಾನೆ ಕೂಗೋದಕ್ಕಿಂತ ಕುಕ್ಕರ್​ನಲ್ಲಿ ಕೂಗೋದೇ ಜಾಸ್ತಿ ಆಗಿದೆ. ಆದ್ರೆ ಇದೇ ಕೋಳಿ ಗ್ಯಾಂಗ್​ ಒಂದು ಮುಂಜಾನೆ ಕೊ ಕೊ ಕೋ ಅಂತ ಕೂಗಿ ನಮಗೆ ನಿದ್ದೇ ಮಾಡೋಕೆ ಬಿಡ್ತಿಲ್ಲ ಅಂತ ಬೆಂಗಳೂರಿನ ಜೆ.ಪಿ ನಗರದ 8ನೇ ಹಂತದಲ್ಲಿ ವಾಸವಿರುವ ಕುಟುಂಬವೊಂದು ಪೊಲೀಸರ ಮೊರೆ ಹೋಗಿದೆ. ಕೋಳಿಯ ಕೂಗಿನಿಂದ ನಮಗೆ ಮುಕ್ತಿ ನೀಡಿ ಅಂತ ಮನವಿ ಸಹ ಮಾಡಿದೆ.

ಕೋಳಿ ಕೂಗಿದ್ರೆ ಬೆಳಗಾಗೋದು ಮಾತ್ರವಲ್ಲ, ಪೊಲೀಸ್ ಠಾಣೆಗೂ ಹೋಗ್ಬೇಕಾಗುತ್ತೆ!! ಬೆಂಗಳೂರಿನಲ್ಲೊಂದು ‘ಕೋಳಿಜಗಳ’ Read More »

ಮೈಸೂರು: ಮತ್ತೆ ಅಟ್ಟಹಾಸ ಮೆರೆದ ನರಭಕ್ಷಕ| ರೈತನ ಮೇಲೆ ಏಕಾಏಕಿ ದಾಳಿ

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ಚಿರತೆಯೊಂದು ಯುವತಿಯ ಮೇಲೆ ದಾಳಿ ನಡೆಸಿ ಯುವತಿ ಸಾವನ್ನು ಕೂಡ ಅಪ್ಪಿದ್ದ ಪ್ರಕರಣ ಹಸಿಯಾಗಿರುವಾಗಲೇ, ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ರೈತನ ಮೇಲೆ ಚಿರತೆ ಅಟ್ಟಹಾಸ ಮೆರೆದಿದೆ. ರೈತ ಚಿರತೆ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಮೈಸೂರು ಜಿಲ್ಲೆಯ ಟಿ.ನರಸೀಪುರದ ನುಗ್ಗಳ್ಳಿಕೊಪ್ಪಲು ಗ್ರಾಮದ ರೈತ ಸತೀಶ್ ತನ್ನ ಕಬ್ಬಿನ ಗದ್ದೆಗೆ ನೀರು ಹಾಯಿಸಲು ತೆರಳಿದ್ದರು. ಈ ವೇಳೆ ಹಿಂದಿನಿಂದ ಬಂದಿರುವಂತ ಚಿರತೆ ದಿಢೀರ್ ದಾಳಿ ನಡೆಸಿದೆ. ಏಕಾಏಕಿ ಚಿರತೆ ದಾಳಿಯಿಂದಾಗಿ

ಮೈಸೂರು: ಮತ್ತೆ ಅಟ್ಟಹಾಸ ಮೆರೆದ ನರಭಕ್ಷಕ| ರೈತನ ಮೇಲೆ ಏಕಾಏಕಿ ದಾಳಿ Read More »

ಫೀಫಾ ವಿಶ್ವಕಪ್: ಪ್ರಾನ್ಸ್ ಮಣಿಸಿ 36 ವರ್ಷಗಳ ಬಳಿಕ ವಿಶ್ವ ಚಾಂಪಿಯನ್ ಪಟ್ಟವೇರಿದ ಅರ್ಜೆಂಟೈನಾ

ಸಮಗ್ರ ನ್ಯೂಸ್: ದೋಹಾದ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಭಾರೀ ಜಿದ್ದಾಜಿದ್ದಿನ ಹೋರಾಟದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಕಿಲಿಯನ್‌ ಎಂಬಾಪೆ ನಾಯಕತ್ವದ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಮಣಿಸಿ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಮೆಸ್ಸಿ ಪಡೆ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಮೂಲಕ 36 ವರ್ಷಗಳ ನಂತರ ಅರ್ಜೆಂಟೀನಾ ತಂಡವು ವಿಶ್ವ ಚಾಂಪಿಯನ್ ಆಗಿ ಇತಿಹಾಸ ಬರೆದಿದೆ. 1986 ರಲ್ಲಿ ಡಿಯಾಗೋ ಮರೋಡಾನಾ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದ ಬಳಿಕ ಅರ್ಜೆಂಟೀನಾ ವಿಶ್ವ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ.

ಫೀಫಾ ವಿಶ್ವಕಪ್: ಪ್ರಾನ್ಸ್ ಮಣಿಸಿ 36 ವರ್ಷಗಳ ಬಳಿಕ ವಿಶ್ವ ಚಾಂಪಿಯನ್ ಪಟ್ಟವೇರಿದ ಅರ್ಜೆಂಟೈನಾ Read More »

ಬೆಳ್ತಂಗಡಿ: ದಲಿತನನ್ನು ಬರ್ಭರವಾಗಿ ಕೊಂದು ಬೆತ್ತಲೆಗೊಳಿಸಿ ದೋಚಿದ ದುಷ್ಕರ್ಮಿಗಳು| ನಾಲ್ವರ ವಿರುದ್ಧ ಪ್ರಕರಣ ದಾಖಲು

ಸಮಗ್ರ ನ್ಯೂಸ್: ದಲಿತ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಮಾಡಿದಲ್ಲದೆ , ಹಲ್ಲೆಗೊಳಗಾಗಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಕೊಠಡಿಯಲ್ಲಿ ಕೊಲೆ ಮಾಡಿ ಬೆತ್ತಲೆಗೊಳಿಸಿ ನಂತರ ತೋಟದಲ್ಲಿ ಹಾಕಿ ಕೊಲೆಯಾದವನ ಬಳಿ ಇದ್ದ ಹಣವನ್ನು ದೋಚಿ ಪರಾರಿಯಾದ ಘಟನೆ ಶಿಬಾಜೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎಸಿ ಕುರಿಯನ್ ಮಾಲೀಕತ್ವದ ಸಾರ ಫಾರ್ಮ್ ತೋಟದಲ್ಲಿ ಮೇಲ್ವಿಚಾರನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ (30) ಎಂಬಾತನನ್ನು ಡಿ17ರಂದು ಸಂಜೆ ತೋಟದ ಕಚೇರಿ ಎದುರು ಇರುವ ಸರ್ವಜನಿಕ ರಸ್ತೆಯ ಬದಿಯಲ್ಲಿ

ಬೆಳ್ತಂಗಡಿ: ದಲಿತನನ್ನು ಬರ್ಭರವಾಗಿ ಕೊಂದು ಬೆತ್ತಲೆಗೊಳಿಸಿ ದೋಚಿದ ದುಷ್ಕರ್ಮಿಗಳು| ನಾಲ್ವರ ವಿರುದ್ಧ ಪ್ರಕರಣ ದಾಖಲು Read More »