Ad Widget .

ಸುಳ್ಯದ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ರ‍್ಯಾಗಿಂಗ್‌| ಹಲ್ಲೆಗೊಳಗಾದ ವಿದ್ಯಾರ್ಥಿನಿಯಿಂದ ದೂರು ದಾಖಲು| ಪ್ರಾಂಶುಪಾಲರಿಂದ ಆರೋಪ ನಿರಾಕರಣೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರತಿಷ್ಠಿತ ಕೆವಿ‌ಜಿ ಡೆಂಟಲ್ ಕಾಲೇಜಿನಲ್ಲಿ ಸರ್ಕಾರಿ ಸೀಟ್ ವಿಚಾರವಾಗಿ ಡೆಂಡಲ್ ವಿದ್ಯಾರ್ಥಿನಿಗೆ ರ‍್ಯಾಗಿಂಗ್‌ ಮಾಡಿದ ಆರೋಪ ಕೇಳಿಬಂದಿದ್ದು, ಸುಳ್ಯ ಠಾಣೆಯಲ್ಲಿ ದೂರು ದಾಖಲಾದ ಬಗ್ಗೆ ವರದಿಯಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಆರು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿ, ಮೂರನೇ ವರ್ಷದ ಡೆಂಡಲ್ ವಿದ್ಯಾರ್ಥಿನಿಯೇ ರ‍್ಯಾಗಿಂಗ್‌ಗೆ ಒಳಗಾದ ಡೆಂಟಲ್ ವಿದ್ಯಾರ್ಥಿನಿ. ಇವರು ರ‍್ಯಾಂಕ್ ಹೋಲ್ಡರ್ ಆಗಿದ್ದಾರೆ.

Ad Widget . Ad Widget . Ad Widget .

ಕೇರಳ ಮೂಲದ ಆರು ವಿದ್ಯಾರ್ಥಿಗಳ ವಿರುದ್ಧ ರ‍್ಯಾಂಗಿಗ್ ಮತ್ತು ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಾಗಿದೆ. ಮೂರನೇ ವರ್ಷದ ಡೆಂಡಲ್ ವಿದ್ಯಾರ್ಥಿ ವಿಶಾಖ್, ಡಾ.ವಿಶಾಕ್, ಐಶ್ವರ್ಯ, ಐಲ್ಪಾ ಮೇರಿ ಮ್ಯಾಥ್ಯೂ, ಡೆನಲ್ ಸೆಬಾಸ್ಟಿಯನ್, ರಿಷಿಕೇಸ್, ದಯಾ ವರ್ಗೀಸ್ ವಿರುದ್ಧ ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಹಲ್ಲೆಗೊಳಗಾದ ಡೆಂಟಲ್ ವಿದ್ಯಾರ್ಥಿನಿ ಖಾಸಗಿ ವಾಹಿನಿಯೊಂದಕ್ಕೆ ಮಾಹಿತಿ ನೀಡಿದ್ದು, ಕೇರಳ ಮೂಲದ 6 ವಿದ್ಯಾರ್ಥಿಗಳಿಂದ ನಿರಂತರ ಕಿರುಕುಳ, ರಾಗಿಂಗ್ ಮಾತ್ರವಲ್ಲದೆ‌ ಹಲ್ಲೆಯನ್ನು‌ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಮೆರಿಟ್​ನಲ್ಲಿ ಕಾಲೇಜಿನಲ್ಲಿ ಸೀಟು ಪಡೆದಿದ್ದ ಪಲ್ಲವಿಯನ್ನು ಇದೇ ವಿಚಾರವಾಗಿ ಕಿರುಕುಳ ನೀಡುತ್ತಿದ್ದರೆಂದು ಆರೋಪ ಮಾಡಿದ್ದಾರೆ. ಈ ಸಂಬಂಧ ಪ್ರಾಂಶುಪಾಲರಿಗೆ ಮತ್ತು HODಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಿಲ್ಲ. ಡಿ. 21ನೇ ತಾರೀಖು ಅಣ್ಣ ಮತ್ತು ನನ್ನ ಮೇಲೆ ಹಲ್ಲೆ ಮಾಡಿದರು. ನಾನು ಮತ್ತು ನಮ್ಮಣ್ಣ ಊಟ ಮುಗಿಸಿ ವಾಪಸ್ ಬರುತ್ತಿದ್ದಾಗ ಕೆಟ್ಟ ಪದಗಳಿಂದ ನಿಂದನೆ ಮಾಡಿದರು. ಆ ಸಮಯದಲ್ಲಿ ನಮ್ಮ ಅಣ್ಣ ಪ್ರಶ್ನೆ ಮಾಡಿದ್ದಕ್ಕೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ನಾವು ಕೂಡಲೇ ಕಾಲೇಜು ಪ್ರಿನ್ಸಿಪಾಲ್ ಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದೆ. ಈ ಘಟನೆಯ ಬಗ್ಗೆ ಡಿಪಾರ್ಟ್‌ಮೆಂಟ್ HODಗೆ ತಿಳಿಸಿದ್ದೇವೆ. ಆದರೂ ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ಕಿರುಕುಳದಿಂದ ಮಾನಸಿಕ‌ ಖಿನ್ನತೆಗೆ ಒಳಗಾಗಿರೋ ಸಂತ್ರಸ್ತೆ ಬೆಂಗಳೂರಿನಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಬಲ ಕಿವಿ 62% ಕಿವುಡು ಹಾಗೂ ಮೂತ್ರದಲ್ಲಿ ರಕ್ತಸ್ರಾವ ಬಲಕೈ ಸ್ವಾಧೀನ ಕಳೆದುಕೊಂಡಿದೆ. ಇಷ್ಟಾದರೂ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.

ಒಟ್ಟು 3 ವರ್ಷಗಳ ಡೆಂಟಲ್ ಮೆಡಿಕಲ್ ಕೋರ್ಸ್​ನಲ್ಲಿ 6 ತಿಂಗಳ ಓದು ಬಾಕಿ ಇದೆ. ಮುಂದಿನ ತಿಂಗಳು ಪ್ರಾಯೋಗಿಕ ಪರೀಕ್ಷೆ ಇದೆ. ಮುಂದೆ ಕಾಲೇಜಿಗೆ ಹೋಗೊಕೆ ಭಯ ಆಗ್ತಿದೆ. ಮತ್ತೆ ಕಾಲೇಜಿಗೆ ಹೇಗೆ ಬರ್ತೀಯಾ ಬಾ ಅಂತ ಜೀವ ಬೆದರಿಕೆ ಹಾಕಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ ಆಗ್ಬೇಕು. ನನ್ನನ್ನ ಬೇರೆ ಕಾಲೇಜಿಗೆ ಶಿಫ್ಟ್ ಮಾಡಿ, ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ. ನಾನು ಮತ್ತೆ ಸುಳ್ಯದ ಕೆವಿಜಿ ಕಾಲೇಜಿಗೆ ಹೋದರೆ ಸಾಯಿಸಿಬಿಡ್ತಾರೆ ಎಂಬ ಭಯ ಇದೆ ಎಂದು ಹಲ್ಲೆಗೊಳಗಾದ ವಿದ್ಯಾರ್ಥಿನಿ ನೋವು ತೋಡಿಕೊಂಡಿದ್ದಾರೆ.

ಆದರೆ ಈ ಆರೋಪವನ್ನು ಕೆವಿಜಿ ಡೆಂಟಲ್ ಕಾಲೇಜಿನ ಆಡಳಿತ ಮಂಡಳಿಯ ನಿರಾಕರಿಸಿದೆ. ಕಾಲೇಜು ಆವರಣದಲ್ಲಿ ಯಾವುದೇ ರೀತಿಯ ರ‍್ಯಾಗಿಂಗ್‌ ಪ್ರಕರಣಗಳು ನಡೆದಿಲ್ಲ ಎಂದು ಕಾಲೇಜು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಟ್ಟಾರೆ ಪ್ರಕರಣದ ಕುರಿತಂತೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಂತರವಷ್ಟೇ ಸತ್ಯಾಸತ್ಯತೆ ಗೊತ್ತಾಗಬೇಕಿದೆ.

Leave a Comment

Your email address will not be published. Required fields are marked *