December 2022

ಮತ್ತೆ ವಕ್ಕರಿಸಿದ ಮಹಾಮಾರಿ ಕೊರೊನಾ| ಭಾರತ‌ ಮತ್ತೆ ಲಾಕ್ ಆಗುತ್ತಾ?

ಸಮಗ್ರ ನ್ಯೂಸ್: ಚೀನಾದಲ್ಲಿ ವೇಗವಾಗಿ ಹರಡುವ ಮೂಲಕ ಮತ್ತೆ ಮರಣ ಮೃದಂಗ ಬಾರಿಸುತ್ತಿರುವ ಒಮಿಕ್ರಾನ್​ ಬಿಎಫ್​-7 ರೂಪಾಂತರಿ, ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಇದು ಅಪಾಯಕಾರಿ ತಳಿ ಎಂದೂ ಹೇಳಲಾಗಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ಮಾಸ್ಕ್​ ಕಡ್ಡಾಯ ಸೇರಿದಂತೆ ಕೋವಿಡ್​ ಮಾರ್ಗಸೂಚಿಯನ್ನು ಹೊರಡಿಸಿದೆ. ಮಾಸ್ಕ್​ ಮತ್ತು ಸ್ಯಾನಿಟೈಸರ್​ ಸೇರಿದಂತೆ ಕೋವಿಡ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಡಂವೀಯ ಹೇಳಿದ್ದಾರೆ. ಅಲ್ಲದೇ ಈವರೆಗೆ ಯಾರು ಲಸಿಕೆ ತೆಗೆದುಕೊಂಡಿಲ್ಲವೋ ಅವರು ತಕ್ಷಣ ಲಸಿಕೆಯನ್ನು ಪಡೆದುಕೊಳ್ಳಲು […]

ಮತ್ತೆ ವಕ್ಕರಿಸಿದ ಮಹಾಮಾರಿ ಕೊರೊನಾ| ಭಾರತ‌ ಮತ್ತೆ ಲಾಕ್ ಆಗುತ್ತಾ? Read More »

ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣ| ಮಾಜಿ ಸಂಸದೆ ಜಯಪ್ರದಾಗೆ ಬಂಧನ ಭೀತಿ

ಸಮಗ್ರ ನ್ಯೂಸ್: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಎರಡು ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನಟಿ ಹಾಗೂ ರಾಂಪುರದ ಮಾಜಿ ಸಂಸದೆ ಜಯಪ್ರದಾ ವಿರುದ್ಧ ರಾಂಪುರದ ವಿಶೇಷ ಸಂಸದ-ಶಾಸಕ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ರಾಂಪುರದ ಸರ್ಕಾರಿ ವಕೀಲ ಅಮರನಾಥ್ ತಿವಾರಿ ಅವರು ವಿಚಾರಣೆ ವೇಳೆ ಮಾಜಿ ಸಂಸದೆ ಮತ್ತು ನಟಿ ಜಯಪ್ರದಾ ಅವರು ನಿರಂತರವಾಗಿ ಗೈರು ಹಾಜರಾಗಿದ್ದರಿಂದ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿದೆ. ಮಂಗಳವಾರ ನಡೆದ ವಿಚಾರಣೆ

ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣ| ಮಾಜಿ ಸಂಸದೆ ಜಯಪ್ರದಾಗೆ ಬಂಧನ ಭೀತಿ Read More »

ಆಸ್ಕರ್ ಪ್ರಶಸ್ತಿಯ ಹತ್ತಿರ ತಲುಪಿದ ಭಾರತ| ಅಂತಿಮ ಸುತ್ತಿಗೆ ಆಯ್ಕೆಯಾದ ನಾಲ್ಕು ಸಿನಿಮಾ

ಸಮಗ್ರ ನ್ಯೂಸ್: ಈ ಬಾರಿಯ ಆಸ್ಕರ್‌ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ಭಾರತೀಯ ಚಿತ್ರಗಳಲ್ಲಿ ನಾಲ್ಕು ಚಿತ್ರಗಳನ್ನು ಪ್ರಶಸ್ತಿ ಸುತ್ತಿಗೆ ಅಂತಿಮಗೊಳಿಸಲಾಗಿದೆ. ಗುಜರಾತಿ ಚಿತ್ರ ‘ಛೆಲ್ಲೋ ಶೋ’, ಆರ್‌ಆರ್‌ಆರ್‌ ಚಿತ್ರದ ‘ನಾಟು ನಾಟು’ ಗೀತೆ ಸೇರಿ ನಾಲ್ಕು ಭಾರತೀಯ ಚಿತ್ರಗಳು ಪ್ರಶಸ್ತಿ ಸುತ್ತಿನಲ್ಲಿ ಸ್ಥಾನ ಪಡೆದಿವೆ. ಅತ್ಯುತ್ತಮ ಅಂತರರಾಷ್ಟ್ರೀಯ ಚಿತ್ರ ವಿಭಾಗದಲ್ಲಿ ‘ಛೆಲ್ಲೋ ಶೋ’ ಆಯ್ಕೆ ಆಗಿದೆ. ‘ನಾಟು ನಾಟು’ ಗೀತೆಯು ಅತ್ಯುತ್ತಮ ಗೀತೆ (ಮೂಲ ಗೀತೆ) ವಿಭಾಗದಲ್ಲಿ ಸ್ಥಾನ ಪಡೆದಿದೆ. ಸಾಕ್ಷ್ಯಚಿತ್ರ ವಿಭಾಗದಲ್ಲಿ ‘ಆಲ್‌ ದಟ್‌ ಬ್ರೀಥ್ಸ್‌’

ಆಸ್ಕರ್ ಪ್ರಶಸ್ತಿಯ ಹತ್ತಿರ ತಲುಪಿದ ಭಾರತ| ಅಂತಿಮ ಸುತ್ತಿಗೆ ಆಯ್ಕೆಯಾದ ನಾಲ್ಕು ಸಿನಿಮಾ Read More »

ಇದೇನಾ ನಿಮ್ಮ ಗೋರಕ್ಷಣೆ? ಪೂಜೆ ಮಾಡಿ ಫೋಟೋ ತೆಗೆಸ್ಕೊಂಡರೆ ಗೋರಕ್ಷಣೆ ಆಗ್ಬಿಡುತ್ತಾ? ಸಚಿವ ಚೌಹಾಣ್ ಬೆವರಿಳಿಸಿದ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಜಾನುವಾರಿನ ಗಂಟು ರೋಗ ವಿಚಾರವಾಗಿ ಪಶು ಸಂಗೋಪನೆ ಇಲಾಖೆ ಕಾರ್ಯನಿರ್ವಹಣೆ ಬಗ್ಗೆ ಪ್ರಶ್ನೆ ಮಾಡಿದ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಪಶು ಸಂಗೋಪನಾ ಸಚಿವರನ್ನು ಇಕ್ಕಟಿಕೆ ಸಿಲುಕಿಸಿದರು. ಕಳೆದ ಆರು ತಿಂಗಳಿಂದ ದೇಶದಲ್ಲಿ ಜಾನುವಾರಿನ ಚರ್ಮ ರೋಗ ಸಮಸ್ಯೆ ಬಗ್ಗೆ ದಾಖಲೆ ಸಮೇತ ಮಾತಾನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಗೋವುಗಳಿಗೆ ಖಾಯಿಲಿ ಹೆಚ್ಚಾಗಿದೆ. ಆರು ತಿಂಗಳುಗಳಿಂದ ಲಸಿಕೆ ಹಾಕುವ ಕೆಲಸ ಮಾಡ್ತಾ ಇದ್ದಾರೆ.

ಇದೇನಾ ನಿಮ್ಮ ಗೋರಕ್ಷಣೆ? ಪೂಜೆ ಮಾಡಿ ಫೋಟೋ ತೆಗೆಸ್ಕೊಂಡರೆ ಗೋರಕ್ಷಣೆ ಆಗ್ಬಿಡುತ್ತಾ? ಸಚಿವ ಚೌಹಾಣ್ ಬೆವರಿಳಿಸಿದ ಸಿದ್ದರಾಮಯ್ಯ Read More »

ಸುಳ್ಯ: ಉದ್ಯಮಿ ನವೀನ್ ಕಾಮಧೇನುರನ್ನು ಹೊತ್ತೊಯ್ದ ಪ್ರಕರಣ| ನವೀನ್ ರನ್ನು ತಾಯಿಯ ವಶಕ್ಕೆ ಒಪ್ಪಿಸಿದ ಹೈಕೋರ್ಟ್

ಸಮಗ್ರ ನ್ಯೂಸ್: ಬೆಳ್ಳಾರೆಯ ಕಾಮಧೇನು ಜ್ಯುವೆಲ್ಲರ್ಸ್ ಮಾಲಿಕ ನವೀನ್ ಕಾಮಧೇನುರನ್ನು ಏಕಾಏಕಿ ಮನೆಗೆ ಬಂದು ಅಂಬ್ಯುಲೆನ್ಸ್ ನಲ್ಲಿ ಹೊತ್ತೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ನೀರಜಾಕ್ಷಿಯವರಿಂದ ಹೈಕೋರ್ಟ್ ಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ನವೀನರನ್ನು ತಾಯಿಯ ವಶಕ್ಕೆ ಒಪ್ಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ನವೀನ್ ಕುರಿತಂತೆ ಹೈಕೋರ್ಟ್ ವರದಿ ಕೇಳಿದ್ದು, ನವೀನ್ ರನ್ನು ಆಸ್ಪತ್ರೆಗೆ ದಾಖಲುಗೊಳಿಸಿರುವುದಾಗಿ ಪೋಲೀಸರಿಂದ ಹೈಕೋರ್ಟಿಗೆ ವರದಿ ಸಲ್ಲಿಕೆಯಾಗಿತ್ತು. ಇದರ ಬೆನ್ನಲ್ಲೇ ನವೀನರನ್ನು ದಾಖಲಿಸಲಾದ ಆಸ್ಪತ್ರೆಗೆ ನ್ಯಾಯಾಲಯವು ವಕೀಲರನ್ನು ಕಳುಹಿಸಿದೆ.

ಸುಳ್ಯ: ಉದ್ಯಮಿ ನವೀನ್ ಕಾಮಧೇನುರನ್ನು ಹೊತ್ತೊಯ್ದ ಪ್ರಕರಣ| ನವೀನ್ ರನ್ನು ತಾಯಿಯ ವಶಕ್ಕೆ ಒಪ್ಪಿಸಿದ ಹೈಕೋರ್ಟ್ Read More »

ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಶೀಘ್ರ ಮಾರ್ಗಸೂಚಿ ಪ್ರಕಟ| ಸರ್ಕಾರದಿಂದ ಕೊರೊನಾ ಹೈ ಅಲರ್ಟ್

ಸಮಗ್ರ ನ್ಯೂಸ್: ಕೊರೊನಾ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಮಾರ್ಗಸೂಚಿ ರಚನೆ ಮಾಡಲಾಗುತ್ತದೆ. ಆದರೆ ಈ ಬಗ್ಗೆ ಆತಂಕ ಮಾಡುವುದು ಬೇಡ. ಇಂದಿನ ಸಭೆಯಲ್ಲಿ ಚರ್ಚೆ ನಡೆಸಿದ್ದು, ಹಲವು ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವರು, ಎಎಲ್​​ಐ, ಸಾರಿ ಲಕ್ಷಣಗಳು ಇರುವವರಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಕಡ್ಡಾಯ ಮಾಡುವ ನಿರ್ಧಾರ ಮಾಡಲಾಗಿದೆ. ವಿಶೇಷ ಎಂದರೇ, ಒಳಾಂಗಣದಲ್ಲಿ ಜನರು ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲು

ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಶೀಘ್ರ ಮಾರ್ಗಸೂಚಿ ಪ್ರಕಟ| ಸರ್ಕಾರದಿಂದ ಕೊರೊನಾ ಹೈ ಅಲರ್ಟ್ Read More »

ಕೋವಿಡ್ ಹೊಸ ತಳಿ ಪತ್ತೆ ಹಿನ್ನೆಲೆ| ಆತಂಕ ಬೇಡ, ಕಾದು ನೋಡೋಣ ಎಂದ ತಜ್ಞರು|

ಸಮಗ್ರ ನ್ಯೂಸ್: ಭಾರತದಲ್ಲಿ ಕಾಣಿಸಿಕೊಂಡಿರುವ ಬಿಎಫ್. 7 ಮಾದರಿ ಸೋಂಕಿಗೂ ಚೀನಾದ ಕೋವಿಡ್ ಪರಿಸ್ಥಿತಿಗೂ ಯಾವುದೇ ಸಂಬಂಧವಿಲ್ಲ. ಅಲ್ಲಿನ ಪರಿಸ್ಥಿತಿಗೂ ಇಲ್ಲಿನ ಪರಿಸ್ಥಿತಿಗೂ ಭಿನ್ನವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚೀನಾ, ಜಪಾನ್, ಕೊರಿಯಾ, ಅಮೆರಿಕ, ಬ್ರೆಜಿಲ್ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಬೆಂಗಳೂರಿನಲ್ಲೂ ಕೊರೊನಾ ಆತಂಕ ಹೆಚ್ಚಾಗಿದೆ. ಓಮಿಕ್ರಾನ್ ಹೊಸ ರೂಪಾಂತರಿ ಮತ್ತೆ ಅಬ್ಬರಿಸಲು ಶುರುಮಾಡಿದೆ ಎಂಬ ಆತಂಕ ಹೆಚ್ಚಾಗಿದ್ದು ಎರಡು ವಾರಗಳ ಕಾದು ನೋಡುವ ತಂತ್ರಕ್ಕೆ ತಜ್ಞರು ಮುಂದಾಗಿದ್ದಾರೆ. ದೇಶದಲ್ಲಿ ಎರಡು

ಕೋವಿಡ್ ಹೊಸ ತಳಿ ಪತ್ತೆ ಹಿನ್ನೆಲೆ| ಆತಂಕ ಬೇಡ, ಕಾದು ನೋಡೋಣ ಎಂದ ತಜ್ಞರು| Read More »

ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಪರಿಹಾರ ವಿತರಿಸಲು ಚಿಂತನೆ – ಸಚಿವ ಆರಗ ಜ್ಞಾನೇಂದ್ರ

ಸಮಗ್ರ ನ್ಯೂಸ್: ಎಲೆ ಚುಕ್ಕಿ ರೋಗದಿಂದ ಹಾಳಾದ ಅಡಿಕೆ ಬೆಳೆಗೆ ಪರಿಹಾರ ವಿತರಿಸಲು ಸರ್ಕಾರ ಚಿಂತನೆ ನಡೆಸಿರುವುದಾಗಿ ಆಡಿಕೆ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆ ಎಲೆಚುಕ್ಕಿ ರೋಗದಿಂದ ನೆಲಕಚ್ಚಿದ್ದು, ಪರ್ಯಾಯ ಬೆಳೆ ಬೆಳೆಯಲು ಜನ ಚಿಂತನೆ ನಡೆಸಿದ್ದಾರೆ. ಇದಕ್ಕೆ ಸರ್ಕಾರ ಪ್ರೋತ್ಸಾಹ ನೀಡುವತ್ತ ಗಮನಹರಿಸಬೇಕು’ ಎಂದರು. ಈ ವೇಳೆ ತೋಟಗಾರಿಕೆ

ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಪರಿಹಾರ ವಿತರಿಸಲು ಚಿಂತನೆ – ಸಚಿವ ಆರಗ ಜ್ಞಾನೇಂದ್ರ Read More »

ಬೆಳ್ತಂಗಡಿ: ಸಿದ್ದರಾಮಯ್ಯ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಭಿ‌ನ್ನಕೋಮಿನ ಜೋಡಿಯ ರೊಮ್ಯಾನ್ಸ್| ಇಬ್ಬರನ್ನೂ ಸಸ್ಪೆಂಡ್ ಮಾಡಿದ ಕಾಲೇಜು ಆಡಳಿತ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ‌ ನಡುವೆಯೂ ಯುವ ಜೋಡಿಯೊಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ರೊಮ್ಯಾನ್ಸ್ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಇಬ್ಬರನ್ನೂ ಸಸ್ಪೆಂಡ್ ಮಾಡಲಾದ ಘಟನೆ ನಡೆದಿದೆ. ಬೆಳ್ತಂಗಡಿಯ ಕಾಲೇಜೊಂದರ ವಿದ್ಯಾರ್ಥಿಗಳಾದ ಅನ್ಯಕೋಮಿನ ಜೋಡಿ ಸಿದ್ದರಾಮಯ್ಯ ಅತಿಥಿಯಾಗಿದ್ದ ಕಾರ್ಯಕ್ರಮದಲ್ಲೇ ರೋಮ್ಯಾನ್ಸ್​ನಲ್ಲಿ ಮುಳುಗಿದ್ದರು ಎನ್ನಲಾಗಿತ್ತು. ಬೆಳ್ತಂಗಡಿ ಗುರುದೇವ ಕಾಲೇಜಿನಲ್ಲಿ ಮಾಜಿ ಶಾಸಕ ವಸಂತ್ ಬಂಗೇರ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದ ವೇಳೆ ಕಾಲೇಜು ಅವರಣದಲ್ಲಿ ಮುಸ್ಲಿಂ

ಬೆಳ್ತಂಗಡಿ: ಸಿದ್ದರಾಮಯ್ಯ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಭಿ‌ನ್ನಕೋಮಿನ ಜೋಡಿಯ ರೊಮ್ಯಾನ್ಸ್| ಇಬ್ಬರನ್ನೂ ಸಸ್ಪೆಂಡ್ ಮಾಡಿದ ಕಾಲೇಜು ಆಡಳಿತ Read More »

ಶಾಸಕನಿಗೆ ಗೆಟ್ ಲಾಸ್ಟ್ ಎಂದಿದ್ದಕ್ಕೆ ಸದನದ ಅರ್ಧದಿನ ಬಲಿ| ಇಂದು ಮತ್ತಷ್ಟು ವಿಚಾರ ಚರ್ಚೆಗೆ| ಬೆಳಗಾವಿಯಿಂದ ಚಳಿಗಾಲದ ಅಧಿವೇಶನ ನೇರಪ್ರಸಾರ

ಸಮಗ್ರ ನ್ಯೂಸ್: ಶಾಸಕನಿಗೆ ಗದರಿದ ಆಡಳಿತಾರೂಢ ಪಕ್ಷದ ಸಚಿವರು ಗದರಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸದನದ ಬಾವಿಗಿಳಿದು ತೀವ್ರ ಪ್ರತಿಭಟನೆ ನಡೆಸಿದರು. ಈ ಧರಣಿ ಎರಡು ಬಾರಿ ಸದನ ಮುಂದೂಡಿಕೆಯಾಗುವಂತೆ ಮಾಡಿ ಸರಿ ಸುಮಾರು ಅರ್ಧ ದಿನದ ಕಲಾಪವನ್ನು ಬಲಿ ಪಡೆದುಕೊಂಡ ಘಟನೆ ಬುಧವಾರ ನಡೆಯಿತು. ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸಿದ್ದು ಸವದಿ ಪ್ರಶ್ನೆಗೆ ಶ್ರಾರಾಮುಲು ನೀಡಿದ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಪಕ್ಷಗಳ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು. ಈ ವೇಳೆ

ಶಾಸಕನಿಗೆ ಗೆಟ್ ಲಾಸ್ಟ್ ಎಂದಿದ್ದಕ್ಕೆ ಸದನದ ಅರ್ಧದಿನ ಬಲಿ| ಇಂದು ಮತ್ತಷ್ಟು ವಿಚಾರ ಚರ್ಚೆಗೆ| ಬೆಳಗಾವಿಯಿಂದ ಚಳಿಗಾಲದ ಅಧಿವೇಶನ ನೇರಪ್ರಸಾರ Read More »