ಸಮಗ್ರ ನ್ಯೂಸ್: ಮಾರಕ ಕ್ಯಾನ್ಸರ್ ಜೊತೆಗೆ ಮೂತ್ರಪಿಂಡ ಹಾಗೂ ಹೃದಯದ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ, ಬ್ರೆಝಿಲ್ ನ ಫುಟ್ಬಾಲ್ ದಂತಕತೆ ಪೀಲೆ (82) ನಿಧನರಾಗಿದ್ದಾರೆ.
ತನ್ನ 16ನೇ ವಯಸ್ಸಿನಲ್ಲಿ ಬ್ರೆಝಿಲ್ ರಾಷ್ಟ್ರೀಯ ತಂಡದ ಪರ ಆಡಲು ಆರಂಭಿಸಿದ ಪೀಲೆ 1958, 1962 ಹಾಗೂ 1970ರಲ್ಲಿ ಬ್ರೆಝಿಲ್ ಫಿಫಾ ವಿಶ್ವಕಪ್ ಜಯಿಸಲು ಪ್ರಮುಖ ಪಾತ್ರವಹಿಸಿದ್ದರು. ಈ ಸಾಧನೆ ಮಾಡಿದ ಏಕೈಕ ಆಟಗಾರನಾಗಿದ್ದಾರೆ. ಬ್ರೆಝಿಲ್ ಪರವಾಗಿ ಅತ್ಯಂತ ಹೆಚ್ಚು ಗೋಲು(92 ಪಂದ್ಯಗಳಲ್ಲಿ 77 ಗೋಲು)ಗಳನ್ನು ಗಳಿಸಿರುವ ಪೀಲೆ ದಾಖಲೆಯನ್ನು ಇತ್ತೀಚೆಗೆ ವಿಶ್ವಕಪ್ ಟೂರ್ನಿಯಲ್ಲಿ ನೇಮರ್ (124 ಪಂದ್ಯಗಳಲ್ಲಿ 77 ಗೋಲು)ಸರಿಗಟ್ಟಿದ್ದಾರೆ.
2021ರ ಸೆಪ್ಟಂಬರ್ ನಲ್ಲಿ ಪೀಲೆ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ ದೊಡ್ಡ ಕರುಳಿನ ಕ್ಯಾನ್ಸರ್ ಗೆಡ್ಡೆಯನ್ನು ತೆಗೆಯಲಾಗಿತ್ತು. ಆದರೆ ಇತ್ತೀಚೆಗೆ ಅವರು ಕೋವಿಡ್-19 ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಮತ್ತೆ ಕ್ಯಾನ್ಸರ್ ಸಮಸ್ಯೆ ಕೂಡ ಮರುಕಳಿಸಿತ್ತು.