Ad Widget .

ವಿಟ್ಲ: ಆಡು ಕಳ್ಳರನ್ನು ಹಿಡಿದ ಸಾರ್ವಜನಿಕರು

ಸಮಗ್ರ ನ್ಯೂಸ್: ಆಡುಗಳಿಗೆ ಹೊಂಚು ಹಾಕಿ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.

Ad Widget . Ad Widget .

ಸಾಲೆತ್ತೂರು ನಿವಾಸಿಗಳಾದ ಅಜೀಮ್‌ (19), ಅನಸ್ (19) ಪೊಲೀಸ್ ವಶವಾದವರು. ಪೆರುವಾಯಿ, ಅಡ್ಯನಡ್ಕ, ಕೇಪು, ಮರಕ್ಕಿಣಿ, ಅಳಿಕೆ ಮುಂತಾದ ಪ್ರದೇಶಗಳಿಂದ ಗುಡ್ಡಕ್ಕೆ ಮೇಯಲೆಂದು ಬಿಡುತ್ತಿದ್ದ ಆಡುಗಳು ನಾಪತ್ತೆಯಾಗುತ್ತಿದ್ದವು. ಆಡುಗಳ ನಾಪತ್ತೆ ಹಿಂದೆ ಖದೀಮರ ಕೈಚಳಕವನ್ನು ಪತ್ತೆ ಹಚ್ಚುವ ಸಲುವಾಗಿ ಆಡು ಮಾಲಕರು ಕಾಯುತ್ತಿದ್ದರು.

Ad Widget . Ad Widget .

ಶುಕ್ರವಾರ ಮುಂಜಾನೆ ಕಳ್ಳರ ಪತ್ತೆಗಾಗಿ ಮಾಲಕರು ಕಾಯುತ್ತಿದ್ದ ವೇಳೆ ಕೇಪು ಕಲ್ಲಂಗಳ ದ್ವಾರದ ಸಮೀಪ ಆಡು ಕಳ್ಳರಿಬ್ಬರು ಸಾರ್ವಜನಿಕರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.ಕೂಡಲೇ ಇಬ್ಬರನ್ನು ಹಿಡಿದುಕೊಂಡು ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ. ಆದರೆ ಠಾಣೆಯಲ್ಲಿ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *