ಸಮಗ್ರ ನ್ಯೂಸ್: ನಡೆದುಕೊಂಡು ಹೋಗುತ್ತಿದ್ದ ತಾಯಿ ಜೊತೆ ಇದ್ದ ಮಗುವಿಗೆ ಖಾಸಗಿ ಬಸ್ಸು ಬಡಿದು ಮಗು ಮೃತಪಟ್ಟ ದುರಂತ ಘಟನೆ ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿ ನಡೆದಿದೆ.
ಸೀತಾಂಗೋಳಿಯ ನಿವಾಸಿ ಆಶಿಕ್ ಮತ್ತು ಸುಬೈದಾ ದಂಪತಿ ಪುತ್ರ ವಾಹಿದ್(3) ಮೃತ ಮಗು. ಬಸ್ ಬಡಿಯುವಾಗ ಗಾಯಗೊಂಡು ಮಗುವಿನ ಜೊತೆಗಿದ್ದ ತಾಯಿ ಸುಬೈದಾ ಕೂಡ ಗಾಯಗೊಂಡಿದ್ದಾರೆ.
ಮೃತ ಮಗುವಿನ ಮೃತದೇಹವನ್ನು ಕಾಸರಗೊಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರಿಸಲಾಯಿತು.