Ad Widget .

ಮಂಗಳೂರು: ಹೆಲ್ಮೆಟ್ ಧರಿಸಿಲ್ಲವೆಂದು ಕಾರು ಮಾಲೀಕನಿಗೆ ನೋಟೀಸ್ ನೀಡಿದ ಟ್ರಾಫಿಕ್ ಪೊಲೀಸರು!!

ಸಮಗ್ರ ನ್ಯೂಸ್: ಹೆಲ್ಮೆಟ್​ ಧರಿಸದೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿ ನಿಯಮ‌ ಉಲ್ಲಂಘಿಸಿದರೆ ಟ್ರಾಫಿಕ್​ ಪೊಲೀಸರು ದಂಡ ಹಾಕೋದು ಸಾಮಾನ್ಯ. ಆದರೆ, ಅಟೋಮೇಶನ್​ನ ಎಡವಟ್ಟಿನಿಂದಾಗಿ ಮಂಗಳೂರಲ್ಲಿ ಕಾರು ಮಾಲೀಕರೊಬ್ಬರಿಗೆ ಹೆಲ್ಮಟ್​ ಧರಿಸಿಲ್ಲ ಎಂದು ಪೊಲೀಸರು ನೋಟಿಸ್​ ಕೊಟ್ಟಿದ್ದಾರೆ!

Ad Widget . Ad Widget .

ಮಂಗಳೂರು ನಗರದ ಮಂಗಳಾದೇವಿ ರಸ್ತೆಯಲ್ಲಿ ನ.29ರಂದು ಕಾರಿನ ಮಾಲೀಕರೊಬ್ಬರು ತೆರಳಿದ್ದು, ಅವರಿಗೆ ಸಂಚಾರಿ ಠಾಣೆಯಿಂದ ಸಹಸವಾರ ಹೆಲ್ಮೆಟ್​ ಹಾಕಿಲ್ಲ ಎಂಬ ಕಾರಣವೊಡ್ಡಿ ಡಿ.22ರಂದು 500ರೂ. ದಂಡದ ನೋಟಿಸ್​ ಹೋಗಿದೆ. ಇದನ್ನು ನೋಡಿ ಶಾಕ್​ ಆದ ಕಾರಿನ ಮಾಲೀಕರು ಪರಿಶೀಲನೆಗೆ ಮುಂದಾದಾಗ ಅಟೋಮೇಶನ್​ ಸೆಂಟರ್​ನಲ್ಲಿ ಎಡವಟ್ಟಾಗಿರುವುದು ಬಯಲಾಗಿದೆ.

Ad Widget . Ad Widget .

ಕಾರಿನ ಮಾಲೀಕರು ರಸ್ತೆಯಲ್ಲಿ ತೆರಳುತ್ತಿದ್ದಾಗ ಅದೇ ರಸ್ತೆಯಲ್ಲಿ ಇಬ್ಬರು ಯುವಕರು ಬೈಕ್​ನಲ್ಲಿ ತೆರಳುತ್ತಿದ್ದರು. ಇವರಲ್ಲಿ ಒಬ್ಬ ಹೆಲ್ಮೆಟ್​ ಧರಿಸದೆ ಚಲಿಸುತ್ತಿದ್ದು, ಆ ವಾಹನದ ಮೇಲೆ ದಂಡ ದಾಖಲಿಸಬೇಕಿತ್ತು. ಆದರೆ ಅಟೋಮೇಶನ್​ ಸೆಂಟರ್​ನಲ್ಲಿ ನಂಬರ್​ ಗಮನಿಸುವಲ್ಲಿ ಎಡವಟ್ಟಾಗಿದ್ದು, ಬೈಕ್​ನ ಬದಲು ಕಾರಿನ ನಂಬರ್​ ದಾಖಲಾಗಿದೆ. ಇದರಿಂದ ಕಾರಿನ ಮಾಲೀಕರಿಗೆ ದಂಡದ ನೋಟಿಸು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *