Ad Widget .

”ತೆಂಗಿನಮರವನ್ನೂ ಹತ್ತುವೆ, ಸಮುದ್ರವನ್ನೂ ಈಜುವೆ” | ಟೀಕಾಕಾರರ ಕಿವಿಹಿಂಡಿದ ಸಚಿವ ಎಸ್.ಅಂಗಾರ

ಸಮಗ್ರ ನ್ಯೂಸ್: ‘ನನ್ನ ಬಗ್ಗೆ ಯಾರೂ ಕೇವಲವಾಗಿ ಮಾತನಾಡಬೇಕಿಲ್ಲ. ನಾನು ರಾಜಕೀಯ ಹೊರತಾಗಿಯೂ ಜನಸಾಮಾನ್ಯನಂತೆ ಕೆಲಸದಲ್ಲಿ ತೊಡಗಿಕೊಳ್ಳಲು ಹೇಸುವವನಲ್ಲ, ನಾನು ಈಗಲೂ ತೆಂಗಿನಮರ ಏರಬಲ್ಲೆ, ಸಮುದ್ರಕ್ಕೆ ತಳ್ಳಿದರೂ ಈಜಿ ದಡ ಸೇರುವೆ’ ಎಂದು ಬಂದರು, ಹಾಗೂ‌ ಮೀನುಗಾರಿಕೆ ಸಚಿವ ಎಸ್.ಅಂಗಾರ ಹೇಳಿದರು.

Ad Widget . Ad Widget .

ಅವರು ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದಲ್ಲಿ ಮಾತನಾಡುತ್ತಾ, ‘ಸಚಿವನಾಗಿ ನಾನು ಕಾರ್ಯಕ್ಷೇತ್ರದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದೇನೆ, ಮುಂದೆಯೂ ಮಾಡಬಲ್ಲೆ, ನನ್ನನ್ನು ಯಾರೂ ಕೇವಲವೆಂದು ಭಾವಿಸಬಾರದು, ರಾಜಕೀಯ ಹೊರತಾಗಿಯೂ ನಾನು ಜನಸಾಮಾನ್ಯನಂತೆ ಜೀವಿಸಬಲ್ಲೆ, ನಿಮ್ಮಿಂದ ಅದು ಸಾಧ್ಯವಿದೆಯೇ?’ ಎಂದು ಟೀಕಾಕಾರರನ್ನು ಕೆಣಕಿದರು.

Ad Widget . Ad Widget .

ಕ್ಷೇತ್ರದಲ್ಲಿ‌ ಹಲವು ಅಭಿವೃದ್ಧಿ ಕಾರ್ಯಗಳನ್ನು ‌ಮಾಡಲಾಗಿದ್ದು, ಶೀಘ್ರದಲ್ಲೇ ಸುಳ್ಯದಲ್ಲಿ 110kv ಸಬ್‌ಸ್ಟೇಷನ್ ಗೆ ಗುದ್ದಲಿ ಪೂಜೆ ಮಾಡಲಾಗುವುದು. ರಸ್ತೆ, ಸರ್ಕಾರಿ ಕಟ್ಟಡಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಶೀಘ್ರದಲ್ಲೇ ಗುತ್ತಿಗಾರು ಸರ್ಕಾರಿ ಪ.ಪೂ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.

Leave a Comment

Your email address will not be published. Required fields are marked *