December 2022

ಉಪ್ಪಿನಂಗಡಿ: ಕುದುರೆ ಸವಾರಿ ಮಾಡುತ್ತಿದ್ದ ವೇಳೆ ಬಸ್ ಡಿಕ್ಕಿ| ಕುದುರೆ ಸಾವು, ಸವಾರ ಗಂಭೀರ

ಸಮಗ್ರ ನ್ಯೂಸ್: ಕುದುರೆಯೊಂದಕ್ಕೆ ಸರ್ಕಾರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಕುದುರೆ ಸಾವನ್ನಪ್ಪಿದ್ದು, ಕುದುರೆ ಸವಾರ ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪದುಮಲೆ ಎಂಬಲ್ಲಿ ಡಿ.25 ರ ಭಾನುವಾರ ನಡೆದಿದೆ. ಸಚಿನ್ ಪೆಲಪ್ಪಾರು ಗಾಯಗೊಂಡ ಕುದುರೆ ಸವಾರ. ಉಪ್ಪಿನಂಗಡಿಯಲ್ಲಿ ಸಚಿನ್ ಕುದುರೆ ಸವಾರಿ ಮಾಡುತ್ತಿದ್ದ ವೇಳೆ ಬೆಳ್ತಂಗಡಿ ಕಡೆಗೆ ಬರುತಿದ್ದ ಸರ್ಕಾರಿ ಬಸ್ ಕುದುರೆಗೆ ಢಿಕ್ಕಿ ಹೊಡೆದ ಪರಿಣಾಮ ಕುದುರೆ ಹಾಗೂ ಸವಾರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಉಪ್ಪಿನಂಗಡಿ ಸಮೀಪ ಪಿಲಿಗೂಡಿನ ಮೋನು […]

ಉಪ್ಪಿನಂಗಡಿ: ಕುದುರೆ ಸವಾರಿ ಮಾಡುತ್ತಿದ್ದ ವೇಳೆ ಬಸ್ ಡಿಕ್ಕಿ| ಕುದುರೆ ಸಾವು, ಸವಾರ ಗಂಭೀರ Read More »

ಬಿಜೆಪಿಗೆ ಗುಡ್ ಬೈ ಹೇಳಿ ಹೊಸ ಪಕ್ಷ ಕಟ್ಟಿದ ಜನಾರ್ಧನ ರೆಡ್ಡಿ

ಸಮಗ್ರ ನ್ಯೂಸ್: ಬಿಜೆಪಿಯ ಬಗ್ಗೆ ಅಲ್ಲಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಮಾಜಿ ಸಚಿವ ಹಾಗೂ ಗಣಿ ಉದ್ಯಮಿ ಜಿ.ಜನಾರ್ದನ ರೆಡ್ಡಿ ಹೊಸ ರಾಜಕೀಯ ಪಕ್ಷ ಘೋಷಿಸಿದ್ದಾರೆ. ನೂತನ ರಾಜಕೀಯ ಪಕ್ಷಕ್ಕೆ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೆಸರು ಇರಿಸಲಾಗಿದೆ. ಬೆಂಗಳೂರಿನ ರೆಡ್ಡಿ ಅವರ ಮನೆ ‘ಪಾರಿಜಾತ’ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಘೋಷಣೆ ಮಾಡಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಹತ್ತಾರು ವರ್ಷಗಳಿಂದ ನನ್ನ ಆತ್ಮೀಯ ಸ್ನೇಹಿತ. ಬಳ್ಳಾರಿ ಜನರ ಸೇವೆಗೆ ನಾನು ಸದಾ ಸಿದ್ಧ ಎಂದು

ಬಿಜೆಪಿಗೆ ಗುಡ್ ಬೈ ಹೇಳಿ ಹೊಸ ಪಕ್ಷ ಕಟ್ಟಿದ ಜನಾರ್ಧನ ರೆಡ್ಡಿ Read More »

ಮೂಡಬಿದಿರೆ ಜಾಂಬೂರಿ ಹಿನ್ನಲೆ| ದ.ಕ ಜಿಲ್ಲೆಯಲ್ಲಿ 3 ದಿನ ಬಸ್ ಸಂಚಾರದಲ್ಲಿ ವ್ಯತ್ಯಯ| ಕೆಎಸ್ಆರ್ ಟಿಸಿ ಯಿಂದ ಪ್ರಕಟಣೆ

ಸಮಗ್ರ ನ್ಯೂಸ್: ಮೂಡುಬಿದಿರೆಯಲ್ಲಿ ಜಾಂಬೂರಿ ನಡೆಯುತ್ತಿದ್ದು, ಈ ಹಿನ್ನೆಲೆ ರಾಜ್ಯ, ಹೊರ ರಾಜ್ಯಗಳಿಂದ ಸ್ಕೌಟ್ಸ್‌ ಮತ್ತು ಗೈಡ್ಸ್‌ನ 50,000ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಜಾಂಬೂರಿಗೆ ಆಗಮಿಸಿದ್ದಾರೆ. ಅಲ್ಲದೇ ಅವರ ಜೊತೆಗೆ ಪೋಷಕರು, ಶಿಕ್ಷಕರು ಸಹ ಆಗಮಿಸಿದ್ದಾರೆ. ಇವರೆಲ್ಲರೂ ಜಾಂಬೂರಿ ಮುಗಿಸಿ ತಮ್ಮ ಊರುಗಳಿಗೆ ಹಿಂದಿರುಗುವ ವೇಳೆ ಡಿಸೆಂಬರ್‌ 26ರಿಂದ 28ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಕಾರ್ಯಕ್ರಮ ಮುಗಿಸಿ ತಮ್ಮ ಊರುಗಳಿಗೆ ಹಿಂತಿರುಗುವಾಗ ಮೂಡಬಿದಿರೆಯಿಂದ

ಮೂಡಬಿದಿರೆ ಜಾಂಬೂರಿ ಹಿನ್ನಲೆ| ದ.ಕ ಜಿಲ್ಲೆಯಲ್ಲಿ 3 ದಿನ ಬಸ್ ಸಂಚಾರದಲ್ಲಿ ವ್ಯತ್ಯಯ| ಕೆಎಸ್ಆರ್ ಟಿಸಿ ಯಿಂದ ಪ್ರಕಟಣೆ Read More »

ಸುರತ್ಕಲ್ ಕೊಲೆ ಪ್ರಕರಣ| ನಿನ್ನೆ ಸಂಜೆ ಆಗಿದ್ದೇನು? ಪೊಲೀಸ್ ಕಮಿಷನರ್ ಏನ್ ಹೇಳಿದ್ರು? ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಮಂಗಳೂರು ನಗರದ ಹೊರವಲಯದ ಕಾಟಿಪಳ್ಳ ಎಂಬಲ್ಲಿ ಜಲೀಲ್​ ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಈ ಪ್ರಕರಣವನ್ನು ಕೋಮು ದ್ವೇಷದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆಯಾದ ಜಲೀಲ್​ ಅವರು ಕಾಟಿಪಳ್ಳದ ನೈತಂಗಡಿ ಎಂಬಲ್ಲಿ ಪ್ರಾವಿಷನ್​ ಸ್ಟೋರ್ ನಡೆಸುತ್ತಿದ್ದರು. ರಾತ್ರಿ ವೇಳೆ ಅವರ ಅಂಗಡಿಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಚೂರಿಯಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಜಲೀಲ್​ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿದ್ದರೂ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ

ಸುರತ್ಕಲ್ ಕೊಲೆ ಪ್ರಕರಣ| ನಿನ್ನೆ ಸಂಜೆ ಆಗಿದ್ದೇನು? ಪೊಲೀಸ್ ಕಮಿಷನರ್ ಏನ್ ಹೇಳಿದ್ರು? ಇಲ್ಲಿದೆ ಫುಲ್ ಡೀಟೈಲ್ಸ್ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: 2022ರ ಕೊನೆಯ ವಾರದಲ್ಲಿ ಇದ್ದೇವೆ. ಈ ವರ್ಷದಲ್ಲಿ ನಿಮ್ಮ ಜೀವನದಲ್ಲಿ ನಡೆದ ಒಳ್ಳೆಯ ಘಟನೆಗಳನ್ನು ನೆನಪಿನಲ್ಲಿಡಿ, ಕೆಟ್ಟ ಘಟನೆಗಳಿಂದ ಬದುಕಿನ ಪಾಠವನ್ನು ಕಲಿಯೋಣ ಎಂದು ಹೇಳುತ್ತಾ, ಜ್ಯೋತಿಷ್ಯ ಪ್ರಕಾರ ವರ್ಷದ ಕೊನೆಯ ವಾರ ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ಹೇಳಲಾಗಿದೆ, ನಿಮ್ಮ ರಾಶಿಫಲ ಹೇಗಿದೆ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ… ಮೇಷ ರಾಶಿ:ಈ ವಾರ ನಿಮಗೆ ಉತ್ತಮವಾಗಿದೆ. ಈ ಸಮಯದಲ್ಲಿ ನಿಮ್ಮ ಕೆಲವು ದೊಡ್ಡ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ವಾರದ ಕೊನೆಯಲ್ಲಿ,

ದ್ವಾದಶ ರಾಶಿಗಳ ವಾರಭವಿಷ್ಯ Read More »

ಸುರತ್ಕಲ್ ಚೂರಿ ಇರಿತ ಪ್ರಕರಣ| ಗಾಯಾಳು ಚಿಕಿತ್ಸೆ ಫಲಿಸದೆ ಸಾವು

ಸಮಗ್ರ ನ್ಯೂಸ್: ಸುರತ್ಕಲ್ ಸಮೀಪದ ಕೃಷ್ಣ ಪುರ ನೈತಂಗಡಿ ಪ್ರದೇಶದಲ್ಲಿ ಯುವಕನೊಬ್ಬನಿಗೆ ಚೂರಿ ಇರಿತವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ಕೃಷ್ಣಾಪುರ 4ನೇ ಬ್ಲಾಕ್ ನಿವಾಸಿ ಜಲೀಲ್ ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಳಿ ನಡೆಸಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಚೂರಿ ಇರಿತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಕಳೆದ ಕೆಲ ತಿಂಗಳುಗಳ ಹಿಂದೆ ಸುರತ್ಕಲ್ ನಲ್ಲಿ ಫಾಝಿಲ್ ಎಂಬ ಯುವಕನೊಬ್ಬನನ್ನು ಸಂಜೆ ವೇಳೆಗೆ ಅಂಗಡಿಯೊಂದರ ಮುಂಭಾಗದಲ್ಲೇ ಕಾರಿನಲ್ಲಿ

ಸುರತ್ಕಲ್ ಚೂರಿ ಇರಿತ ಪ್ರಕರಣ| ಗಾಯಾಳು ಚಿಕಿತ್ಸೆ ಫಲಿಸದೆ ಸಾವು Read More »

ಮಂಗಳೂರು: ಯುವಕನ ಮೇಲೆ ಚೂರಿ ಇರಿದು ಪರಾರಿಯಾದ ದುಷ್ಕರ್ಮಿಗಳು

ಸಮಗ್ರ ನ್ಯೂಸ್: ಸುರತ್ಕಲ್ ನಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸಗೈದಿದ್ದು, ಯುವಕನೊಬ್ಬನಿಗೆ ಇಂದು ಸಂಜೆ ಚಾಕು ಇರಿದ ಘಟನೆ ಸುರತ್ಕಲ್ ಕಾಟಿಪಳ್ಳದ ನೈತಂಗಡಿ ಎಂಬಲ್ಲಿ ನಡೆದಿದೆ. ಕೃಷ್ಣಪುರ 4ನೇ ಬ್ಲಾಕ್ ನ ನಿವಾಸಿ ಜಲೀಲ್ ಚೂರಿ ಇರಿತಕ್ಕೊಳಗಾದ ಯುವಕ ಎಂದು ಗುರುತಿಸಲಾಗಿದೆ. ಯುವಕನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಚೂರಿ ಇರಿತಕ್ಕೆ ಒಳಗಾದ ಯುವಕನ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಮಂಗಳೂರು: ಯುವಕನ ಮೇಲೆ ಚೂರಿ ಇರಿದು ಪರಾರಿಯಾದ ದುಷ್ಕರ್ಮಿಗಳು Read More »

ಬೆಳ್ತಂಗಡಿ: ಶಾಲಾ ವಾಹನ ಡಿಕ್ಕಿ ಹೊಡೆದು ಗೂಡ್ಸ್ ವಾಹನ ಚಾಲಕ ಸಾವು

ಸಮಗ್ರ ನ್ಯೂಸ್: ಶಾಲಾ ವಾಹನ ಢಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ವಾಹನ ಚಾಲಕನೋರ್ವ ಮೃತಪಟ್ಟ ಘಟನೆ ಕೊಯ್ಯೂರು ಮಲೆಬೆಟ್ಟು ಸಮೀಪ ಶನಿವಾರ ನಡೆದಿರುವುದಾಗಿ ವರದಿಯಾಗಿದೆ. ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ರಝಾಕ್ (50) ಸಾವನ್ನಪ್ಪಿದವರು. ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ಹನೀಫ್ (48), ಪಣಕಜೆ ನಿವಾಸಿ ಕೆ.ಮುಹಮ್ಮದ್(57) ಗಂಭೀರ ಗಾಯಗೊಂಡವರು ಎಂದು ತಿಳಿದುಬಂದಿದೆ. ಗೂಡ್ಸ್ ರಿಕ್ಷಾಕ್ಕೆ ಶಾಲಾ ಮಕ್ಕಳ ಬಸ್ ಮುಖಾಮುಖಿಯಾಗಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಗೂಡ್ಸ್ ರಿಕ್ಷಾ ಸಂಪೂರ್ಣ ನುಜ್ಜು ಗುಜ್ಜಾಗಿದೆ.

ಬೆಳ್ತಂಗಡಿ: ಶಾಲಾ ವಾಹನ ಡಿಕ್ಕಿ ಹೊಡೆದು ಗೂಡ್ಸ್ ವಾಹನ ಚಾಲಕ ಸಾವು Read More »

ಮಂಗಳೂರು: ಅಕ್ರಮ ಕಸಾಯಿಖಾನೆಗೆ ಹಿಂಜಾವೇ ದಾಳಿ

ಸಮಗ್ರ ನ್ಯೂಸ್: ಅಕ್ರಮ ಕಸಾಯಿ ಖಾನೆಗೆ ಹಿಂದೂ ಜಾಗರಣಾ ವೇದಿಕೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಅಲಂಗಾರು ಬಳಿ ನಡೆದಿದೆ. ಅಲಂಗಾರು ಆಶ್ರಯ ಕಾಲೋನಿಯಲ್ಲಿರುವ ಗಿಲ್ಬರ್ಟ್ ಮಿರಾಂದ ಎಂಬವನ ಅಕ್ರಮ ಕಸಾಯಿ ಖಾನೆ ಮೇಲೆ ಬೆಳಿಗ್ಗೆ 4 ಗಂಟೆಗೆ ಹಿಂಜಾವೇ ಕಾರ್ಯಕರ್ತರು ದಾಳಿ ನಡೆಸಿದ್ದು, ವಧೆ ಮಾಡಲು ತಂದಿದ್ದ 4 ಗೋವು ಮತ್ತು ಭಾರೀ ಪ್ರಮಾಣ ಮಾಂಸ, ದನದ ತಲೆ ಭಾಗಗಳು ಪತ್ತೆಯಾಗಿವೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು,

ಮಂಗಳೂರು: ಅಕ್ರಮ ಕಸಾಯಿಖಾನೆಗೆ ಹಿಂಜಾವೇ ದಾಳಿ Read More »

ಗರ್ಭಿಣಿಯಾದ 8ನೇ ತರಗತಿ ವಿದ್ಯಾರ್ಥಿನಿ| ಮೂವರಿಂದ ಅತ್ಯಾಚಾರ ಶಂಕೆ

ಸಮಗ್ರ ನ್ಯೂಸ್: ಎಂಟನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ಕೊಪ್ಪಳ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ಮೇಲೆ ಮೂವರಿಂದ ಅತ್ಯಾಚಾರ ನಡೆದಿರುವ ಅನುಮಾನಗಳು ವ್ಯಕ್ತವಾಗಿವೆ. ಕೊಪ್ಪಳ ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿ ಭಯದಿಂದ ತನ್ನ ಮೇಲಾದ ಅತ್ಯಾಚಾರವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಆರು ತಿಂಗಳ ನಂತರ ಆಕೆ ಗರ್ಭಿಣಿಯಾಗಿದ್ದರಿಂದ ಈ ವಿಷಯ ಪೋಷಕರಿಗೆ ಗೊತ್ತಾಗಿದೆ. ಈ ಸಂಬಂಧ ವಿದ್ಯಾರ್ಥಿನಿ ಪೋಷಕರು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಕ್ಸೋ ಅಡಿ ಪ್ರಕರಣ

ಗರ್ಭಿಣಿಯಾದ 8ನೇ ತರಗತಿ ವಿದ್ಯಾರ್ಥಿನಿ| ಮೂವರಿಂದ ಅತ್ಯಾಚಾರ ಶಂಕೆ Read More »