Ad Widget .

ಚಳಿಯಾದಾಗ ದೇಹ ನಡುಗುವುದೇಕೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮಳೆ ಹೋಗಿ ಇದೀಗ ಚಳಿಗಾಲ ಆರಂಭವಾಗಿದೆ. ಎಲ್ಲೆಡೆ ಮೈಕೊರೆಯುವ ಚಳಿ ಆರಂಭವಾಗಿದ್ದು, ಜನ ನಡುಗುತ್ತಿದ್ದಾರೆ. ಚಳಿಯ ತೀವ್ರತೆ ಎಲ್ಲರ ದೇಹದ ಮೇಲೆ ಒಂದೇ ತೆರನಾದ ಪರಿಣಾಮ ಬೀರುವುದಿಲ್ಲ. ಕೆಲವರಿಗೆ ಜಾಸ್ತಿ ಚಳಿಯಾದ್ರೆ ಇನ್ನು ಕೆಲವರಿಗೆ ಚಳಿ ಕಡಿಮೆ. ಇದಕ್ಕೆ ವೈಜ್ಞಾನಿಕ ಕಾರಣಗಳೇನು ಗೊತ್ತಾ?

Ad Widget . Ad Widget .

ನಮ್ಮ ದೇಹದಲ್ಲಿ ಚರ್ಮದ ಅಡಿಯಲ್ಲಿ ಥರ್ಮೋ-ರಿಸೆಪ್ಟರ್ ನರಗಳು ಇವೆ. ಇದು ಮೆದುಳಿಗೆ ಶೀತದ ಸಂದೇಶವನ್ನು ಕಳುಹಿಸುತ್ತದೆ. ನಂತರ ಮೆದುಳಿನಲ್ಲಿರುವ ಹೈಪೋಥಾಲಮಸ್ ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿ ಗೂಸ್‌ಬಂಪ್‌ಗಳು ಕಾಣಿಸಿಕೊಳ್ಳುತ್ತವೆ, ಸ್ನಾಯುಗಳು ಕುಗ್ಗಲು ಪ್ರಾರಂಭಿಸುತ್ತವೆ. ನಮಗೆ ಚಳಿಯ ಅನುಭವವಾಗುತ್ತದೆ.

Ad Widget . Ad Widget .

ಕೆಲವರಿಗೆ ಚಳಿ ಹೆಚ್ಚು, ಇನ್ನು ಕೆಲವರಿಗೆ ಕಡಿಮೆ ಏಕೆ ? :
ಅಧ್ಯಯನದ ಪ್ರಕಾರ ಚಳಿಯ ಅನುಭವ ಲಿಂಗ, ವಯಸ್ಸು ಮತ್ತು ಜೀನ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ಒಬ್ಬ ವ್ಯಕ್ತಿಯು ಎಷ್ಟು ಶೀತವನ್ನು ಅನುಭವಿಸುತ್ತಾನೆ ಎಂಬುದನ್ನು ಇದು ನಿರ್ಧರಿಸುತ್ತದೆ. ತಾಪಮಾನವನ್ನು ತಡೆದುಕೊಳ್ಳುವ ಮತ್ತು ಶೀತವನ್ನು ಅನುಭವಿಸುವ ಪ್ರತಿಯೊಬ್ಬರ ಸಾಮರ್ಥ್ಯವೂ ವಿಭಿನ್ನವಾಗಿರುತ್ತದೆ.ವಯಸ್ಸಾದವರಿಗೆ ಚಳಿ ಕಡಿಮೆ, ಯುವಕರು ಹೆಚ್ಚು ಚಳಿ ಅನುಭವಿಸುತ್ತಾರೆ ಎಂದು ಅಧ್ಯಯನವೊಂದರಲ್ಲಿ ಹೇಳಲಾಗಿದೆ. ತಾಪಮಾನ ಕಡಿಮೆ ಆಗುವವರೆಗೆ ವಯಸ್ಸಾದವರು ಚಳಿಯಿಂದ ನಡುಗುವುದಿಲ್ಲ, ಆದರೆ ಯುವಕರು ತಾಪಮಾನ ಸ್ವಲ್ಪ ಕಡಿಮೆಯಾದರೂ ನಡುಗಲು ಪ್ರಾರಂಭಿಸುತ್ತಾರೆ. ವಯಸ್ಸಾದವರಿಗೆ ಹೋಲಿಸಿದರೆ, ಯುವಕರು ಶೀತವನ್ನು ಅನುಭವಿಸುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದಾರೆ, ಇದು ವಯಸ್ಸಾದಂತೆ ಕ್ರಮೇಣ ಕಡಿಮೆಯಾಗುತ್ತದೆ.

ಚಳಿಯಲ್ಲಿ ದೇಹ ಏಕೆ ನಡುಗಲು ಪ್ರಾರಂಭಿಸುತ್ತದೆ ?:
ಪರಿಸರದ ಉಷ್ಣತೆಯು ಕಡಿಮೆಯಾದಾಗ ಮೆದುಳಿನಲ್ಲಿರುವ ಹೈಪೋಥಾಲಮಸ್ ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಪ್ರಾರಂಭಿಸುತ್ತದೆ ಮತ್ತು ದೇಹದ ಭಾಗಗಳು ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಕಾರಣದಿಂದಾಗಿ, ದೇಹದಲ್ಲಿ ಹೆಚ್ಚಿನ ಚಯಾಪಚಯ ಶಾಖವು ಉತ್ಪತ್ತಿಯಾಗುತ್ತದೆ, ಇದೇ ಕಾರಣಕ್ಕೆ ದೇಹದಲ್ಲಿ ನಡುಕ ಪ್ರಾರಂಭವಾಗುತ್ತದೆ. ತಾಪಮಾನವು ಸಮತೋಲನಗೊಂಡ ನಂತರ ನಡುಕ ನಿಲ್ಲುತ್ತದೆ ಅಥವಾ ಕಡಿಮೆಯಾಗುತ್ತದೆ.

ಹೆಚ್ಚು ಚಳಿಯ ಅನುಭವವಾಗುವುದೇಕೆ ? :
ಕೆಲವರಿಗೆ ಅತಿಯಾಗಿ ಚಳಿಯಾಗುತ್ತದೆ, ಇದಕ್ಕೆ ಹಲವು ಕಾರಣಗಳಿರಬಹುದು. ಉದ್ದಕ್ಕೆ ಅನುಗುಣವಾಗಿ ದೇಹದ ತೂಕವು ತುಂಬಾ ಕಡಿಮೆಯಿದ್ದರೆ ಹೆಚ್ಚು ಚಳಿಯಾಗುತ್ತದೆ. ದೇಹದಲ್ಲಿ ಕಬ್ಬಿಣದ ಕೊರತೆ ಮತ್ತು ಥೈರಾಯ್ಡ್ ನಿಂದಲೂ ಅತಿಯಾದ ಶೀತವಾಗುವುದುಂಟು. ದೇಹದ ಎಲ್ಲಾ ಭಾಗಗಳಲ್ಲಿ ಸರಿಯಾದ ರಕ್ತ ಪರಿಚಲನೆ ಇಲ್ಲದಿದ್ದರೂ ವಿಪರೀತ ಚಳಿಯಾಗುತ್ತದೆ. ನಿದ್ರೆಯ ಕೊರತೆ, ನಿರ್ಜಲೀಕರಣ ಮತ್ತು ವಿಟಮಿನ್ ಬಿ ಕೊರತೆ ಕೂಡ ಅತಿಯಾದ ಶೀತಕ್ಕೆ ಕಾರಣವಾಗಬಹುದು.

Leave a Comment

Your email address will not be published. Required fields are marked *